Monday, February 24, 2025

ಸತ್ಯ | ನ್ಯಾಯ |ಧರ್ಮ

ಕುಂಬಮೇಳ ಕುರಿಗಳು ಸರ್ ಕುರಿಗಳು ಎಂಬಂತೆ ಕಾಣುತ್ತಿದೆ – ಡಾ. ಹೆಚ್.ಎಸ್. ನಿರಂಜನಾರಾಧ್ಯ

ಹಾಸನ : ಇನು 15 ವರ್ಷದಲ್ಲಿ ವೈದ್ಯರಿಗೆ ಕೆಲಸವೇ ಇರುವುದಿಲ್ಲ. ಆದರೇ ಎಲ್ಲಾ ಕೆಲಸವನ್ನು ರೊಬರ್ಟ್ ನಿರ್ವಹಿಸುವ ಟೆಕ್ನಾಲಜಿ ಬೆಳೆಯಲಿದೆ. ಇನ್ನು ಕುಂಭ ಮೇಳದಲ್ಲಿ ಕುರಿಗಳ್ ಸಾರ್ ಕುರಿಗಳ್ ಎಂಬಂತೆ ಕಾಣಿಸಿತು. ಈ ನಿಟ್ಟಿನಲ್ಲಿ ಜ್ಞಾನ ವಿಜ್ಞಾನದಲ್ಲಿ ಎಲ್ಲಾವುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತುಮಕೂರು ಧವಳ ಪಿಯು ಕಾಲೇಜು ಪ್ರಾಂಶುಪಾಲ ಡಾ. ಹೆಚ್.ಎಸ್. ನಿರಂಜನಾರಾಧ್ಯ ತಿಳಿಸಿದರು. ನಗರದ ಎಂ.ಜಿ. ರಸ್ತೆ ಬಳಿ ಇರುವ ಗಾಂಧಿ ಭವನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ಕಾರ್ಯಕರ್ತರ 9ನೇ ಜಿಲ್ಲಾ ಸಮ್ಮೇಳನವನ್ನು ವಿಜ್ಞಾನದ ರೀತಿ ಉದ್ಘಾಟಿಸಿ ಮಾತನಾಡಿದ ಅವರು, ಈ ಜಗತ್ತಿಗೆ ಮುಖ್ಯವಾಗಿ ಬೇಕಾಗಿರುವುದು ಜ್ಞಾನ. ಜ್ಞಾನ, ವಿಜ್ಞಾನವನ್ನು ಕಲಿಯಬೇಕಾದರೇ ಪ್ರಮುಖವಾಗಿ ಮಾತೃ ಭಾಷೆಯಿಂದ ಮಾತ್ರ ಸಾಧ್ಯ. ಶಿಕ್ಷಣ ಕಲಿತರೇ ಹೆಚ್ಚು ಅಭಿವೃದ್ಧಿ ಕಾಣಬಹುದಾಗಿದೆ. ವಿಜ್ಞಾನವನ್ನು ಕಲೆ ಮೂಲಕ ಕಲಿಯಬೇಕು. ಹಾಡು, ಲಾವಣಿ, ಕಿರು ನಾಟಕದ ಮೂಲಕ ಅನೇಕು ವಿಚಾರಗಳನ್ನು ತಿಳಿಸಲಾಯಿತು.

ಪುಣ್ಯಪಡೆದು ಮುಂದಿನ ಜನ್ಮ ಅತ್ಯುತ್ತಮ ಆಗುವುದಕ್ಕೆ ಎಂದು ಕುಂಬಮೇಳಕ್ಕೆ ಅನೇಕರು ಇಲ್ಲಿಂದಲು ಕೂಡ ಹೋದರು. ಕುರಿಗಳು ಸರ್ ಕುರುಗಳು ಎನ್ನುವ ಪದಗಳನ್ನು ಕೇಳಿದ್ದೇವೆ. ಆ ರಿತಿ ಒಬ್ಬರೂ ಹೋದಂತೆ ಎಲ್ಲಾರೂ ಹಿಂದೆ ಹೋದರು. ಕಳೆದ ಒಂದು ವರ್ಷದಲ್ಲಿ ಆಚರ್ಯರು, ಗುರುಜಿಗಳು, ಸ್ವಾಮೀಜಿಗಳು ಹೆಚ್ಚು ಪ್ರಮಾಣದಲ್ಲಿ ಕಾಣಿಸುತ್ತಿದ್ದಾರೆ. ಸಾಮೂಹಿಕ ಡಿಜಿಟಲ್ ಮಾಧ್ಯಮ ಎಂಬುದು ಜನರನ್ನು ಹೆಚ್ಚು ದಾರಿ ತಪ್ಪಿಸುತ್ತಿದೆ. ಏಳನೇ ಕ್ಲಾಸಿನಿಂದ ಮೊಬೈಲ್ ಹಿಡಿದುಕೊಂಡರೇ ಬಿಇ. ಎಂಬಿಬಿಎಸ್, ಡಿಗ್ರಿ ಆಗುವವರೆಗೂ ಮೊಬೈಲ್ ಬಿಡುವುದಿಲ್ಲ. ಕಲಿಕ ಏಕಾಗ್ರತೆ ಕೇವಲ ೬೦ ಸೆಕೆಂಡ್, ಆರು ಸೆಕೆಂಡಿಗೆ ಇಳಿಯುತ್ತಿದೆ. ಮೊದಲು ಆರು ನಿಮಿಷಕ್ಕೆ ಇಳಿಯುತಿತ್ತು ಎಂದರು. ಪ್ರತಿಯೊಬ್ಬರೂ ಅಕ್ಷರ ಕಲಿಯಬೇಕು ಎನ್ನುವ ಜನಾಂದೋಲನ ಮಾಡಲಾಯಿತು.

ಭಾರತ ಜ್ಞಾನ ವಿಜ್ಞಾನ ಸಮಿತಿ. ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರುತ್ತಿದೆ. ಕುಂಭಮೇಳಕ್ಕೆ ಅನೇಕರು ಹೋಗಿದ್ದು, ಇಲ್ಲಿ ಅರ್ಥಿಕವಾದ ಸಮಸ್ಯೆ ಇದೆ. ನಲವತ್ತು ಸಾವಿರ ಕೋಟಿ ಖರ್ಚು ಮಾಡಿದ್ದು, ಎಲ್ಲಾ ನಾರಿಯರು ಬಂದು ಸೇವೆ ಮಾಡಿ ವಿಸ್ಮಯಕ್ಕೆ ಒಳಗಾಗುತ್ತಿದ್ದಾರೆ. ಇತ್ತಿಚಿಗೆ ಫಿಟ್ನೆಸ್ ಹೆಚ್ಚಾಗಿದೆ. ಗಲ್ಲಿ ಗಲ್ಲಿಯಲ್ಲೂ ಎದ್ದಿದೆ. ನಮ್ಮ ಫಿಲಂ ಹೀರೋ ಗಳಲ್ಲಿ ಇರುವಾಗೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೇ ಹಿಂದಿನ ದಿನಗಳಲ್ಲಿ ಇವೆಲ್ಲಾ ಇಲ್ಲದಿದ್ದರೂ ಆರೋಗ್ಯಕರವಾಗಿಯೇ ಇದ್ದರು. ಸೈಬರ್ ಕ್ರೈಮ್ ಹೆಚ್ವಾಗಿದೆ. ವೈಜ್ನಾನಿಕ ಮನೋಭಾವ ಕಲಿಸುವ ಅಗತ್ಯತೆ ಇದ್ದು, ಇದು ಪ್ರತಿ ನಾಗರಿಕನ ಕರ್ತವ್ಯ. ಹಣವಂತರಿಗೆ ಮಾತ್ರ ಸಿಬಿಎಸ್ಸಿ, ಶಾಲೆ, ಸರಕಾರಿ ಶಾಲೆಯಲ್ಲಿ ಉಳಿದ ಮಕ್ಕಳು ಏಕೆ. ಶಿಕ್ಷಣದಲ್ಲಿ ಅಸಮಾನತೆ ಏಕೆ? ಈ ಬಗ್ಗೆ ಪ್ರಶ್ನೆ ಮಾಡುವವರು ಯಾರು ಇಲ್ಲವೇ? ಸತ್ಯಶೋಧನೆ ಮಾಡಬೇಕಾದರೇ ವಿಜ್ಞಾನದಿಂದ ಮಾತ್ರ ಸಾಧ್ಯ. ವೈಜ್ಞಾನಿಕ ಮನೋಭವ ಇದ್ದರೇ ಎಲ್ಲಾವೂ ತಿಳಿಯಲಿದೆ.

ಇಡೀ ವಿಶ್ವದಲ್ಲೇ ಸಿಡಿಬು, ಪೋಲಿಯೊ ತೆಗೆಯಲು ಸಾದ್ಯವಾಯಿತೆ! ಕೊರೋನಾ ವೇಳೆ ವ್ಯಾಕ್ದೀನ್ ನೋಡಿದ ಭಯದಲ್ಲಿ ಅನೇಕರು ಸಾವನಪ್ಪಿದ್ದಾರೆ. ಹತ್ತು ಹದಿನೈದು ವರ್ಷದಲ್ಲಿ ವೈದ್ಯರಿಗೆ ಕೆಲಸ ಇಲ್ಲದಾಗಬಹುದು, ಎಲ್ಲಾವನ್ನು ರೊಬರ್ಟ್ ಕೆಲಸ ಮಾಡಲಿದೆ. ಇಂತಹ ಕಾಲಕ್ಕೆ ನಾವು ಕಾಲಿಡುತ್ತಿದ್ದೇವೆ. ನಾವು ಜ್ಞಾನ ವಂತರಾಗಬೇಕಾದರೇ ಬರುವ ವಿಜ್ಞಾನದ ಬಗ್ಗೆ ತಿಳಿಯಬೇಕು. ಪ್ರಸ್ತುತದಲ್ಲಿ ಅನೇಕ ವ್ಯತ್ಯಾಸ ಹೆಚ್ಚಾಗುತ್ತಿದೆ. ಜಾಗುತಿಕ ತಾಪಮಾನದ ಬಗ್ಗೆ ನಿಯಂತ್ರಣ ಮಾಡುವ ಬಗ್ಗೆ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ. ಸತ್ಯದ ಬಗ್ಗೆ ಅರಿವು ಮತ್ತು ವಿಜ್ಞಾನ ಬಗ್ಗೆ ಜ್ಞಾನ ಪಡೆಯುವಂತೆ ಕರೆ ನೀಡಿದರು.ಡಾ. ಎ. ಸಾವಿತ್ರಿ ಅವರು ಕೆ.ಎಸ್. ರವಿಕುಮಾರ್ ವಿರಚಿತ ಬಿಜಿವಿಎಸ್ ಪ್ರಕಟಿತ ಹವಾಮಾನ ಬದಲಾವಣೆ ಬೇಕೆ ಈ ದಿನಗಳು ಪುಸ್ತುಕ ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು, ಹವಮಾನ ವೈಫರಿತ್ಯದಿಂದ, ಬದಲಾವಣೆಯಿಂದ ಸಮಸ್ಯೆಗಳು ಎದುರಾಗುತ್ತಿದೆ ಎನ್ನುವುದನ್ನು ತಿಳಿಯಬೇಕಾಗಿದೆ. ಹಸಿರು ಮನೆ ಅನಿಲಗಳು ಹೇಗೆ ನಮ್ಮ ಭೂಮಿಯನ್ನು ಹೇಗೆ ಶಾಕವನ್ನು ಹೆಚ್ಚು ಮಾಡುತ್ತಿದೆ? ಎಲ್ಲಾವನ್ನು ಅರ್ಥ ಮಾಡಿಕೊಂಡರೇ ಸಮಾಜದಲ್ಲಿ ಉತ್ತಮ ವಾತವರಣ ತರಬಹುದು ಎಂದರು.



ಕಾರ್ಯಕ್ರಮದಲ್ಲಿ ಟೀಚರ್ ಮಾಸಪತ್ರಿಕೆ ಸಂಪಾದಕ ಉದಯ್ ಗಾಂವ್ಕರ್, ಸರಕಾರಿ ಪದವಿಪೂರ್ವ ಕಾಲೇಜು ಆಲೂರಿನ ಉಪನ್ಯಾಸಕರು ಕೆ. ರೋಹಿತ್, ಸಾಮಾಜಿಕ ಕಾರ್ಯಕರ್ತೆ ಕವಯತ್ರಿ ರೂಪ ಹಾಸನ್, ಕೃತಿಕರರಾದ ಕೆ.ಎಸ್. ರವಿಕುಮಾರ್, ಬಿಜಿವಿಎಸ್. ಪ್ರಧಾನ ಕಾರ್ಯದರ್ಶಿ ಟಿ.ಎ. ಪ್ರಶಾಂತಬಾಬು, ಬಿಜಿವಿಎಸ್ ಹೆಚ್.ಟಿ. ಗುರುರಾಜು, ಅಹಮದ್ ಹೆಗರೆ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page