ದೆಹಲಿ: ಎಲ್ 2 ಎಂಪುರಾನ್ ಚಿತ್ರದ ನಿರ್ಮಾಪಕರ ವಿರುದ್ಧ ಕೇಂದ್ರದ ತನಿಖಾ ಸಂಸ್ಥೆಯೊಂದು ದಾಳಿ ನಡೆಸಿದೆ. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಿಗೆ ಸೇರಿದ ಹಣಕಾಸು ಸೇವೆಗಳ ಕಂಪನಿಗೋಕುಲ್ ಚಿಟ್ ಫಂಡ್‌ನ ತಮಿಳುನಾಡು ಮತ್ತು ಕೇರಳ ಕಚೇರಿಗಳಲ್ಲಿ ಶುಕ್ರವಾರ ಬೆಳಿಗ್ಗೆ ಜಾರಿ ನಿರ್ದೇಶನಾಲಯ (ED) ಶೋಧ ನಡೆಸಿತು.
ಕಳೆದ ತಿಂಗಳು ಬಿಡುಗಡೆಯಾದ ಈ ಚಿತ್ರದಲ್ಲಿ 2002ರ ಗುಜರಾತ್ ಗಲಭೆಯ ಚಿತ್ರಣಕ್ಕೆ ಬಿಜೆಪಿ ಮುನಿಸಿಕೊಂಡಿದೆ. ಈ ಚಿತ್ರವು ಹಿಂದೂ ವಿರೋಧಿ ಕಾರ್ಯಸೂಚಿಯನ್ನು ಉತ್ತೇಜಿಸುತ್ತದೆ ಎಂದು ಅದು ಆರೋಪಿಸಿದೆ.
ಕಳೆದ ವಾರ, ನಿರ್ಮಾಪಕರು ಗೋಧ್ರಾ ಗಲಭೆ ಸೇರಿದಂತೆ 17 ದೃಶ್ಯಗಳನ್ನು ಸೆನ್ಸಾರ್ ಮಾಡುವುದಾಗಿ, ಬಾಬಾ ಬಜರಂಗಿ ಹೆಸರನ್ನು ಬದಲಾಯಿಸುವುದಾಗಿ ಮತ್ತು ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡುವುದಾಗಿ ಘೋಷಿಸಿದರು.
ಕೇರಳ ಸರ್ಕಾರ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಚಿತ್ರದ ನಿರ್ಮಾಪಕರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ. ಈ ಚಿತ್ರವು ಸಂಘ ಪರಿವಾರದ ಕಾರ್ಯಸೂಚಿಯನ್ನು ಬಹಿರಂಗಪಡಿಸುತ್ತದೆ ಎಂದು ಈ ಪಕ್ಷಗಳು ಹೇಳಿವೆ.
ಈ ಚಿತ್ರಕ್ಕೆ ಸಂಘ ಪರಿವಾರ ಹೆದರಿಕೊಂಡಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.