ಹಾಸನ : ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂ ಕುಸಿತವಾಗಿರುವ ಪ್ರದೇಶಗಳಿಗೆ ಇಂದು ಸಂಸದರಾದ ಶ್ರೇಯಸ್ ಪಟೇಲ್‌ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆತೊಂದರೆಯಾಗದಂತೆ ಹಾಗೂ ಸುಗಮ ಸಂಚಾರಕ್ಕೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಇನ್ನುಎರಡು ಕಿ.ಮೀ ರಸ್ತೆಕಾಮಗಾರಿಗೆ ಭೂಕುಸಿತವೇ ದೊಡ್ಡ ಸವಾಲಾಗಿದೆ, ತಡೆಗೊಡೆಕಟ್ಟಿರುವ ಕೆಲವು ಕಡೆಗಳಲ್ಲಿ ಮಣ್ಣು ಕುಸಿದಿದ್ದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಜವಾಬ್ದಾರಿಯುತವಾಗಿ ಕೆಲಸ ನಿರ್ವಹಣೆ ಮಾಡುವಂತೆ ಎನ್.ಹೆಚ್.ಎ.ಐ ಅಧಿಕಾರಿಗಳಿಗೆ ಸೂಚಿಸಿದರು.
ಈ ಬಾರಿಯೂಕೂಡ ಭೂ ಕುಸಿತ ಉಂಟಾಗಿದೆಆದರೆ ಕಳೆದ ಬಾರಿ ಮುಂಜಾಗ್ರತ ಕ್ರಮವನ್ನುಕೈಕೊಂಡಿದ್ದರಿಂದ ಆನೆ ಮಹಲ್ ಹಾಗೂ ಮತ್ತಿತರ ಸ್ಥಳಗಳಲ್ಲಿ ಸ್ವಲ್ಪ ಭೂ ಕುಸಿತ ಉಂಟಾಗುತ್ತಿರುವುದರಿಂದ ಉಪ ವಿಭಾಗಾಧಿಕಾರಿ ಹಾಗೂ ಎನ್.ಹೆಚ್.ಎ.ಐ ಪ್ರಾಧಿಕಾರದ ಅಧಿಕಾರಿಗಳು ಮುನ್ನೆಚ್ಚರಿಕೆಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.ನಾವು ಕಳೆದ ಬಾರಿ ಭೇಟಿ ನೀಡಿದಾಗ ಹಾಗೂ ಇಂದು ಭೇಟಿ ನೀಡಿ ನೋಡಿದಾಗ ಸಾಕಷ್ಟು ಕೆಲಸಗಳಾಗಿವೆ. ಆದರೂ ಯಾವ ರೀತಿಯಾಗಿ ವಿಫಲರಾಗಿದ್ದಾರೆ ಎಂದು ಪರಿಶೀಲಿಸಿದಾಗ ಮಣ್ಣು ಬಹಳ ತೇವಾಂಶಯುತವಾಗಿರುವುದರಿಂದ ಕುಸಿತ ಉಂಟಾಗುತ್ತಿದೆ, ಹೆದ್ದಾರಿಯ ಬಲಭಾಗದಲ್ಲಿ ರಸ್ತೆ ಸಂಚಾರಕ್ಕೆದಾರಿ ಮಾಡಿಕೊಡುತ್ತೇವೆ ಒಟ್ಟಾರೆಯಾಗಿ ಸಾರ್ವಜನಿಕರಿಗೆ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಕೇಂದ್ರ ಸಾರಿಗೆ ಸಚಿವರನ್ನು ಈಗಾಗಲೇ ಭೇಟಿ ಮಾಡಿದ್ದು, 13 ಕೋಟಿಯ ವೈಜ್ಞಾನಿಕ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಈಗಾಗಲೇ ಟೆಂಡರ್‌ಕೂಡಾಕರೆಯಲಾಗಿದೆ. ವೆಸ್ಟ್ ಬೆಂಗಾಲ್ ಮಾದರಿಯಲ್ಲಿ ಟರ್ಫಿಂಗ್ ಕೆಲಸ ಮಾಡಲು ಏಜೆನ್ಸಿ ಕೂಡ ಫಿಕ್ಸ್ಆಗಿದೆ ಎಂದ ಅವರು ಕೆಲಸ ಮುಂದಿನ ಮಾನ್ಸೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಮುಂದೆ ಯಾವುದೇ ರೀತಿಯ ಭೂ ಕುಸಿತ ಉಂಟಾಗುವುದಿಲ್ಲ ಎಂದು ತಿಳಿಸಿದರು.ಯಾವುದೇ ರೀತಿಯ ಪ್ರಾಣಪಾಯವಾಗದ ರೀತಿಯಲ್ಲಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲು ನಾವೆಲ್ಲರೂ ಸನ್ನಧ್ಧರಾಗಿದ್ದೇವೆ ಎಂದು ಹೇಳಿದರು.ಕಾಮಗಾರಿ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ, ಕಳಪೆ ಕಾಮಗಾರಿ ಮಾಡಿದ್ದರೆ ಪರಿಶೀಲಿಸಿ ಅದರ ಸತ್ಯತೆಯನ್ನು ತಿಳಿದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು ಮಳೆಯ ಕಾಲ ಮುಗಿಯುವವರೆಗೂ ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದರು. ಉಪ ವಿಭಾಗಾಧಿಕಾರಿ ಶೃತಿ, ಎನ್‌ಹೆಚ್.ಎ.ಐ ಅಧಿಕಾರಿಗಳು ಹಾಜರಿದ್ದರು.