ದೇಶದಲ್ಲಿ 6ನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ

ನಾಗ್ಪುರ : ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ಭಾನುವಾರದಂದು ದೇಶದಲ್ಲಿ ಆರನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ್ದಾರೆ.

ಇಂದು ಚಾಲನೆ ನಾಗ್ಪುರದಲ್ಲಿ ಚಾಲನೆ ನೀಡುವ ಆರನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ನಾಗ್ಪುರ ಮತ್ತು ಬಿಲ್ಸಾಪುರ ನಡುವೆ ಚಲಿಸಲಿದೆ.

ಈ ಮೊದಲು ಚಾಲನೆ ನೀಡಿದ ಐದನೇ ವಂದೇ ಭಾರತ್‌ ಎಕ್ಸ್‌ಪ್ರಸ್‌ ರೈಲು ದಕ್ಷಿಣ ಭಾರತದ ಚೆನ್ನೈ, ಬೆಂಗಳೂರು, ಮೈಸೂರು ನಡುವೆ ಒಟ್ಟು 483ಕಿಮೀ ನಷ್ಟು ದೂರವನ್ನು ಕ್ರಮಿಸುತ್ತಿದೆ.

ನವೆಂಬರ್‌ 11ರಂದು ಚಾಲನೆಗೊಂಡ ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರು ಮಾರ್ಗವಾಗಿ ಚೆನ್ನೈನಿಂದ ಮೈಸೂರಿಗೆ ಓಡಾಡುತ್ತಿದ್ದು, ಅಲ್ಪ ಕಾಲದಲ್ಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.

ಹಿಮಾಚಲ ಪ್ರದೇಶದಲ್ಲಿ ನಾಲ್ಕನೇ ವಂದೇ ಭಾರತ್ ಎಕ್ಸ್ ಪ್ರೆಸ್‌ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ಇತರ ಮೂರು ರೈಲುಗಳು ನವದೆಹಲಿಯಿಂದ ವಾರಣಾಸಿ , ನವದೆಹಲಿ – ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ಮತ್ತು ಗಾಂಧಿನಗರ – ಮುಂಬೈನ ಮಧ್ಯೆ ಚಾಲನೆಯಲ್ಲಿವೆ.

ಹೊಸ ವಂದೇ ಭಾರತ್‌ ರೈಲು ಹಿಂದಿನ ರೈಲುಗಳಿಗೆ ಹೋಲಿಸಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗವನ್ನು ತಲುಪುತ್ತಿದೆ. ಈ ರೈಲು ಮೂರು ಗಂಟೆಗಳ ಬ್ಯಾಟರಿ ಬ್ಯಾಕಪ್‌ನೊಂದಿಗೆ ಕೋಚ್ ಗಳು ಡಿಸಾಸ್ಟರ್‌ ಲೈಟ್ ಗಳನ್ನು ಹೊಂದಿದೆ.

Related Articles

ಇತ್ತೀಚಿನ ಸುದ್ದಿಗಳು