Home ಬ್ರೇಕಿಂಗ್ ಸುದ್ದಿ ಜ್ಞಾನಪ್ರಕಾಶ್ ಸ್ವಾಮೀಜಿಯಿಂದ ನ್ಯಾಯಾಂಗ ನಿಂದನೆ ಆರೋಪ, ವಕೀಲರ ಪ್ರತಿಭಟನೆ

ಜ್ಞಾನಪ್ರಕಾಶ್ ಸ್ವಾಮೀಜಿಯಿಂದ ನ್ಯಾಯಾಂಗ ನಿಂದನೆ ಆರೋಪ, ವಕೀಲರ ಪ್ರತಿಭಟನೆ

ಮನವಿ ಸ್ವೀಕರಿಸದ ಡಿಸಿ ವಿರುದ್ಧ ರಸ್ತೆತಡೆ ನಡೆಸಿ ಆಕ್ರೋಶ

ಹಾಸನ : ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಜ್ಞಾನಪ್ರಕಾಶ್ ಸ್ವಾಮೀಜಿಯ ವಿಚಾರದಲ್ಲಿ ವಕೀಲರ ಸಂಘದಿಂದ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ನೂರಾರು ವಕೀಲರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಆಗಮಿಸಿದರೂ, ಕಚೇರಿಯಲ್ಲಿದ್ದ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಲು ಹೊರಗೆ ಬಾರದ ಹಿನ್ನೆಲೆಯಲ್ಲಿ ವಕೀಲರು ಆಕ್ರೋಶಗೊಂಡು ರಸ್ತೆತಡೆ ನಡೆಸಿದಲ್ಲದೇ ಎನ್.ಆರ್. ವೃತ್ತದಲ್ಲಿ ರಸ್ತೆ ತಡೆ ಮಾಡುವುದಾಗಿ ಎಚ್ಚರಿಸಿದರು.

  ವಕೀಲರ ಸಂಘದ ಅಧ್ಯಕ್ಷ ಮೊಗಣ್ಣಗೌಡ ಮತ್ತು ವಕೀಲ ಶ್ರೀಕಾಂತ್ ಇತರರು ಮಾಧ್ಯಮದೊಂದಿಗೆ ಮಾತನಾಡಿ, ಉರಿಲಿಂಗ ಪೆದ್ದಿಮಠದ ಜ್ನಾನಪ್ರಕಾಶ್ ಸ್ವಾಮೀಜಿ ಹೇಳಿಕೆಗೆ ನಮ್ಮ ವಿರೋಧವಿದೆ. ಅವರ ವಿರುದ್ಧ ಕೂಡಲೇ ಸೂಕ್ರ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ನ್ಯಾಯಾಲಯದ ಕಲಾಪವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಜ್ಞಾನಪ್ರಕಾಶ್ ಸ್ವಾಮೀಜಿಯ ವಿಚಾರದಲ್ಲಿ ಜಿಲ್ಲೆಯ ಉಸ್ತುವಾರಿ ಅಧಿಕಾರಿಗೆ ಮನವಿ ನೀಡಲು ಬಂದಿದ್ದೇವೆ. ಆದರೆ ಜಿಲ್ಲಾಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ಇದು ವಕೀಲರ ಗೌರವಕ್ಕೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಕೀಲರು ಜಿಲ್ಲಾಧಿಕಾರಿ ಕಛೇರಿ ಎದುರು ಬಿ.ಎಂ. ರಸ್ತೆಗೆ ಬಂದು ನಮ್ಮ ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದು, ಡಿಸಿ ಕಚೇರಿ ಎದುರಿನ ಬಿ.ಎಂ. ರಸ್ತೆಯನ್ನು ಒಂದು ಗಂಟೆಗೂ ಹೆಚ್ಚು ಕಾಲ ತಡೆಹಿಡಿದರು. ಪ್ರತಿಭಟನೆಯಲ್ಲಿ ದುರಹಂಕಾರಿ ವರ್ತನೆ ಪ್ರದರ್ಶಿಸಿರುವ ಜಿಲ್ಲಾಧಿಕಾರಿ ಕೆಳಗಿಳಿಯಲಿ” ಎಂಬ ಘೋಷಣೆಗಳು ಮೊಳಗಿದವು. ಜಿಲ್ಲಾಧಿಕಾರಿ ತಕ್ಷಣವೇ ಪ್ರತಿಭಟನಾ ಸ್ಥಳಕ್ಕೇ ಬಂದು ಮನವಿ ಸ್ವೀಕರಿಸಬೇಕೆಂದು ವಕೀಲರು ಆಗ್ರಹಿಸಿದರು. ಮನವಿ ಸ್ವೀಕರಿಸದ ಹಿನ್ನೆಲೆಯಲ್ಲಿ ವಕೀಲರು ಜಿಲ್ಲಾಧಿಕಾರಿಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡುವುದಾಗಿ ಎಚ್ಚರಿಸಿದರು.

ವಕೀಲರ ಸಂಘದ ಮುಖಂಡರು ಗುರುವಾರವೂ ಪ್ರತಿಭಟನೆಯನ್ನು ಮುಂದುವರೆಸಿ, ನಗರದ ಎನ್.ಆರ್. ವೃತ್ತದಲ್ಲಿಯೂ ರಸ್ತೆತಡೆ ನಡೆಸುವ ನಿರ್ಧಾರ ಪ್ರಕಟಿಸಿದರು. ಈ ವೇಳೆ ಜಿಲ್ಲಾಧಿಕಾರಿಗಳು ಇಲ್ಲಿಗೆ ಬಂದು ನಮ್ಮ ಮನವಿ ಸ್ವೀಕರಿಸಲೇಬೇಕು ಎಂದು ಒತ್ತಾಯಿಸಿದರು. ವಕೀಲರು ಜಿಲ್ಲಾಧಿಕಾರಿಯ ವರ್ತನೆಯನ್ನು “ದುರಹಂಕಾರಿ, ಅಸಹಕಾರದ” ಎಂದು ಬಣ್ಣಿಸಿ, ಅವರನ್ನು ಕೂಡಲೇ ವರ್ಗಾವಣೆಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.ಬಿ.ಎಂ. ರಸ್ತೆ ಮಧ್ಯೆ ಪ್ರತಿಭಟನೆ ಮಾಡಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸಬೇಕಾಯಿತು. ತುರ್ತಾಗಿ ತಲುಪಬೇಕಾದವರು ಪರದಾಡಿದರು.

You cannot copy content of this page

Exit mobile version