JNU ಸ್ಟೂಡೆಂಟ್ಸ್ ಯೂನಿಯನ್ (JNUSU) ಚುನಾವಣೆಯಲ್ಲಿ ಎಡ ಮೈತ್ರಿಕೂಟವು ಎಲ್ಲಾ ನಾಲ್ಕು ಹುದ್ದೆಗಳನ್ನು ಗೆದ್ದಿದೆ – ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ.
ಭಾನುವಾರ ರಾತ್ರಿ 5,656 ಮತಪತ್ರಗಳ ಅಂತಿಮ ಎಣಿಕೆಯ ನಂತರ ಸೆಂಟ್ರಲ್ ಪ್ಯಾನಲ್ ಫಲಿತಾಂಶಗಳನ್ನು ಪ್ರಕಟಿಸಲಾಯಿತು.
ಶುಕ್ರವಾರ ಚುನಾವಣೆ ನಡೆಯಿತು.
JNUSU ಅಧ್ಯಕ್ಷ ಸ್ಥಾನಕ್ಕೆ ಎಐಎಸ್‌ಎಯ ಧನಂಜಯ್ 922 ಮತಗಳಿಂದ ಜಯಗಳಿಸಿದ್ದಾರೆ. ಅವರು 2,598 ಮತಗಳನ್ನು ಪಡೆದರೆ, ಎಬಿವಿಪಿಯ ಉಮೇಶ್ ಚಂದ್ರ ಅಜ್ಮೀರಾ 1,676 ಮತಗಳನ್ನು ಪಡೆದರು.
ಎಸ್‌ಎಫ್‌ಐನ ಯುನೈಟೆಡ್ ಲೆಫ್ಟ್‌ನ ಅವಿಜಿತ್ ಘೋಷ್ 927 ಮತಗಳಿಂದ ಉಪಾಧ್ಯಕ್ಷ ಸ್ಥಾನವನ್ನು ಗೆದ್ದರು. ಅವರು 2409 ಮತಗಳನ್ನು ಪಡೆದರೆ, ಎಬಿವಿಪಿಯ ದೀಪಿಕಾ ಶರ್ಮಾ 1482 ಮತಗಳನ್ನು ಪಡೆದರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಡಪಕ್ಷದ ಅಭ್ಯರ್ಥಿ ಬಾಪ್ಸಾದ ಪ್ರಿಯಾಂಶಿ ಆರ್ಯ 926 ಮತಗಳಿಂದ ಜಯಗಳಿಸಿದ್ದಾರೆ. ಅವರು 2,887 ಮತಗಳನ್ನು ಪಡೆದರೆ, ಎಬಿವಿಪಿಯ ಅರ್ಜುನ್ ಆನಂದ್ 1,961 ಮತಗಳನ್ನು ಪಡೆದರು.
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎಡ ಮೈತ್ರಿಕೂಟದ ಮೊಹಮ್ಮದ್ ಸಾಜಿದ್ ಅವರು ಎಬಿವಿಪಿಯ ಗೋವಿಂದ ಡಾಂಗಿ ಅವರನ್ನು 508 ಮತಗಳಿಂದ ಸೋಲಿಸಿದರು. ಸಾಜಿದ್ 2,574 ಮತಗಳನ್ನು ಪಡೆದರೆ, ಗೋವಿಂದ್ 2,066 ಮತಗಳನ್ನು ಪಡೆದರು.
ನೂತನ ಅಧ್ಯಕ್ಷ ಧನಂಜಯ್ ಯಾರು?
JNU ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಧನಂಜಯ್ ಬಿಹಾರದವರು. ಬಿಹಾರದ ಗಯಾ ಜಿಲ್ಲೆಯ ನಿವಾಸಿಯಾಗಿರುವ ಧನಂಜಯ್ ದಲಿತ ಸಮುದಾಯದಿಂದ ಬಂದವರು. 1996-97ರಲ್ಲಿ ಬಟ್ಟಿ ಲಾಲ್ ಬೈರವ ಅವರು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಆನಂತರ ಯಾರೂ ದಲಿತ ವಿದ್ಯಾರ್ಥಿ ಅಧ್ಯಕ್ಷರಾಗಿರಲಿಲ್ಲ. ಇದೀಗ ಬರೋಬ್ಬರಿ 27 ವರ್ಷಗಳ ಬಳಿಕ ಜೆಎನ್‌ಯೂ ಕ್ಯಾಂಪಸ್‌ಗೆ ದಲಿತ ವಿದ್ಯಾರ್ಥಿ ಅಧ್ಯಕ್ಷರಾದಂತಾಗಿದೆ.
ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಎಡಪಂಥೀಯ ಮತ್ತು ದಲಿತ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಲಾರಂಭಿಸಿದರು. ಜೆಎನ್‌ಯುನಲ್ಲಿ ಬಿಳಿ ಮತ್ತು ನೀಲಿ ಧ್ವಜಗಳು ರಾರಾಜಿಸಲಾರಂಭಿಸಿದವು. ಇಡೀ ಕ್ಯಾಂಪಸ್ ಲಾಲ್ ಸಲಾಂ ಮತ್ತು ಜೈ ಭೀಮ್ ಘೋಷಣೆಗಳಿಂದ ಪ್ರತಿಧ್ವನಿಸಿತು. ಧನಂಜಯ್ ಹೊರತುಪಡಿಸಿ ಉಪಾಧ್ಯಕ್ಷ ಸ್ಥಾನಕ್ಕೆ ಎಸ್‌ಎಫ್‌ಐನ ಅವಿಜಿತ್ ಘೋಷ್ ಗೆಲುವು ಸಾಧಿಸಿದ್ದಾರೆ. ಘೋಷ್ ಅವರು ಎಬಿವಿಪಿಯ ದೀಪಿಕಾ ಶರ್ಮಾ ಅವರನ್ನು 927 ಮತಗಳಿಂದ ಸೋಲಿಸಿದರು. ಘೋಷ್ 2409 ಮತಗಳನ್ನು ಪಡೆದರೆ ದೀಪಿಕಾ ಶರ್ಮಾ 1482 ಮತಗಳನ್ನು ಪಡೆದಿದ್ದಾರೆ.
ಬಿರ್ಸಾ ಅಂಬೇಡ್ಕರ್ ಫುಲೆ ಸ್ಟೂಡೆಂಟ್ಸ್ ಅಸೋಸಿಯೇಶನ್‌ನ ಎಡ ಬೆಂಬಲಿತ ಅಭ್ಯರ್ಥಿ ಪ್ರಿಯಾಂಶಿ ಆರ್ಯ ಅವರು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದರು. ಅವರು ಎಬಿವಿಪಿಯ ಅರ್ಜುನ್ ಆನಂದ್ ಅವರನ್ನು 926 ಮತಗಳಿಂದ ಸೋಲಿಸಿದರು. ಆರ್ಯ 2887 ಮತಗಳನ್ನು ಪಡೆದರೆ ಆನಂದ್ 1961 ಮತಗಳನ್ನು ಪಡೆದರು.