Monday, February 9, 2026

ಸತ್ಯ | ನ್ಯಾಯ |ಧರ್ಮ

ಹಾಸನ ಚಿರತೆ ದಾಳಿ ಇಬ್ಬರು ಕೂಲಿ ಕಾರ್ಮಿಕರಿಗೆ ಗಂಭೀರ ಗಾಯ, ಆತಂಕ

ಬೇಲೂರು : ತಾಲೂಕಿನ ಗಡಿ ಗ್ರಾಮವಾದ ಗೌತಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ಚಿರತೆ ದಾಳಿ ಸಂಭವಿಸಿ ಇಬ್ಬರು ಕೂಲಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಗೌತವಳ್ಳಿ ಗ್ರಾಮವು ಬೇಲೂರು ತಾಲೂಕಿನ ಮಾಡ್ ಗೋಡು–ಚುಂಗನಹಳ್ಳಿ ಬಾರ್ಡರ್ ವ್ಯಾಪ್ತಿಗೆ ಸೇರಿದ್ದು, ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿರುವುದರಿಂದ ಚಿರತೆಗಳ ಸಂಚಾರ ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೇಲೂರು ತಾಲೂಕಿನ ಗೌತವಳ್ಳಿ ಗ್ರಾಮದ ಎಬಿಸಿ ಚಂದ್ರೇಗೌಡರವರ ಕಾಫಿ ತೋಟದಲ್ಲಿ ಬೆಳಿಗ್ಗೆ ಕೂಲಿ ಕಾರ್ಮಿಕರು ಸುಣ್ಣ ಚೆಲ್ಲುವ ಕೆಲಸದಲ್ಲಿ ತೊಡಗಿದ್ದಾಗ, ತೋಟದೊಳಗಿನಿಂದ ಏಕಾಏಕಿ ಎರಡು ಚಿರತೆಗಳು ದಾಳಿ ನಡೆಸಿವೆ. ಈ ದಾಳಿಯಲ್ಲಿ ಸುಲ್ತಾನ ಹಾಗೂ ಸಬೀನಾ ಎಂಬ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿರತೆಗಳ ದಾಳಿಯಿಂದ ಕಾರ್ಮಿಕರು ನೆಲಕ್ಕೆ ಬಿದ್ದಿದ್ದು, ಅವರ ಕೂಗು ಕೇಳಿ ಇತರ ಕಾರ್ಮಿಕರು ಧಾವಿಸಿ ಬಂದು ಚಿರತೆಗಳನ್ನು ಓಡಿಸಿದ್ದಾರೆ ಎನ್ನಲಾಗಿದೆ. ಈ ಚಿರತೆ ದಾಳಿಯಿಂದ ಗೌತವಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ಆವರಿಸಿದ್ದು, ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ತೋಟದ ಕೆಲಸಕ್ಕೆ ತೆರಳಲು ಜನರು ಹಿಂಜರಿಯುತ್ತಿದ್ದಾರೆ. ಅರಣ್ಯ ಇಲಾಖೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page