Home ರಾಜ್ಯ ಹಾಸನ ಹಾಸನಾಂಬ ಜಾತ್ರಾ ಮಹೋತ್ಸವ ಸೂಕ್ತ ವ್ಯವಸ್ಥೆ ಕಲ್ಪಿಸೋಣ – ಸಂಸದ ಶ್ರೇಯಸ್ ಪಟೇಲ್

ಹಾಸನಾಂಬ ಜಾತ್ರಾ ಮಹೋತ್ಸವ ಸೂಕ್ತ ವ್ಯವಸ್ಥೆ ಕಲ್ಪಿಸೋಣ – ಸಂಸದ ಶ್ರೇಯಸ್ ಪಟೇಲ್

0

ಹಾಸನಾಂಬ ಜಾತ್ರಾ ಮಹೋತ್ಸವ – 2024
ಹಾಸನದ ಆರಾಧ್ಯ ದೇವತೆಯಾದ ಹಾಸನಾಂಬ ದೇವಿಯ ಜಾತ್ರಾ ಹಾಗೂ ದರ್ಶನ ಮಹೋತ್ಸವವು ಅಕ್ಟೋಬರ್ 24 ರಿಂದ 11 ದಿನಗಳ ಕಾಲ ನಡೆಯಲಿದೆ. ದೇವರ ಉತ್ಸವದ ಅಂಗವಾಗಿ, ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಸಂಸದ ಶ್ರೇಯಸ್ ಪಟೇಲ್ ಅವರ ನೇತೃತ್ವದಲ್ಲಿ ನಡೆಯಿತು.

ಈ ಬಾರಿ ಉತ್ಸವದಲ್ಲಿ ಸುಮಾರು 13 ರಿಂದ 15 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದ್ದು, ಅದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕುಡಿಯುವ ನೀರು, ಆಹಾರದ ವ್ಯವಸ್ಥೆ, ಟಿಕೆಟ್ ಕೌಂಟರ್, ಪ್ರಸಾಧ ಕೌಂಟರ್ ಗಳನ್ನು ಮಾಡುವುದರ ಸಂಭಂಧ ಪ್ರತ್ಯೇಕ ಸಮಿತಿ ರಚನೆ ಮಾಡಲು ಮತ್ತು ಸ್ವಚ್ಚತೆ ಕುರಿತಾಗಿ ನಗರಸಭಾ ಅದಿಕಾರಿಗಳಿಗೆ ಶ್ರೇಯಸ್ ಪಟೇಲ್ ಸೂಚನೆ ನೀಡಿದರು. ಕಳೆದ ಬಾರಿ ಆದ ಸಮಸ್ಯೆಗಳು ಈ ಬಾರಿ ಆಗಬಾರದು ಎಂದು ಅದಿಕಾರಿಗಳಿಗೆ ಸಂಸದರಾದ ಶ್ರೇಯಸ್ ಪಟೇಲ್ ಸೂಚಿಸಿದರು.

ಐತಿಹಾಸಿಕ ಹಿನ್ನಲೆಯುಳ್ಳ ಹಾಸನಾಂಭ ದೇಗುಲಕ್ಕೆ ಜಿಲ್ಲೆ ಮತ್ತು ಹೊರ ರಾಜ್ಯದಿಂದ ಭಕ್ತಾದಿಗಳು ಆಗಮಿಸುತ್ತಾರೆ ಅವರುಗೆ ಯಾವುದೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಬೇಕು‌. ರೈಲ್ವೆ ನಿಲ್ದಾಣ, ಬಸ್ಟಾಂಡ್, ಪ್ರಮುಖ ರಸ್ತೆಗಳಲ್ಲಿ ದೇವಸ್ಥಾನ ಮಾಹಿತಿ ಪ್ರಸಾದ ವಿನಿಯೋದ ಸ್ಥಳದ ಮಾಹಿತಿ ಟಿಕೆಟ್ ಮಾಹಿತಿಗಳನ್ನು ಹಾಕಬೇಕಿದೆ ಭಕ್ತಾದಿಗಳಿಗೆ ಯಾವುದೆ ತೊಂದರೆ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮಾತನಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಈ ಸತ್ಯಭಾಮ, ಹಾಸನ ಶಾಸಕರಾದ ಸ್ವರೂಪ ಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ದೇವಸ್ಥಾನದ ಆಡಳಿತ ಅಧಿಕಾರಿ ಹಾಗೂ ಉಪ ವಿಭಾಗ ಅಧಿಕಾರಿ ಮಾರುತಿ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

You cannot copy content of this page

Exit mobile version