Monday, June 17, 2024

ಸತ್ಯ | ನ್ಯಾಯ |ಧರ್ಮ

ನಿರ್ಮಲ ಬಜೆಟ್‌ನಲ್ಲಿ ಏನೇನಿದೆ? Live Updates

ಬೆಂಗಳೂರು: ಹಣಕಾಸು ಸಚಿಮೆ ನಿರ್ಮಲಾ ಸೀತಾರಾಮನ್ ಅವರು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ 10 ನೇ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಇದು ಮಧ್ಯಂತರ ಬಜೆಟ್ ಆಗಿದ್ದರೂ, ಮುಂದಿನ ಕೆಲವು ತಿಂಗಳುಗಳಲ್ಲಿ ನಡೆಯಲಿರುವ ಸಂಸದೀಯ ಚುನಾವಣೆಯನ್ನು ಗುರುಯಾಗಿಸಿಕೊಂಡು ಇದನ್ನು ಮಾಡಲಾಗಿದೆ.

ಈ ಬಜೆಟ್ ಕೇವಲ ಚುನಾವಣೆಗಳವರೆಗೆ ಮಾತ್ರ ಯೋಜಿಸಲಾಗಿದ್ದರೂ, ಆಡಳಿತ ಪಕ್ಷಕ್ಕೆ ಮತಗಳನ್ನು ತಂದುಕೊಡುವ ಸಾಧ್ಯತೆಗಳು ಇರುವುದರಿಂದ ನಿರ್ಧಿಷ್ಟ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಚುನಾವಣಾ ಪೂರ್ವ ಮಧ್ಯಂತರ ಬಜೆಟ್ ಅನ್ನು ಚುನಾವಣೆಯಲ್ಲಿ ಗೆಲ್ಲುವ ತಂತ್ರವಾಗಿ ಹೆಚ್ಚಾಗಿ ಬಳಸಲಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಬಜೆಟ್‌ ಲೈವ್‌ ನೋಡಲು ಇಲ್ಲಿ ಕ್ಲಿಕ್‌ ಮಾಡಿ: ಪೀಪಲ್‌ ಟಿವಿ

ಈ ದಿನವಿಡೀ, ಸೀತಾರಾಮನ್ ಅವರ ಭಾಷಣ, ಬಜೆಟ್ ವಿಶ್ಲೇಷಣೆಗಳನ್ನು ನಿಮಗೆ ಕೊಡ್ತೀವಿ. ಸುದ್ದಿಗಳು ಆಗಾಗ ತಿದ್ದುಪಡಿಯಾಗುವುದರಿಂದ ಹಾಗೂ ಅಪ್‌ಡೇಟ್‌ ಆಗುವುದರಿಂದ…..ನಮ್ಮ ವೆಬ್‌ಸೈಟ್‌ಗೆ ಟ್ಯೂನ್ ಆಗಿರಿ!

‘ಸಾಮಾಜಿಕ ನ್ಯಾಯ ಇನ್ನು ರಾಜಕೀಯವಾಗಿ ಘೋಷಣೆಯಾಗಿಲ್ಲ’
ತಮ್ಮ ಸರ್ಕಾರವು ಸಾಮಾಜಿಕ ನ್ಯಾಯವನ್ನು ಗಂಭೀರವಾಗಿ ಪರಿಗಣಿಸುತ್ತಿದೆ, ಇತರರು ಅದನ್ನು ರಾಜಕೀಯ ಘೋಷಣೆಯಾಗಿ ಬಳಸುತ್ತಾರೆ ಎಂದು ಸೀತಾರಾಮನ್ ಹೇಳಿದ್ದಾರೆ. ಗ್ರಾಮೀಣ ಆದಾಯ ಹೆಚ್ಚಿದೆ (ನಿಜ ಏನು?) ಮತ್ತು ಲಿಂಗಾಂತರಿಗಳು, ವಿಕಲಚೇತನರು, ರೈತರು ಮತ್ತು ಸೇರಿದಂತೆ ಅಭಿವೃದ್ಧಿಯಿಂದ ಹೊರಗುಳಿದಿರುವ ಎಲ್ಲಾ ಸಮುದಾಯಗಳನ್ನು ಸರ್ಕಾರದ ಸಬಲೀಕರಣದ ವಲಯಕ್ಕೆ ತರಲಾಗಿದೆ ಎಂದು ಅವರು ಹೇಳಿದ್ದಾರೆ

ಬಡತನದ ಬಗ್ಗೆ NITI ಆಯೋಗದ ಅಂಕಿಅಂಶಗಳ ಉಲ್ಲೇಖ
ಸರ್ಕಾರದ ಸಾಧನೆಗಳ ಭಾಗವಾಗಿ, ಕಳೆದ 10 ವರ್ಷಗಳಲ್ಲಿ 24.8 ಕೋಟಿ ಜನರನ್ನು ಭಿನ್ನ ಆಯಾಮಗಳ ಬಡತನದಿಂದ ಬಿಡುಗಡೆ ಮಾಡಲಾಗಿದೆ ಎಂದು NITI ಆಯೋಗ್‌ನ ಇತ್ತೀಚಿನ ವರದಿಯನ್ನು ಸೀತಾರಾಮನ್ ಉಲ್ಲೇಖಿಸಿದ್ದಾರೆ. ಆದರೆ, ಈ ಅಂಕಿ ಅಂಶದ ಯಾಕೆ ಗೊಂದಲಕಾರಿಯಾಗಿದೆ ಎಂದರೆ ಇಲ್ಲಿ ನೋಡಿ

ಮತ್ತೊಂದು ಹೊಸ ಸಂಕ್ಷಿಪ್ತ ರೂಪ
ಮೋದಿ ಸರ್ಕಾರಕ್ಕೆ ಜಿಡಿಪಿ ಎಂದರೆ’ಆಡಳಿತ, ಅಭಿವೃದ್ಧಿ, ಕಾರ್ಯಕ್ಷಮತೆ’ – ಎಂದು ಸೀತಾರಾಮನ್ ಹೇಳಿದರು. ಮತ್ತು ಈ ಮಾನದಂಡದಿಂದ, “ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜನರು ಉತ್ತಮವಾಗಿ ಬದುಕುತ್ತಿದ್ದಾರೆ ಮತ್ತು ಉತ್ತಮವಾಗಿ ವರಮಾನ ಗಳಿಸುತ್ತಿದ್ದಾರೆ” ಎಂದು ಅವರು ನಿರ್ಮಲಾ ಹೇಳಿದ್ದಾರೆ.

‘ಹಕ್ಕು’ದಿಂದ ‘ಸಬಲೀಕರಣ’ದವರೆಗೆ
ಅಂಚಿನಲ್ಲಿರುವ ಸಮುದಾಯಗಳಿಗೆ ‘ಹಕ್ಕು’ಗಳನ್ನು ಒದಗಿಸುವ ಬದಲು, ಮೋದಿ ಸರ್ಕಾರ ‘ಸಬಲೀಕರಣ’ಗಳನ್ನು ನೀಡುತ್ತಿದೆ ಎಂದು ಸೀತಾರಾಮನ್ ಹೇಳಿದ್ದಾರೆ. “ಬಡವರ ಸಬಲೀಕರಣದಲ್ಲಿ ನಾವು ನಂಬುತ್ತೇವೆ, ಹಿಂದಿನವರ ತಂತ್ರ ಕೆಲಸ ಮಾಡಲಿಲ್ಲ. ಈ 10 ವರ್ಷಗಳಲ್ಲಿ ಸಬ್ಕಾ ಸಾಥ್‌ನೊಂದಿಗೆ, ಬಹು ಆಯಾಮದ ಬಡತನವನ್ನು ತೊಡೆದುಹಾಕಲು ಸರ್ಕಾರವು 25 ಕೋಟಿ ಜನರಿಗೆ ಸಹಾಯ ಮಾಡಿದೆ” ಎಂದು ಅವರು ಹೇಳಿದ್ದಾರೆ.

‘ಅಮೃತ್ ಕಾಲ್’‌ ಎಂಬ ಮಂತ್ರ
‘ಅಮೃತ್ ಕಾಲ್’ ಎಂಬ ತಂತ್ರದ ಮೂಲಕ ಸರ್ಕಾರವನ್ನು ಸುಧಾರಣಾ ತತ್ವಗಳಿಂದ ಮಾರ್ಗದರ್ಶಿಸಲಾಗುವುದು ಎಂದು ಸೀತಾರಾಮನ್ ಹೇಳಿದರು. ಇದು ಭಾರತದ ಎಲ್ಲಾ ನಾಗರಿಕರಿಗೆ ಆರ್ಥಿಕವಾಗಿ ಸ್ವತಂತ್ರರಾಗಲು ಅಧಿಕಾರ ನೀಡುತ್ತದೆ ಎಂದು ಹೇಳಿದ್ದಾರೆ.

ಆರೋಗ್ಯ ಭರವಸೆಗಳು
ಸರ್ಕಾರ ಈಗಾಗಲೇ ಮಾಡಿರುವ ಸಾಧನೆಗಳ ಬಗ್ಗೆ ಮಾತನಾಡಿದ ಸೀತಾರಾಮನ್ ಅವರು ಭರವಸೆಗಳು ಮತ್ತು ಯೋಜನೆಗಳ ಸರಣಿಯನ್ನು ಭಾಷಣದಲ್ಲಿ ಮುಂದಿಟ್ಟರು. ಆರೋಗ್ಯ ಸೇವೆಗಳ ಬಗ್ಗೆ ಅವರು ಹೀಗೆ ಹೇಳಿದರು:

  • ಹೆಚ್ಚು ವೈದ್ಯಕೀಯ ಕಾಲೇಜುಗಳು
  • ಎಲ್ಲರಿಗೂ ವಸತಿ
  • ಹುಡುಗಿಯರು ಮತ್ತು ಮಹಿಳೆಯರಿಗೆ HPV ಲಸಿಕೆ
  • ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು
  • ರೋಗನಿರೋಧಕ ಕಾರ್ಯಕ್ರಮಕ್ಕಾಗಿ ಹೊಸ ವೇದಿಕೆ ‘YouWin’

ಇನ್ನಷ್ಟು ಭರವಸೆಗಳು
ಆಯುಷ್ಮಾನ್ ಭಾರತ್ ಯೋಜನೆಯ ಕವರ್ ಅನ್ನು ಎಲ್ಲಾ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ವಿಸ್ತರಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.

  • ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ ಅಡಿಯಲ್ಲಿ ಇನ್ನೂ ಎರಡು ಕೋಟಿ ಮನೆಗಳನ್ನು ನಿರ್ಮಿಸಲಾಗುವುದು
  • ಸುಗ್ಗಿಯ ನಂತರದ ಕೃಷಿ ಚಟುವಟಿಕೆಗಳನ್ನು ಹೆಚ್ಚಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವ
  • ರಕ್ಷಣಾ ಉದ್ದೇಶಗಳಿಗಾಗಿ ಡೀಪ್-ಟೆಕ್ ತಂತ್ರಜ್ಞಾನಗಳನ್ನು ಬಲಪಡಿಸಲು ಹೊಸ ಯೋಜನ

ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರ ಎಷ್ಟು ಗಂಭೀರವಾಗಿದೆ?
ಸಬಲೀಕರಣ ಮತ್ತು ಒಳಗೊಳ್ಳುವಿಕೆಯ ಕುರಿತು ಸೀತಾರಾಮನ್ ಅವರ ಎಲ್ಲಾ ಮಾತುಗಳ ಹೊರತಾಗಿಯೂ, ಹೆಚ್ಚುತ್ತಿರುವ ಬೇಡಿಕೆ ಮತ್ತು ವೆಚ್ಚವು ಯಾವಾಗಲೂ ಹಂಚಿಕೆಗಿಂತ ಹೆಚ್ಚಿದ್ದರೂ, ಮೋದಿ ಸರ್ಕಾರವು MGNREGA ಕ್ಕೆ ಮಾಡುವ ಖರ್ಚನ್ನು ಸತತವಾಗಿ ಕಡಿಮೆ ಮಾಡಿದೆ.

‘ಹಸಿರು ಕ್ರಾಂತಿಯಾಗುತ್ತದೆಯೇ?’
ಹೊಸ ಕಾರ್ಯಕ್ರಮವೊಂದರ ಬಗ್ಗೆ ಹೇಳುತ್ತಾ ಸೀತಾರಾಮನ್, ಸರ್ಕಾರವು ಹಸಿರು ಉತ್ಪಾದನೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ವಲಯವನ್ನು ‘ಉಪಯೋಗ’ದಿಂದ ‘ಪುನರುತ್ಪಾದನೆ’ಗ ಕಡೆಗೆ ಪರಿವರ್ತಿಸುತ್ತದೆ ಎಂದಿದ್ದಾರೆ.

ಮೂರು ಪ್ರಮುಖ ರೈಲ್ವೆ ಕಾರಿಡಾರ್ ಕಾರ್ಯಕ್ರಮಗಳ ಪ್ರಸ್ತಾಪ

  • ಶಕ್ತಿ, ಖನಿಜ ಮತ್ತು ಸಿಮೆಂಟ್ ಕಾರಿಡಾರ್
  • ಪೋರ್ಟ್-ಕನೆಕ್ಟಿವಿಟಿ ಕಾರಿಡಾರ್
  • ಹೈ-ಟ್ರಾಫಿಕ್ ಡೆನ್ಸಿಟಿ ಕಾರಿಡಾರ್

‘ಮೊದಲಬಾರಿಗೆ ಅಭಿವೃದ್ಧಿ ಹೊಂದಿದ ಭಾರತ’
ಎಫ್‌ಡಿಐ ಒಳಹರಿವಿನಲ್ಲಿ ದೊಡ್ಡ ಹೆಚ್ಚಳವಾಗಿರುವ ಬಗ್ಗೆ ಹೇಳಿಕೊಳ್ಳುವಾಗ, ವಿದೇಶಿ ಪಾಲುದಾರರೊಂದಿಗೆ ಎಲ್ಲಾ ದ್ವಿಪಕ್ಷೀಯ ಒಪ್ಪಂದದ ವ್ಯವಸ್ಥೆಗಳು ‘ಮೊದಲ ಅಭಿವೃದ್ಧಿ ಭಾರತ (ಎಫ್‌ಡಿಐ- ಫಸ್ಟ್‌ ಡೆವೆಲಪ್‌ಡ್‌ ಇಂದಡಿಯಾ)’ ನೀತಿಯನ್ನು ಆಧರಿಸಿವೆ ಎಂದು ಸೀತಾರಾಮನ್ ಹೇಳಿದ್ದಾರೆ.

FDI (ಹಳೆಯ FDI) ನಿಜವಾಗಿಯೂ ಹೇಗೆ ನಡೆಯುತ್ತಿದೆ? ಈ ಗ್ರಾಫ್ ಅನ್ನು ನೋಡಿ

2024-25ರಲ್ಲಿ ವಿತ್ತೀಯ ಕೊರತೆಯು (Fiscal deficit) 5.1% ಆಗುವ ನಿರೀಕ್ಷೆಯಿದೆ
ಈ ಹಣಕಾಸು ವರ್ಷದ ಪರಿಷ್ಕೃತ ವಿತ್ತೀಯ ಕೊರತೆಯು 5.8% ರಷ್ಟಿದೆ. 2024-25ರಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ 5.1% ಎಂದು ಅಂದಾಜಿಸಲಾಗಿದೆ, 2025-26ರ ವೇಳೆಗೆ ಈ ಕೊರತೆಯನ್ನು ಜಿಡಿಪಿಯ 4.5% ಕ್ಕೆ ಇಳಿಸುವ ಬದ್ಧತೆಗೆ ಅನುಗುಣವಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ.

ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
ಸೀತಾರಾಮನ್ ಅವರು ನೇರ ಅಥವಾ ಪರೋಕ್ಷ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಗಳನ್ನು ಪ್ರಸ್ತಾಪಿಸುವುದಿಲ್ಲ ಎಂದು ಹೇಳಿದ್ದಾರೆ. ಹಾಗಿದ್ದೂ, ಅವರು ‘ತೆರಿಗೆದಾರರ ಸೇವೆಗಳನ್ನು ಸುಧಾರಿಸಲು’ ಮತ್ತು 2009-10 ರವರೆಗಿನ 25,000 ರುಪಾಯಿ ವರೆಗಿನ ಹಾಗೂ 2010-2015 ರ ಅವಧಿಯ 10,000 ರುಪಾಯಿ ಬಾಕಿ ಇರುವ ನೇರ ತೆರಿಗೆ ಬೇಡಿಕೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಕ್ಯಾಪೆಕ್ಸ್ ವೆಚ್ಚದಲ್ಲಿ ಹೆಚ್ಚಳ
ಕ್ಯಾಪೆಕ್ಸ್ ಫ್ರಂಟ್‌ನಲ್ಲಿ ಮುಂದಿನ ವರ್ಷದ ವೆಚ್ಚವನ್ನು 11.1% ರಿಂದ 11.11 ಟ್ರಿಲಿಯನ್‌ಗೆ ಹೆಚ್ಚಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಎಲ್ಲವೂ ಚುನಾವಣೆ ಗೆಲ್ಲಲು
ತನ್ನ ಬಜೆಟ್ ಭಾಷಣದ ಕೊನೆಯಲ್ಲಿ, ಸೀತಾರಾಮನ್ ಮತ್ತೊಂದು ರಾಜಕೀಯ ಪ್ರಸ್ತಾಪವನ್ನು ಮಾಡಿದರು. ಮೋದಿ ಸರ್ಕಾರದ ಅಡಿಯಲ್ಲಿ ಭಾರತದ ಆರ್ಥಿಕತೆ ಮತ್ತು ಹಣಕಾಸು ವಿತರಣಾ ವ್ಯವಸ್ಥೆಗಳು ಸಂಪೂರ್ಣವಾಗಿ ರೂಪಾಂತರಗೊಂಡಿವೆ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು