Friday, June 14, 2024

ಸತ್ಯ | ನ್ಯಾಯ |ಧರ್ಮ

ಮಂಗಳೂರು | ಬಲವಂತದ ಆನ್ಲೈನ್‌ ಸಾಲ ನೀಡಿ, ನಂತರ ಬಾಕಿ ಕಟ್ಟದಿದ್ದರೆ ಬೆತ್ತಲೆ ಫೋಟೊ ವೈರಲ್‌ ಮಾಡುವುದಾಗಿ ಮಹಿಳೆಗೆ ಬೆದರಿಕೆ

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್ಲೈನ್‌ ಸಾಲದ ಅಪ್ಲಿಕೇಷನ್‌ಗಳ ಹೆಚ್ಚಾಗಿದ್ದು, ಇಂತಹ ಕಂಪನಿಗಳು ನಾಯಿಕೊಡೆಗಳಂತೆ ಒಂದರ ಹಿಂದರಂತೆ ಒಂದು ಹುಟ್ಟಿಕೊಳ್ಳುತ್ತಿರುವುದರ ಜೊತೆಗೆ ಜನರ ಮಾನ, ಪ್ರಾಣಗಳಿಗೂ ಎರವಾಗುತ್ತಿವೆ.

ಇತ್ತೀಚೆಗೆ ಇಂತಹ ಆನ್‌ಲೈನ್‌ ಸಾಲ ಸಂಸ್ಥೆಗಳ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿದೆ. ಆದರೆ ಮಂಗಳೂರಿನಿಂದ ವರದಿಯಾಗಿರುವ ಘಟನೆಯು ಅದನ್ನೂ ಮೀರಿದ್ದು ಸಭ್ಯ ನಾಗರಿಕರನ್ನು ಬೆಚ್ಚಿಬೀಳಿಸುವಂತಿದೆ.

ತಿಂಗಳ ಸಂಬಳಕ್ಕೆ ಕೆಲಸ ಮಾಡುವ ಉದ್ಯೋಗಿಗಳು ತಿಂಗಳ ಕೊನೆಯಲ್ಲಿ ಕಿಸೆ ಖಾಲಿಯಾದಾಗ ಇಂತಹ ಸಾಲದ ಅಪ್ಲಿಕೇಷನ್‌ಗಳ ಮೊರೆ ಹೋಗುವುದು ಸಾಮಾನ್ಯ. ಇದರಲ್ಲಿ ಯಾವುದೇ ತಂಟೆ ತಕರಾರು ಇರುವುದಿಲ್ಲ, ಹಾಗೂ ಸುಲಭವಾಗಿ ಸಾಲ ದೊರೆಯುತ್ತದೆ ಎನ್ನುವುದೇ ಜನರು ಇಂತಹ ಸಾಲ ಸಂಸ್ಥೆಗಳಿಂದ ಸಾಲ ಪಡೆಯಲು ಇರುವ ಮೊದಲ ಕಾರಣ.

ಆದರೆ ಸಾಲ ಕೊಟ್ಟ ನಂತರ ಅದರ ವಸೂಲಿಗಾಗಿ ಈ ಸಂಸ್ಥೆಗಳು ಇಳಿಯುವ ಮಟ್ಟ ಎಂತವರನ್ನೂ ಆತಂಕಕ್ಕೆ ದೂಡುತ್ತದೆ.

ಈಗ ಮಂಗಳೂರಿನಿಂದ ಅಂತಹದ್ದೇ ಒಂದು ಘಟನೆ ವರದಿಯಾಗಿದ್ದು ಸಾಲ ಪಡೆದ ಮಹಿಳೆಯೊಬ್ಬರಿಗೆ ಹಣ ಹಿಂದಿರುಗಿಸದಿದ್ದಲ್ಲಿ ನಿಮ್ಮ ಬೆತ್ತಲೆ ಫೋಟೊ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.

ಮಹಿಳೆ ಎಪ್ರಿಲ್ 15 ರಂದು quick money ಎಂಬ ಲೋನ್ ಆಪ್ ನಲ್ಲಿ 10,000 ರೂ. ಸಾಲಕ ಮನವಿ ಮಾಡಿದ್ದರು. ತಕ್ಷಣ ಅವರ ಖಾತೆಗೆ 7500 ರೂ, ಕ್ರೆಡಿಟ್ ಆಗಿದೆ, ಮಹಿಳೆ ಸ್ವಲ್ಪ ದಿನಗಳ ಬಳಿಕ ಪೂರ್ತಿ 10,000 ರೂ. ಹಣವನ್ನು ಮರು ಪಾವತಿ ಮಾಡಿದ್ದಾರೆ.

ಆದರೆ ಆ ಬಳಿಕ ಬೇರೆ ಬೇರೆ ವಾಟ್ಸ್ ಆಪ್ ಸಂಖ್ಯೆಯಿಂದ ಮಹಿಳೆಗೆ ಕಡ್ಡಾಯವಾಗಿ ಮತ್ತೆ ಸಾಲ ಪಡೆಯಬೇಕೆಂದು ಒತ್ತಾಯಿಸಲಾಗಿದೆ. ಅಲ್ಲದೆ ಆಕೆಯ ಖಾತೆಗೆ 14000 ರೂ. ಸಾಲವನ್ನು ಕ್ರೆಡಿಟ್ ಮಾಡಲಾಗಿದೆ ಈ ಹಣವನ್ನು ಮಹಿಳೆ ಮರು ಪಾವತಿ ಮಾಡಿದ್ದಾರೆ. ಎಲ್ಲಾ ಹಣವನ್ನು ಪಾವತಿಸಿದ ಬಳಿಕವು ಮತ್ತೆ ಹಚ್ಚಿನ ಹಣವನ್ನು ಪಾವತಿ ಮಾಡುವಂತೆ ಒತ್ತಾಯಿಸಿ 51000 ರೂ, ಲೋನ್ ಮಹಿಳೆ ಖಾತೆಗೆ ವರ್ಗಾಯಿಸಿದ್ದಾರೆ.

ಅಲ್ಲದೆ ಮಹಿಳೆಗೆ ಬೇರೆ ಬೇರೆ ಸಂಖ್ಯೆಗಳಿಂದ ಕರೆ ಮಾಡಿ ಹಣ ಹಿಂತಿರುಗಿಸುವಂತೆ ಬೆದರಿಕ ಹಾಕಲಾಗಿದೆ. ಅಲ್ಲದೆ ಆಕೆಯ ಫೋಟೋವನ್ನು ಯಾರದೋ ಯುವಕನೊಂದಿಗೆ ನಗ್ನವಾಗಿ ಇರುವಂತೆ ಎಡಿಟ್ ಮಾಡಿ ಮಹಿಳೆಗೆ ಕಳುಹಿಸಿ ಇತರರಿಗೆ ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿಯೂ‌, ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿಯೂ ಬೆದರಿಸಿದ್ದಾರೆ. ಇದರಿಂದ ಮನನೊಂದ ಮಹಿಳೆ ಈಗ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು