Thursday, May 2, 2024

ಸತ್ಯ | ನ್ಯಾಯ |ಧರ್ಮ

ಕೆಡುಕ ಮಗನನ್ನು ಕೊಲ್ಲಲು ಸ್ನೇಹಿತರಿಗೆ ವೀಳ್ಯ ಕೊಟ್ಟ ತಂದೆ!

ಬೆಳಗಾವಿ: ಮನೆಯ ಬೆಲೆಬಾಳುವ ವಸ್ತುಗಳು, ಕಟಾವು ಮಾಡಿದ ಧಾನ್ಯಗಳನ್ನು ಮಾರುವುದು, ತಾನು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯರನ್ನು ಥಳಿಸಿ ಕಿರುಕುಳ ನೀಡುತ್ತಿದ್ದ ಮಗನನ್ನು ಕೊಂದು ಹಾಕಲು ತಂದೆಯೇ ವೀಳ್ಯ ನೀಡಿದ ಘಟನೆಯೊಂದು ನಡೆದಿದೆ.

ಕೊಲೆ ನಡೆದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸಂಗಮೇಶ ಮಾರುತಿ ತಿಗಡಿ (39) ಕೊಲೆಯಾದವನು.

ಸವದತ್ತಿ ತಾಲೂಕಿನ ಹಿರೇಕೊಪ್ಪ ಗ್ರಾಮದ ಮಂಜುನಾಥ ಹಾಗೂ ಹಿರೇಕೊಪ್ಪ ಗ್ರಾಮದ ಆಂಜಪ್ಪ ಬಂಧಿತ ಆರೋಪಿಗಳು. ಕೊಲೆಯಾದ ಸಂಗಮೇಶ ಕುಡಿತದ ಚಟ ಹೊಂದಿದ್ದ. ಬೆಳಗ್ಗೆಯಿಂದ ತಡರಾತ್ರಿವರೆಗೂ ಮದ್ಯ ಸೇವಿಸಿ ತಂದೆ-ತಾಯಿಯನ್ನು ನಿಂದಿಸುತ್ತಿದ್ದ. ಅಲ್ಲದೇ ಕುಡಿತದ ಚಟಕ್ಕೆ ಬಿದ್ದಿದ್ದ ಈತ ಮನೆಯಲ್ಲಿನ ಬೆಲೆಬಾಳುವ ವಸ್ತುಗಳು, ಧಾನ್ಯಗಳನ್ನು ಮಾರಾಟ ಮಾಡಿ ಮದ್ಯ ಸೇವಿಸುತ್ತಿದ್ದ. ಇದರ ಜತೆಗೆ ಸಂಗಮೇಶ ಕೆಲ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ.

ಅಲ್ಲದೆ ಸಂಗಮೇಶ್ ಕುಡಿದು ಮನೆಗೆ ಬಂದು ತಂದೆ ತಾಯಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಕೋಪಗೊಂಡ ತಂದೆ ಸಂಗಮೇಶ್ ತನ್ನ ಜತೆ ವ್ಯಾಪಾರ ಮಾಡುತ್ತಿದ್ದ, ಸ್ನೇಹಿತರಾದ ಮಂಜುನಾಥ್ ಹಾಗೂ ಅಂಜಪ್ಪನ ಬಳಿ ಕೊಲೆ ಮಾಡುವಂತೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ. ಕೊಲೆಯಾದ ಸಂಗಮೇಶನನ್ನು ದ್ವಿಚಕ್ರ ವಾಹನದಲ್ಲಿ ಬೈಲಹೊಂಗಲ, ನೇಸರಗಿ, ವನ್ನೂರು, ಮುರಗೋಡ ಮತ್ತಿತರ ಕಡೆ ಕರೆದುಕೊಂಡು ಹೋಗಲಾಗಿತ್ತು.

ಮಂಜುನಾಥ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಗೋಕಾಕ ತಾಲೂಕಿನ ಅಂಕಲಗಿಗೆ ತೆರಳಿದ್ದನು. ನಂತರ ಹೀರೆಕೊಪ್ಪ ಗ್ರಾಮಕ್ಕೆ ಹಿಂತಿರುಗಿ ಅಂಜಪ್ಪನನ್ನು ಮತ್ತೆ ಅಂಕಲಗಿಗೆ ಕರೆದೊಯ್ದರು. ಆರೋಪಿ ಮಂಜುನಾಥ ಆಂಜಪ್ಪನ ಸಹಾಯದಿಂದ ಅಲ್ಲಿನ ವೈನ್ ಶಾಪ್ ನಲ್ಲಿ ಮದ್ಯ ಸೇವಿಸಿ ನಶೆಯಲ್ಲಿದ್ದ ಸಂಗಮೇಶನನ್ನು ಬೈಕ್ ನಲ್ಲಿ ಸವದತ್ತಿ ತಾಲೂಕಿನ ಕುಟಾರನಟ್ಟಿ ಗ್ರಾಮದ ಹೊರವಲಯಕ್ಕೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ನಿರ್ಜನ ಪ್ರದೇಶದಲ್ಲಿ ಕಲ್ಲುಗಳಿಂದ ಸಂಗಮೇಶ್ ತಲೆಗೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಗೋಕಾಕ ತಾಲೂಕಿನ ಅಂಕಲಗಿಯಲ್ಲಿ ಕುಟರನಟ್ಟಿಗ್ರಾಮದ ನಿರ್ಜನ ಪ್ರದೇಶದಲ್ಲಿ ಪಾನಮತ್ತರಾಗಿದ್ದ ಮೂವರು ಸಂಗಮೇಶನ ತಲೆ ಮೇಲೆ ಕಲ್ಲು ಎಸೆದು ಪರಾರಿಯಾಗಿದ್ದಾರೆ. ಮಾಹಿತಿ ಪಡೆದ ಮುರಗೋಡ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ನಂತರ ಸಂಗಮೇಶ್ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ಕೊಲೆ ನಡೆದ ಪ್ರದೇಶದಲ್ಲಿ ದೊರೆತ ಫೋನ್ ನಂಬರ್ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ಸಂಖ್ಯೆಗೆ ಕರೆ ಮಾಡಿದ ಪೊಲೀಸರು ಹಂತಕರಾದ ಮಂಜುನಾಥ್ ಮತ್ತು ಅಂಜಪ್ಪನನ್ನು ಬಂಧಿಸಿದ್ದಾರೆ. ಈ ಮಾಹಿತಿ ಮೇರೆಗೆ ಕೊಲೆಯಾದ ಸಂಗಮೇಶ್ ಮನೆಗೆ ತೆರಳಿ ವಿಚಾರಿಸಿದಾಗ ಅಸಲಿ ವಿಷಯ ಹೊರಬಿದ್ದಿದೆ. ಕೊಲೆ ನಡೆದ 24 ಗಂಟೆಗಳಲ್ಲಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಘಮೇಶನನ್ನು ಕೊಲ್ಲಲು ಎರಡು ಲಕ್ಷ ರೂಪಾಯಿ ಕೊಡುವುದಾಗಿ ಮಂಜುನಾಥ್ ಜೊತೆ ಆತನ ತಂದೆ ಮಾತುಕತೆ ನಡೆಸಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು