Home ಬ್ರೇಕಿಂಗ್ ಸುದ್ದಿ ಹಾಸನ ರಸ್ತೆ ಬದಿಯಲ್ಲಿ ಪಶು ಸಂಗೋ ಪನಾ ಇಲಾಖೆಗೆ ಸೇರಿದ ಇಂಜೆಕ್ಷನ್‌ ಸಿರೆಂಜ್ ಸ್ಥಳೀಯರ ಆಕ್ರೋಶ

ರಸ್ತೆ ಬದಿಯಲ್ಲಿ ಪಶು ಸಂಗೋ ಪನಾ ಇಲಾಖೆಗೆ ಸೇರಿದ ಇಂಜೆಕ್ಷನ್‌ ಸಿರೆಂಜ್ ಸ್ಥಳೀಯರ ಆಕ್ರೋಶ

ಬೇಲೂರು : ಪಟ್ಟಣದ ಹೊರವಲ ಯದ ಹೊಸನಗರಕ್ಕೆ ತೆರಳುವ ಬಡಾವಣೆಯ ಮಾರ್ಗದ ಮುಖ್ಯರಸ್ತೆಯ ಬದಿಯ ಯಗಚಿ ನಾಲೆಯ ದಡದಲ್ಲಿ ಪಶುಗಳಿಗೆ ನೀಡುವ ಇಂಜೆಕ್ಷನ್,ಗ್ಲುಕೋಸ್, ಇತರ ಉಪಯುಕ್ತ ವಸ್ತುಗಳನ್ನು ಬೇಕಾಬಿಟ್ಟಿ ಎಸೆದು ಹೋಗಿರುವುದು ಕಂಡುಬಂದಿದೆ.ವಿಷಯ ತಿಳಿದ ಪುರಸಭೆ ೧ ನೇ ವಾರ್ಡ್ ಸದಸ್ಯೆ ಮೀನಾಕ್ಷಿ ವೆಂಕಟೇಶ್ ಹಾಗು ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಅದನ್ನು ಗಮನಿಸಿದಾಗ ಅದು ಪಶುಗಳಿಗೆ ನೀಡುವ ಔಚಧಿ ಸಿರಂಜ್ ಎಂದು ಗೊತ್ತಾಗಿದೆ.ಇದರ ಜೊತೆಯಲ್ಲಿ ನೆಹರೂ ನಗರದ ಪಶು ಔಷದಿ ಕೇಂದ್ರದ ಔಷದಿ ಬರೆದುಕೊಡುವ ಪ್ಯಾಡ್ ಕೂಡ ಪತ್ತೆಯಾಗಿದೆ.


ಈ ವಿಷಯಕ್ಕೆ ಸಂಭಂದಿಸಿದಂತೆ ಮಾತನಾಡಿದ ಸದಸ್ಯೆ ಮೀನಾಕ್ಷಿ ವೆಂಕಟೇಶ್ ನಮ್ಮ ವಾರ್ಡ್ ನಲ್ಲಿ ಈ ರೀತಿ ಆಗಿರುವುದು ಇದೇ ಮೊದಲು.ನಾವು ಇದನ್ನು ಕೂಲಂಕುಷವಾಗಿ ನೋಡಿದಾಗ ಪಶುಗಳಿಗೆ ನೀಡುವ ಔಷಧಿ ಎಂದು ಗೊತ್ತಾಗಿದೆ.ಇಂಜೆಕ್ಷನ್ ಟ್ಯೂಬ್ ಗಳನ್ನು ರಸ್ತೆ ಬದಿ ಹಾಗು ನಾಲೆಯ ಬದಿ ಬಿಸಾಕಿ ಹೋಗಿರುವುದು ಎಷ್ಟರ ಮಟ್ಟಿಗೆ ಸರಿ.ಸರ್ಕಾರಿ ಸ್ವಾಮ್ಯದ ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ ಸಂಬಂಧಿಸಿದ ಇಂಜಕ್ಷನ್ ಸಿರಂಜ್ ಹಾಗೂ ಇತರ ವಸ್ತುಗಳು ಪತ್ತೆಯಾಗಿವೆ. ಈ ಬಗ್ಗೆ ಮೇಲಾಧಿಕಾರಿ ಗಳು ಗಮನ ಹರಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

You cannot copy content of this page

Exit mobile version