Home ಬ್ರೇಕಿಂಗ್ ಸುದ್ದಿ  ಹಾಸನ ಲಾರಿ ಪಲ್ಟಿ 15 ಲಕ್ಷ ಮೌಲ್ಯದ 1,100 ಕೇಸ್ – ಬಿಯರ್ ನಾಶ

 ಹಾಸನ ಲಾರಿ ಪಲ್ಟಿ 15 ಲಕ್ಷ ಮೌಲ್ಯದ 1,100 ಕೇಸ್ – ಬಿಯರ್ ನಾಶ

ಹಾಸನ : ತಾಲೂಕಿನ ದೊಡ್ಡಪುರ ಗ್ರಾಮದ ಸಮೀಪ ಬಿಯರ್ ಸಾಗಿಸುತ್ತಿದ್ದ ಲಾರಿಯೊಂದು ಟೈಯರ್ ಬ್ಲಾಸ್ಟ್ ಆಗಿ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿ ಪಲ್ಟಿಯಾದ ಪರಿಣಾಮ ಸುಮಾರು ₹15 ಲಕ್ಷ ಮೌಲ್ಯದ ಬಿಯರ್ ನಾಶವಾಗಿರುವ ಘಟನೆ ನಡೆದಿದೆ.

ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ವುಡ್ ಪಿಕರ್ ಕಂಪನಿಯಿಂದ ಕೊಪ್ಪಳಕ್ಕೆ ಸುಮಾರು 1,100 ಕೇಸ್ ಬಿಯರ್ ಬಾಟಲ್‌ಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಲಾರಿಯ ಟೈಯರ್ ಏಕಾಏಕಿ ಬ್ಲಾಸ್ಟ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿದ ವಾಹನ ಡಿವೈಡರ್ ಮೇಲೆ ಹತ್ತಿ ಪಲ್ಟಿಯಾಗಿದೆ.

ಅಪಘಾತದ ಪರಿಣಾಮ ಲಾರಿಯಲ್ಲಿದ್ದ ಲೆಜೆಂಡ್, ರಾಯಲ್, ಪವರ್ ಕೂಲ್ ಹಾಗೂ ಸನ್ನಿ ಬೀಚಸ್ ಬ್ರ್ಯಾಂಡ್‌ಗಳ ಬಿಯರ್ ಬಾಟಲ್‌ಗಳು ಹಾಗೂ ಟಿನ್ ಡಬ್ಬಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಪಘಾತದಲ್ಲಿ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಬಿಯರ್ ನಾಶವಾಗಿದೆ ಎಂದು ತಿಳಿದುಬಂದಿದೆ.

ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯ ರಸ್ತೆ ಸಂಚಾರ ಕೆಲಕಾಲ ಸಂಪೂರ್ಣ ಸ್ಥಗಿತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಯಿತು.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಸಂಚಾರವನ್ನು ಸುಗಮಗೊಳಿಸಲು ಕ್ರಮ ಕೈಗೊಂಡರು. ಘಟನೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

You cannot copy content of this page

Exit mobile version