ಲಖನೌ: ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಲವ್ ಜಿಹಾದ್ ನಿಯಂತ್ರಣ ಕಾನೂನಡಿಯಲ್ಲಿ ಶಿಕ್ಷೆಯಾಗಿದ್ದು, ಮೊಹಮ್ಮದ್ ಅಪ್ಜಲ್ ಎಂಬಾತನಿಗೆ ಅಮರೋಹ ಜಿಲ್ಲೆಯ ನ್ಯಾಯಾಲಯವು 5 ವರ್ಷ ಜೈಲು ಶಿಕ್ಷೆ ಹಾಗೂ ರೂ.40 ಸಾವಿರ ದಂಡ ವಿದಿಸಿದೆ.
ಮಾಹಿತಿ ಪ್ರಕಾರ ಸಂಭಾಲ್ ಜಿಲ್ಲೆಯ ಅಫ್ಜಲ್ ಎಂಬಾತ ಹಿಂದೂ ಸಮುದಾಯದ ಯುವತಿಗೆ ಸುಳ್ಳು ಭರವಸೆಗಳನ್ನು ನೀಡಿದ್ದು, ಆಕೆಗೆ ತಾನೂ ಹಿಂದೂ ಧರ್ಮಕ್ಕೆ ಸೇರಿದವನು ಎಂದು ನಂಬಿಸಿ ಮದುವೆಯಾಗಲು ಪ್ರಯತ್ನಿಸಿ ಆಕೆಯನ್ನು ಕರೆದೊಯ್ದಿದ್ದ ಕಾರಣ, ಆತನನ್ನು ಕಳೆದ ವರ್ಷದ ಏಪ್ರಿಲ್‌ನಲ್ಲಿ ದೆಹಲಿಯಲ್ಲಿ ಬಂಧಿಸಲಾಗಿತ್ತು.
ಈ ಹಿನ್ನಲೆ ಆತನ ವಿರುದ್ಧ ಲವ್ ಜಿಹಾದ್ ನಿಯಂತ್ರಣ ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹೀಗಾಗಿ ಶನಿವಾರ ಇದರ ವಿಚಾರಣೆ ನಡೆಸಿದ್ದ ಪೊಕ್ಸೋ ವಿಶೇಷ ನ್ಯಾಯಾಲಯವು ಈ ತೀರ್ಪನ್ನು ಪ್ರಕಟಸಿದೆ.