Home ಬ್ರೇಕಿಂಗ್ ಸುದ್ದಿ ಹಾಸನ ಎ.ವಿ.ಕೆ. ಕಾಲೇಜಿನಲ್ಲಿ ಎಲ್‌ಪಿಜಿ ವತಿಯಿಂದ – ಎಲ್‌ಪಿಜಿ ಭದ್ರತಾ ಜಾಗೃತಿ ಕಾರ್ಯಕ್ರಮ

ಎ.ವಿ.ಕೆ. ಕಾಲೇಜಿನಲ್ಲಿ ಎಲ್‌ಪಿಜಿ ವತಿಯಿಂದ – ಎಲ್‌ಪಿಜಿ ಭದ್ರತಾ ಜಾಗೃತಿ ಕಾರ್ಯಕ್ರಮ

ಹಾಸನ : ಹಾಸನದ ಎವಿ.ಕೆ. ಕಾಲೇಜಿನಲ್ಲಿ ಭಾರತ್‌ಗ್ಯಾಸ್ ಡಿಸ್ಟ್ರಿಬ್ಯೂಟರ್‌ಗಳ ಆಶ್ರಯದಲ್ಲಿ ಎಲ್‌ಪಿಜಿ ಪಂಚಾಯತ್ ವತಿಯಿಂದ “ಎಲ್‌ಪಿಜಿ ಭದ್ರತಾ ಜಾಗೃತಿ ಕಾರ್ಯಕ್ರಮ” ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಉದ್ದೇಶ, ವಿದ್ಯಾರ್ಥಿಗಳಿಗೆ ಅಡುಗೆ ಅನಿಲ (LPG) ಯ ಸುರಕ್ಷಿತ ಬಳಕೆ ಹಾಗೂ ಗ್ಯಾಸ್ ಲೀಕ್‌ನಂತಹ ತುರ್ತು ಪರಿಸ್ಥಿತಿಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸುವುದಾಗಿತ್ತು.

ಕಾರ್ಯಕ್ರಮದಲ್ಲಿ ಭಾರತ್‌ಗ್ಯಾಸ್ ಪ್ರದೇಶ ವ್ಯವಸ್ಥಾಪಕ ಶ್ರೀ ಸಂದೀಪ್ ಕುಮಾರ್ ರೈನಾಜ್ಯೇಷ್ಟ ಮಾರಾಟ ನಿರ್ವಾಹಕ ಶ್ರೀ ಅನಂತರಾವ್, ಹಾಗೂ ಎವಿ.ಕೆ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಯತೀಂದ್ರ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಅವರು ತಮ್ಮ ಸಂದೇಶದಲ್ಲಿ, “ಪ್ರತಿಯೊಂದು ಮನೆಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುವಾಗ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು” ಎಂದು ಎಚ್ಚರಿಸಿದರು. ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳಿಗೆ ಎಲ್‌ಪಿಜಿ ಲೀಕ್ ಸಂಭವಿಸಿದಾಗ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಪ್ರಾಯೋಗಿಕ ಪ್ರದರ್ಶನಗಳು ನೀಡಲಾಯಿತು. ತಜ್ಞರು “ಪ್ರತಿ ಐದು ವರ್ಷಕ್ಕೊಮ್ಮೆ ಎಲ್‌ಪಿಜಿ ಪೈಪ್‌ಗಳನ್ನು ಬದಲಾಯಿಸಬೇಕು, ಸಂಪರ್ಕ ಕಿಟ್‌ಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು” ಎಂದು ಸಲಹೆ ನೀಡಿದರು. ಭಾರತ್‌ಗ್ಯಾಸ್ ಪ್ರತಿನಿಧಿಗಳು, ಪ್ರಮಾಣಿತ ಎಲ್‌ಪಿಜಿ ಪೈಪ್‌ಗಳು ಹಾಸನದ ಅಧಿಕೃತ ಭಾರತ್‌ಗ್ಯಾಸ್ ಡಿಸ್ಟ್ರಿಬ್ಯೂಟರ್‌ಗಳ ಬಳಿ ಲಭ್ಯವಿವೆ ಎಂದು ತಿಳಿಸಿದರು.

You cannot copy content of this page

Exit mobile version