Home ಬ್ರೇಕಿಂಗ್ ಸುದ್ದಿ ಹಾಸನದಲ್ಲಿ ನಾಳೆಯಿಂದ 2 ದಿನಗಳ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಜಾಥಾ ಮತ್ತು ಬೃಹತ್ ಸಮಾವೇಶ

ಹಾಸನದಲ್ಲಿ ನಾಳೆಯಿಂದ 2 ದಿನಗಳ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಜಾಥಾ ಮತ್ತು ಬೃಹತ್ ಸಮಾವೇಶ

ಹಾಸನ : ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಮಾರ್ಚ್ 7ರಂದು ಹಾಸನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ ಎಂದು ಒಕ್ಕೂಟದ ಡಾ. ಅನುಪಮಾ ಅವರು ತಿಳಿಸಿದರು.

ನಗರದ ಮಹಾರಾಜ ಉದ್ಯಾನವನದಲ್ಲಿರುವ ಬಯಲು ರಂಗಮಂದಿರದಲ್ಲಿ ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಕಲಾತಂಡಗಳಿಂದ ಹೋರಾಟದ ಹಾಡುಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಸಾಮಾಜಿಕ ಹೋರಾಟಗಾರ್ತಿ, ಲೇಖಕಿ ಹಾಗೂ ನ್ಯಾಯವಾದಿ ತೀಸ್ತಾ ಸೆಟಲ್ವಾಡ್ (ಮುಂಬಯಿ) ಮತ್ತು ಸಾಮಾಜಿಕ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ (ಬೆಂಗಳೂರು) ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ ರಾಜಣ್ಣಗೌಡ, ರತಿ ರಾವ್, ಡಾ. ವೀರಭದ್ರಪ್ಪ, ಗೀತಾ ವಿ., ಡಾ. ರಂಗಲಕ್ಷ್ಮಿ, ರಾಜಶೇಖರ್ ಹುಲಿಕಲ್, ರಾಜು ಗೊರೂರು, ಪುಷ್ಪಾ ಎಂ.ಬಿ., ಮಂಗಳಮ್ಮ, ಮಮತಾ, ಎಚ್.ಬಿ. ಪೂರ್ಣಿಮಾ ಹಾಗೂ ಧರ್ಮೇಶ್ ಸೇರಿದಂತೆ ಹಲವರು ಗೌರವ ಉಪಸ್ಥಿತರಾಗಿ ಭಾಗವಹಿಸಲಿದ್ದಾರೆ.
ಇದಾದ ನಂತರ ಮಹಾರಾಜ ಉದ್ಯಾನವನದಿಂದ ಆರಂಭವಾಗುವ ಹಕ್ಕೊತ್ತಾಯ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಮಾಪ್ತಿಯಾಗಲಿದೆ. ಬಳಿಕ ಬೆಳಗ್ಗೆ 11.30ಕ್ಕೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಯಶೋಧರಾ ದಾಸಪ್ಪ ವೇದಿಕೆಯಲ್ಲಿ ಬೃಹತ್ ಸಾರ್ವಜನಿಕ ಮಹಿಳಾ ಸಮಾವೇಶ ನಡೆಯಲಿದೆ.

You cannot copy content of this page

Exit mobile version