Friday, June 14, 2024

ಸತ್ಯ | ನ್ಯಾಯ |ಧರ್ಮ

ಮಧ್ಯಪ್ರದೇಶದ ಚುರ್ಹತ್ ಬೈಪಾಸ್‌ ಕಾಮಗಾರಿ ಬಹುತೇಕ ಪೂರ್ಣ: ನಿತಿನ್ ಗಡ್ಕರಿ

ಮಧ್ಯಪ್ರದೇಶ: ಮಧ್ಯಪ್ರದೇಶದ ರಾಷ್ಟ್ರೀಯ ಹೆದ್ದಾರಿ NH 75E ನ ರೇವಾ-ಸಿಧಿ ವಿಭಾಗದಲ್ಲಿನ ಅವಳಿ ಸುರಂಗ ಸೇರಿದಂತೆ ಚುರ್ಹತ್ ಬೈಪಾಸ್‌ನ ಕಾಮಗಾರಿ ಕೆಲಸ ಬಹುತೇಕ ಪೂರ್ಣಗೊಂಡಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.

ನಿತಿನ್‌ ಗಡ್ಕರಿ

ಟ್ವೀಟ್‌ ಮೂಲಕ ಮಾಹಿತಿ ನೀಡಿರುವ ಅವರು, ಸುಸ್ಥಿರ ಅಭಿವೃದ್ಧಿ ಮತ್ತು ಮಾನವ, ಪ್ರಕೃತಿ ಮತ್ತು ವನ್ಯಜೀವಿಗಳ ಸಾಮರಸ್ಯದ ಸಹಬಾಳ್ವೆಯನ್ನು ಖಾತ್ರಿಪಡಿಸುವ ದೃಷ್ಟಿಯೊಂದಿಗೆ ಮುಂದುವರಿಯುತ್ತಿರುವ ಈ ಬೈಪಾಸ್, ಅವಳಿ ಸುರಂಗವನ್ನು ಹೊಂದಿದ್ದು ಕಾಡಿನಲ್ಲಿರುವ ವನ್ಯಜೀವಿಗಳ ಚಲನೆಗೆ ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಸೂಕ್ತ ಸಂಖ್ಯೆಯ ಅಂಡರ್‌ಪಾಸ್‌ ಗಳಿಂದ ರಸ್ತೆ ಅಪಘಾತಗಳ ಸಾಧ್ಯತೆಗಳು ಕಡಿಮೆಯಾಗುತ್ತದೆ ಮತ್ತು ರಸ್ತೆ ಸುರಕ್ಷತೆಯೂ ಹೆಚ್ಚುತ್ತದೆ. ಇನ್ನೂ ಸುರಂಗದ ನಿರ್ಮಾಣವು ಮೊಹಾನಿಯಾ ಘಾಟ್‌ನಲ್ಲಿನ ಟ್ರಾಫಿಕ್‌ ಅಡಚಣೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಪ್ರಯಾಣಿಕರು ಸುಗಮವಾಗಿ ಸಂಚಾರ ನಡೆಸಬಹುದು ಎಂದು ಹೇಳಿದ್ದಾರೆ.

ರೇವಾ-ಸಿಧಿ ವಿಭಾಗದಲ್ಲಿನ ಅವಳಿ ಸುರಂಗ

ʼಟ್ವಿನ್ ಟ್ಯೂಬ್ʼ ಸುರಂಗದ ನಿರ್ಮಾಣವು ರೇವಾದಿಂದ ಸಿಧಿ ನಡುವಿನ ದೂರವನ್ನು ಕಡಿತಗೊಳಿಸಿದ್ದು, ಸುಮಾರು 7 ಕಿಮೀ ಕಡಿಮೆಗೊಳಿಸಿದೆ. ಇದರಿಂದ ಪ್ರಯಾಣಿಕರ ಪ್ರಯಾಣದ ಸಮಯವು 45 ನಿಮಿಷಗಳಷ್ಟು ಕಡಿಮೆಯಾಗುತ್ತದೆ ಎಂದಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಸುಸ್ಥಿರತೆಯೊಂದಿಗೆ ನವ ಭಾರತವನ್ನು ಪರಿವರ್ತಿಸುವುದು ನಮ್ಮ ಉತ್ತಮ ಆಡಳಿತದ ವಿಶಿಷ್ಟ ಲಕ್ಷಣವಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು