ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ಲಂಪಿ ವೈರಸ್ ಚರ್ಮ ರೋಗವು ದಿನದಿಂದ ದಿನಕ್ಕೆ ಅತೀ ವೇಗವಾಗಿ ಹರಡುತ್ತಿದ್ದು ಇದುವರೆಗೆ 126 ಪಶುಗಳು ಸಾವನ್ನಪ್ಪಿವೆ ಎಂದು ಸಂಬಂಧಪಟ್ಟ ಇಲಾಖೆಯವರು ತಿಳಿಸಿದ್ದಾರೆ.
ರಾಜ್ಯದ 25 ಜಿಲ್ಲೆಗಳಲ್ಲಿ ಈ ಲಂಪಿ ವೈರಸ್ ಹರಡಿದ್ದು ದಿನ ಕಳೆದ ಹಾಗೆ ತನ್ನ ವ್ಯಾಪ್ತಿಯನ್ನು ಹೆಚ್ಚುಮಾಡಿಕೊಳ್ಳುತ್ತಿದೆ. ಲಂಪಿ ವೈರಸ್ ಚರ್ಮ ರೋಗದಿಂದ ಇಲ್ಲಿಯವೆರೆಗೆ ಒಟ್ಟು 126 ಪಶುಗಳು ಮೃತಪಟ್ಟಿವೆ. ಆದರೆ ಈ ಲಂಪಿ ಸ್ಕಿನ್ ಡಿಸೀಸ್(LSD) ಪ್ರಾಣಿಗಳಿಂದ ಅಥವಾ ಪಶು ಹಾಲಿನಿಂದ ಮನುಷ್ಯರಿಗೆ ಹರಡುವುದಿಲ್ಲ ಎಂದು ಮಹಾರಾಷ್ಟ್ರದ ಪಶುಸಂಗೋಪನಾ ಇಲಾಖೆಯವರು ಮಾಹಿತಿ ನೀಡಿದ್ದಾರೆ.

ರೋಗದ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನು ಖರೀದಿಸಲು ಡಿಪಿಸಿ ಮೂಲಕ ಜಿಲ್ಲೆಗೆ 1 ಕೋಟಿ ಹಣ ಲಭ್ಯವಾಗಿದ್ದು, ಮಹಾರಾಷ್ಟ್ರ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವ್ಯಾಕ್ಸಿನೇಟರ್‌ಗಳು ಮತ್ತು ಇಂಟರ್ನ್‌ಗಳಿಗೆ ಪ್ರತಿ ಲಸಿಕೆಗೆ 3 ರೂ. ಗೌರವಧನವನ್ನು ನೀಡಲು ಸಹ ಅನುಮತಿಸಲಾಗಿದೆ.
ಈ ಲಂಪಿ ವೈರಸ್ ರೋಗ ಹರಡಲು ನೊಣಗಳು, ಸೊಳ್ಳೆಗಳೇ ಕಾರಣವೆಂದೂ, ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರತೀ ಊರಿನಲ್ಲಿ ಕೀಟನಾಶಕಗಳ ಸಿಂಪಡಣೆ ಮಾಡುವಂತೆ ಮಹಾರಾಷ್ಟ್ರದ ಪಶುಸಂಗೋಪನಾ ಇಲಾಖೆಯು ಗ್ರಾಮ ಪಂಚಾಯತ್‌ಗಳಿಗೆ ಸೂಚನೆ ನೀಡಿದೆ.