Tuesday, January 27, 2026

ಸತ್ಯ | ನ್ಯಾಯ |ಧರ್ಮ

ಮಹಾರಾಷ್ಟ್ರದಲ್ಲಿ ಹೆಚ್ಚಿದ ಲಂಪಿ ವೈರಸ್‌: 126 ಪಶುಗಳ ಸಾವು

ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ಲಂಪಿ ವೈರಸ್‌ ಚರ್ಮ ರೋಗವು  ದಿನದಿಂದ ದಿನಕ್ಕೆ ಅತೀ ವೇಗವಾಗಿ ಹರಡುತ್ತಿದ್ದು ಇದುವರೆಗೆ 126 ಪಶುಗಳು ಸಾವನ್ನಪ್ಪಿವೆ ಎಂದು ಸಂಬಂಧಪಟ್ಟ ಇಲಾಖೆಯವರು ತಿಳಿಸಿದ್ದಾರೆ.

ರಾಜ್ಯದ 25 ಜಿಲ್ಲೆಗಳಲ್ಲಿ ಈ ಲಂಪಿ ವೈರಸ್‌ ಹರಡಿದ್ದು ದಿನ ಕಳೆದ ಹಾಗೆ ತನ್ನ ವ್ಯಾಪ್ತಿಯನ್ನು ಹೆಚ್ಚುಮಾಡಿಕೊಳ್ಳುತ್ತಿದೆ. ಲಂಪಿ ವೈರಸ್‌ ಚರ್ಮ ರೋಗದಿಂದ ಇಲ್ಲಿಯವೆರೆಗೆ ಒಟ್ಟು 126 ಪಶುಗಳು ಮೃತಪಟ್ಟಿವೆ. ಆದರೆ ಈ ಲಂಪಿ ಸ್ಕಿನ್‌ ಡಿಸೀಸ್‌(LSD) ಪ್ರಾಣಿಗಳಿಂದ ಅಥವಾ ಪಶು ಹಾಲಿನಿಂದ ಮನುಷ್ಯರಿಗೆ ಹರಡುವುದಿಲ್ಲ ಎಂದು ಮಹಾರಾಷ್ಟ್ರದ ಪಶುಸಂಗೋಪನಾ ಇಲಾಖೆಯವರು ಮಾಹಿತಿ ನೀಡಿದ್ದಾರೆ.

ಸೋಂಕಿತ ಪಶುಗಳು

ರೋಗದ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನು ಖರೀದಿಸಲು ಡಿಪಿಸಿ ಮೂಲಕ ಜಿಲ್ಲೆಗೆ 1 ಕೋಟಿ ಹಣ ಲಭ್ಯವಾಗಿದ್ದು, ಮಹಾರಾಷ್ಟ್ರ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವ್ಯಾಕ್ಸಿನೇಟರ್‌ಗಳು ಮತ್ತು ಇಂಟರ್ನ್‌ಗಳಿಗೆ ಪ್ರತಿ ಲಸಿಕೆಗೆ 3 ರೂ. ಗೌರವಧನವನ್ನು ನೀಡಲು ಸಹ ಅನುಮತಿಸಲಾಗಿದೆ.

ಈ ಲಂಪಿ ವೈರಸ್ ರೋಗ ಹರಡಲು ನೊಣಗಳು, ಸೊಳ್ಳೆಗಳೇ ಕಾರಣವೆಂದೂ, ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರತೀ ಊರಿನಲ್ಲಿ ಕೀಟನಾಶಕಗಳ ಸಿಂಪಡಣೆ ಮಾಡುವಂತೆ ಮಹಾರಾಷ್ಟ್ರದ ಪಶುಸಂಗೋಪನಾ ಇಲಾಖೆಯು ಗ್ರಾಮ ಪಂಚಾಯತ್‌ಗಳಿಗೆ ಸೂಚನೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page