ನ್ಯಾಯ ಕೇಳಲು ಹೋದ ಮಹಿಳೆಗೆ ಸಚಿವ ಸೋಮಣ್ಣ ಕಪಾಳಮೋಕ್ಷ, ವಿಡಿಯೋ ವೈರಲ್

ಚಾಮರಾಜನಗರದ ಗುಂಡ್ಲುಪೇಟೆಯ ಹಂಗಳ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ವಸತಿ ಸಚಿವ ವಿ. ಸೋಮಣ್ಣ ಕಾಪಾಳಕ್ಕೆ ಹೊಡೆದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಂಗಳ ಗ್ರಾಮದಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಆಗಿರುವ ಗೊಂದಲ ಮತ್ತು ಈ ಬಗ್ಗೆ ತಮಗಾದ ಆನ್ಯಾಯವನ್ನು ಹೇಳಿಕೊಳ್ಳಲು ಮಹಿಳೆಯೊಬ್ಬರು ಸಚಿವರ ಬಳಿ ತೆರಳಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಸಚಿವರನ್ನು ಪ್ರಶ್ನಿಸಿದ ಮಹಿಳೆಗೆ ವಿ. ಸೋಮಣ್ಣ ಕಾಪಾಳಕ್ಕೆ ಹೊಡೆದಿದ್ದಾರೆ.

ಈ ಬಗ್ಗೆ ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ತನ್ನ ನೈಜ ಸಂಸ್ಕೃತಿಯನ್ನು ಹೊರಹಾಕಿದೆ. ಸಚಿವ ಸೋಮಣ್ಣ ಬಹಿರಂಗವಾಗಿ ಆ ಮಹಿಳೆಗೆ ಕ್ಷಮೆಯಾಚಿಸ ಬೇಕು ಮತ್ತು ಅವರಿಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು