ಮಳೆ ಹಾನಿಗೆ ಪರಿಹಾರವಾಗಿ 600 ಕೋಟಿ ಬಿಡುಗಡೆ : ರಾಜ್ಯ ಸರ್ಕಾರ

ಬೆಂಗಳೂರು : ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಸಂಭವಿಸಿರುವ ಹಾನಿಗೆ ಪರಿಹಾರವಾಗಿ  ರಾಜ್ಯ ಸರ್ಕಾರ 600 ಕೋಟಿ ಬಿಡುಗಡೆ ಮಾಡಿದೆ

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು ರೈತರು ಬೆಳೆ ಹಾನಿಯಿಂದ ತೀರಾ ನಷ್ಟ ಅನುಭವಿಸುವಂತಾಗಿದೆ. ಹಲವಾರು ಮಂದಿ ತಮ್ಮ ಮನೆಗಳನ್ನೂ ಕಳೆದುಕೊಂಡು ಮೂಲ ಸೌಕರ್ಯಗಳೇ ಇಲ್ಲದಂತೆ ಮುಂದಿನ ಕೆಲ ದಿನಗಳ ಜೀವನದ ಬಗ್ಗೆ ಚಿಂತಿಸಿ ಕಂಗಾಲಾಗಿ ಕುಳಿತಿದ್ದಾರೆ.ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಕೊಂಚ ಮಟ್ಟಿನ ಪರಿಹಾರ ಒದಗಿಸುವುದಕ್ಕಾಗಿ 600 ಕೋಟಿ ರೂ ಅನುದಾನ ಘೋಷಣೆ ಮಾಡಿದ್ದು  ರೈತರ ಬೆಳೆ ಪರಿಹಾರವಾಗಿ  ತಕ್ಷಣಕ್ಕೆ 116 ಕೋಟಿ ರೂ ಬಿಡುಗಡೆ ಮಾಡಿದೆ. ಈ ಕಾರಣ ಸಂಕಷ್ಟದಲ್ಲಿರುವವರಿಗೆ ಕೊಂಚ ನೆಮ್ಮದಿಯ ಉಸಿರು ಬಿಡುವ ಸುದ್ದಿ ಸರ್ಕಾರ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು