Monday, June 17, 2024

ಸತ್ಯ | ನ್ಯಾಯ |ಧರ್ಮ

ಮಳೆ ಹಾನಿ: ಜನರ ಆಕ್ರೋಶಕ್ಕೆ ಕಾರಣವಾದ ಕೇಂದ್ರ ಅಧ್ಯಯನದ ಸಮೀಕ್ಷೆ

ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನ ತತ್ತರಿಸಿದ್ದು, ಪ್ರವಾಹದಿಂದ  ಹಾನಿಗೀಡಾಗಿದ್ದ ಪ್ರದೇಶಗಳ ಅಧ್ಯಯನಕ್ಕೆ ಬಂದಿದ್ದ ಕೇಂದ್ರ ಸಮೀಕ್ಷಾ ತಂಡವು ಬೇಕೋ-ಬೇಡವೋ ಎಂಬಂತೆ ಕೆಲವು ಗ್ರಾಮಗಳಿಗೆ ಭೇಟಿ ಕೊಟ್ಟಿದ್ದು, ತಂಡವು ಸಮರ್ಪಕ ಮಾಹಿತಿ ಸಂಗ್ರಹಿಸದೇ ವಾಪಸ್‌ ತರಳಿದೆ ಎಂದು ಹಾನಿಪೀಡಿತ ಪ್ರದೇಶಗಳ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿರುವ ರಾಜ್ಯ ಕಾಂಗ್ರೆಸ್‌, ಅತಿವೃಷ್ಟಿ ಹಾನಿಯಿಂದ ಇಡೀ ರಾಜ್ಯ ನಲುಗಿದೆ, ಆದರೆ ಕೇಂದ್ರ ಅಧ್ಯಯನ ತಂಡದಿಂದ ಫೋಟೋಶೂಟ್‌ಗಾಗಿ ಕೇವಲ 5 ನಿಮಿಷದಲ್ಲಿ ಕಾಟಾಚಾರದ ಸಮೀಕ್ಷೆ ನಡೆಸಲಾಗಿದೆ, ಇನ್ನು ಪರಿಹಾರ ಎಷ್ಟರ ಮಟ್ಟಿಗೆ ಬರಲಿದೆ? ಎಂದು ಕಿಡಿಕಾರಿದೆ.

ಸಚಿವರಿಗೆ ಬಿಜೆಪಿಭ್ರಷ್ಟೋತ್ಸವದಲ್ಲಿ ಇರುವ ಆಸಕ್ತಿ ಜನರ ಕಷ್ಟ ಕೇಳುವುದರಲ್ಲಿ ಏಕಿಲ್ಲ ಬೊಮ್ಮಾಯಿ ಅವರೇ? ಇದೇನಾ ನಿಮ್ಮ ಜನಸ್ಪಂದನೆ? ಎಂದು ಕಾಂಗ್ರೆಸ್ ಟೀಕಿಸಿದೆ.

Related Articles

ಇತ್ತೀಚಿನ ಸುದ್ದಿಗಳು