Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ತಿರುವು ಪಡೆದುಕೊಂಡ ಮಂಡ್ಯ ಹನಿಟ್ರಾಪ್ ಪ್ರಕರಣ : RSS ಮುಖಂಡನಿಗೆ ಕಂಟಕ!

ತಿರುವು ಪಡೆದುಕೊಂಡ ಮಂಡ್ಯ ಹನಿಟ್ರಾಪ್ ಪ್ರಕರಣ : RSS ಮುಖಂಡನಿಗೆ ಕಂಟಕ!

0

ಹನಿಟ್ರಾಪ್ ಗೆ ಒಳಗಾಗಿದ್ದೇನೆ ಎಂದು ಆರೋಪಿಸಿ ಕಳೆದ ಆಗಸ್ಟ್ 19 ರಂದು ಮಂಗಳೂರು ಮೂಲದ RSS ಮುಖಂಡ ಜಗನ್ನಾಥ್ ಶೆಟ್ಟಿ ಎಂಬುವವರು ಮಂಡ್ಯ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಮಂಡ್ಯ ಪೊಲೀಸರಿಗೆ ಈಗ ಪ್ರಕರಣದಲ್ಲಿ ತಿರುವು ಪಡೆದುಕೊಂಡಿದ್ದು ದೂರುದಾರ RSS ಮುಖಂಡ ಜಗನ್ನಾಥ ಶೆಟ್ಟಿಗೇ ಕಂಟಕ ಎದುರಾಗಿದೆ.

ದೂರಿನ ಹಿನ್ನೆಲೆ ಏನು?
ಆಗಸ್ಟ್ 19 ರಂದು ಮಂಡ್ಯದ ಶ್ರೀನಿಧಿ ಗೋಲ್ಡ್ ಆಭರಣ ಅಂಗಡಿ ಮಾಲಿಕ ಜಗನ್ನಾಥ ಶೆಟ್ಟಿ ಮಂಡ್ಯದಿಂದ ಮಂಗಳೂರು ಹೋಗಲು ಬಸ್ ಕಾಯುತ್ತಿದ್ದಾಗ ನಾಲ್ವರು ಅಪರಿಚಿತರು ಮೈಸೂರು ವರೆಗೂ ಡ್ರಾಪ್ ಕೊಡುತ್ತೇವೆ ಎಂದು ಕಾರಿನಲ್ಲಿ ಕರೆದೊಯ್ದಿದ್ದಾರೆ. ನಂತರ ಮೈಸೂರಿನಲ್ಲಿ ಚಿನ್ನದ ಪರೀಕ್ಷೆಯ ನೆಪವೊಡ್ಡಿ ಆತನನ್ನು ಅಪಹರಿಸಿದ್ದಾರೆ. ಅಪಹರಣದ ನಂತರ ಯುವತಿಯೊಬ್ಬಳ ಜೊತೆಗೆ ಇದ್ದಂತೆ ವಿಡಿಯೋ ಚಿತ್ರೀಕರಣ ಮಾಡಿ 50 ಲಕ್ಷ ಹಣ ವಸೂಲಿ ಮಾಡಿದ್ದಾರೆ. ಹಾಗೂ 4 ಕೋಟಿ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಜಗನ್ನಾಥ ಶೆಟ್ಟಿ ಮಂಡ್ಯ ಪೊಲೀಸರಿಗೆ ದೂರು ದಾಖಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಮಂಡ್ಯದ ಸಲ್ಮಾಬಾನು ಎಂಬ ಹೆಸರಿನವರ ಜೊತೆಗೆ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ಸಧ್ಯ ಈ ಪ್ರಕರಣ ಸಂಪೂರ್ಣ ತಿರುವು ಪಡೆದುಕೊಂಡಿದ್ದು RSS ಮುಖಂಡ ಜಗನ್ನಾಥ ಶೆಟ್ಟಿಯ ಮೇಲೇ ವಂಚನೆಯ ಆರೋಪ ಕೇಳಿ ಬರುತ್ತಿದೆ. ಕಾಲೇಜು ಯುವತಿಗೆ ತಾನೊಬ್ಬ ಪ್ರಾಧ್ಯಾಪಕ ಎಂದು ಹೇಳಿ ವಂಚಿಸಿ, ಯುವತಿಯನ್ನು ಬಳಸಿಕೊಳ್ಳಲು ಹೊಂಚು ಹಾಕಿದ್ದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಮತ್ತು ಯುವತಿ ಮತ್ತು ಜಗನ್ನಾಥ ಶೆಟ್ಟಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ. ವಿಡಿಯೋ ಮತ್ತು ಆಡಿಯೋವನ್ನು ಗಮನಿಸಿದರೆ ಜಗನ್ನಾಥ ಶೆಟ್ಟಿ ಯುವತಿಯನ್ನು ವಂಚನೆಯ ಜಾಲಕ್ಕೆ ಎಳೆದದ್ದು ಸ್ಪಷ್ಟವಾಗಿ ಕಾಣುತ್ತಿದೆ.

ಆಡಿಯೋದಲ್ಲಿ ಯುವತಿಯನ್ನು ತಾನೊಬ್ಬ ಪ್ರಾಧ್ಯಾಪಕ ಎಂದು ವಂಚಿಸಿದ್ದು ಸ್ಪಷ್ಟವಾದರೆ, ವಿಡಿಯೋದಲ್ಲಿ ಯುವತಿಯ ಸಂಬಂಧಿಕರು ಜಗನ್ನಾಥ ಶೆಟ್ಟಿ ಮತ್ತು ಯುವತಿಗೆ ಹಲ್ಲೆ ನಡೆಸಿರುವುದು ಕಾಣ ಸಿಗುತ್ತಿದೆ.

ಹಾಗಾಗಿ RSS ಮುಖಂಡ ಜಗನ್ನಾಥ ಶೆಟ್ಟಿ ಯುವತಿಯನ್ನು ವಂಚಿಸಿದ ಆರೋಪದಿಂದ ತಪ್ಪಿಸಿಕೊಳ್ಳಲು ಅಪಹರಣ ಮತ್ತು ಹನಿಟ್ರಾಪ್ ನ ಕಥೆ ಕಟ್ಟಿದ್ದಾನೆ ಎನ್ನಲಾಗುತ್ತಿದೆ. ಸಧ್ಯ ಪ್ರಕರಣ ಕುತೂಹಲ ಹುಟ್ಟಿಸಿದ್ದು ಮಂಡ್ಯ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

You cannot copy content of this page

Exit mobile version