ಮಂಗಳೂರು: ನವೆಂಬರ್ ತಿಂಗಳಲ್ಲಿ ದುಬೈನಿಂದ ಆಗಮಿಸಿದ ಒಟ್ಟು 10 ಮಂದಿ ಪುರುಷ ಪ್ರಯಾಣಿಕರಿಂದ, 4,01,18,280/- ಮೌಲ್ಯದ 24 ಕ್ಯಾರೆಟ್ ಶುದ್ಧತೆಯ 7692.000 ಗ್ರಾಂ ಚಿನ್ನವನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ ) ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಎಂಐಎನ ಕಸ್ಟಮ್ಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಎಲ್ಇಡಿ ಬಲ್ಬ್, ರಿಸ್ಟ್ ವಾಚ್, ಕೀಪ್ಯಾಡ್ ಮೊಬೈಲ್ ಫೋನ್, ಟ್ರಾಲಿ ಬ್ಯಾಗ್‌ಗಳ ಮಣಿಗಳು, ಕ್ಯಾಪುಚಿನೋ ತಯಾರಕರ ಮೋಟಾರ್‌ನಲ್ಲಿ ಸಿಲ್ವರ್ ಲೇಪಿತ ಪ್ಲೇಟ್ಗಳು, ಕಾರ್ಟನ್ ಬಾಕ್ಸ್ನ ಪದರಗಳ ಒಳಗೆ ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ, ಡಬಲ್ ಲೇಯರ್ಡ್ ವೇಸ್ಟ್ (ಬನಿಯನ್), ಪ್ಯಾಕ್ಸ್ ಮತ್ತು ಗುದನಾಳದಲ್ಲಿ ಧರಿಸುವ ಒಳಉಡುಪುಗಳು ಮತ್ತು ಸಾಕ್ಸ್‌ಗಳಲ್ಲಿ ಸೇರಿದಂತೆ. ವಿವಿಧ ವಿಧಾನಗಳನ್ನು ಬಳಸಿಕೊಂಡು ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಚಿನ್ನ ಕಳ್ಳಸಾಗಾಣೆ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಅವರ ಬಳಿ ಇರುವ ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.