ಮಂಗಳೂರಿನಲ್ಲಿ ಮುಂದುವರೆದ ಸರಣಿ ಕೊಲೆ

ಸುರತ್ಕಲ್‌ :  ಮಂಗಳೂರು ಹೊರವಲಯದ ಸುರತ್ಕಲ್‌ ಭಾಗದಲ್ಲಿ ಮಹಮ್ಮದ್ ಫಾಝಿಲ್ ಎಂಬ ಯುವಕ ಕೊಲೆಯಾಗಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುವಾರ ರಾತ್ರಿ ಮಂಗಳೂರು ಬಳಿಯ ಸುರತ್ಕಲ್‌ನಲ್ಲಿ ಕಾರ್‌ನಲ್ಲಿ ಬಂದಿದ್ದ ನಾಲ್ವರು ಮುಸುಕುದಾರಿ ದುಷ್ಕರ್ಮಿಗಳು ಬಟ್ಟೆ ಅಂಗಡಿಗೆ ನುಗ್ಗಿ ಮಹಮ್ಮದ್ ಫಾಸಿಲ್ (23) ಅವರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಮಹಮ್ಮದ್ ಫಾಝಿಲ್ ಅವರು, ರಾತ್ರಿ 8 ಗಂಟೆಯ ಸುಮಾರಿಗೆ ಎಂಆರ್‌ಪಿಎಲ್‌ ರಸ್ತೆಯ ಸುರತ್ಕಲ್ ಮಾರುಕಟ್ಟೆ ಸಮೀಪದ ಬಟ್ಟೆ ಅಂಗಡಿಗೆ ಹೋಗುತ್ತಿರುವ ಸಂದರ್ಭದಲ್ಲಿ, ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದು. ಕೊಲೆಯಾದ  ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  

ಈ ಕಾರಣ ಸುರತ್ಕಲ್‌ ಭಾಗದಲ್ಲಿ ಪರಿಸ್ಥಿತಿ ಗಂಭೀರವಾಗಿರುವುದರಿಂದ  ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ನಗರ ಪೊಲೀಸ್ ಕಮಿಷನರ್ ಮನವಿಯ ಮೇರೆಗೆ‌ ಜಿಲ್ಲಾಧಿಕಾರಿ ಶುಕ್ರವಾರ (ಜು.29) ಪಣಂಬೂರು, ಮೂಲ್ಕಿ, ಬಜಪೆ, ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲಾ- ಕಾಲೇಜುಗಳಿಗೆ ರಜೆ‌ ಘೋಷಿಸಿದ್ದು, ಸೆಕ್ಷೆನ್‌ 144 ಜಾರಿ ಮಾಡಲಾಗಿದೆ. 

Related Articles

ಇತ್ತೀಚಿನ ಸುದ್ದಿಗಳು