Home ರಾಜ್ಯ ದಕ್ಷಿಣ ಕನ್ನಡ ಲಂಚ ಸ್ವೀಕರ ಮಂಗಳೂರಿನ ಇನ್ಸ್‌ಪೆಕ್ಟರ್ ಬಾಲಕೃಷ್ಣ – ಲೋಕಾಯುಕ್ತ ಬಲೆಗೆ

ಲಂಚ ಸ್ವೀಕರ ಮಂಗಳೂರಿನ ಇನ್ಸ್‌ಪೆಕ್ಟರ್ ಬಾಲಕೃಷ್ಣ – ಲೋಕಾಯುಕ್ತ ಬಲೆಗೆ

0

ಮಂಗಳೂರು: ಲಂಚದ ಹಣ ಸ್ವೀಕರಿಸುತ್ತಿದ್ದಾಗ ಮಂಗಳೂರಿನ ಬಜಪೆ ಠಾಣೆ ಇನ್ಸ್‌ಪೆಕ್ಟರ್ ಬಾಲಕೃಷ್ಣ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.ವಂಚನೆ ಪ್ರಕರಣ ಒಂದರಲ್ಲಿ ಜಪ್ತಿ ಮಾಡಿದ್ದ ಹಣ ಬಿಡುಗಡೆಗಾಗಿ ಬಾಲಕೃಷ್ಣ 25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಮೊದಲ ಕಂತಿನಲ್ಲಿ 15 ಸಾವಿರಕ್ಕೆ ಲಂಚ ಪಡೆದಿದ್ದ ಬಾಲಕೃಷ್ಣ ಇಂದು 5 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ. ಸದ್ಯ ಬಾಲಕೃಷ್ಣರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿನ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಯುವಕನೋರ್ವನ ಕೊಲೆಯಾಗಿದೆ. ಮೃತನನ್ನು ಮಾದಿಗ ಸಮುದಾಯದ 17 ವರ್ಷದ ಸಿಂಹಾದ್ರಿ ಎಂದು ಗುರುತಿಸಲಾಗಿದೆ. ಮಗನ ಸಾವಿನ ವಿಚಾರ ತಿಳಿದು ತಾಯಿ ಅನ್ನಪೂರ್ಣ ಅಸ್ವಸ್ಥರಾಗಿದ್ದು ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗಣೇಶ ವಿಸರ್ಜನಾ ಕಾರ್ಯಕ್ರಮದ ವೇಳೆ ನಾಯಕ ಸಮುದಾಯದ ಮಾರುತೇಶ್ (24) ಎಂಬಾತ ಸಿಂಹಾದ್ರಿಗೆ ನೀನು ಕೀಳು ಜಾತಿಯವ ನಿಂದಿಸಿ, ಬಳಿಕ ಕಲ್ಲಿನಿಂದ ಹಲ್ಲೆ ನಡೆಸಿದ್ದು ಭೀಕರವಾಗಿ ಗಾಯಗೊಂಡಿದ್ದ ಸಿಂಹಾದ್ರಿ ಮೃತಪಟ್ಟಿದ್ದಾನೆ. ಡಾನ್ಸ್ ವಿಚಾರವಗಿ ಕೊಲೆ ನಡೆದಿದೆ ಎಂದು ಯುವಕನ ಪೋಷಕರು ಆರೋಪಿಸಿದ್ದಾರೆ. ಘಟನೆ ಬಗ್ಗೆ ತಾಯಿ ಅನ್ನಪೂರ್ಣ ಅವರ ದೂರಿನ ಅನ್ವಯ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content of this page

Exit mobile version