Friday, August 2, 2024

ಸತ್ಯ | ನ್ಯಾಯ |ಧರ್ಮ

ಮಣಿಪುರ: ನಮ್ಮನ್ನು ಮನೆಗೆ ಕಳುಹಿಸಿ ಎಂದ ನಿರಾಶ್ರಿತರ ಮೇಲೆ ಆಶ್ರುವಾಯು ಸಿಡಿಸಿದ ಪೊಲೀಸರು

ಇಂಫಾಲ: ಮಣಿಪುರದ ನಿವಾಸಿಗಳು ತಮ್ಮ ಮನೆಗಳಿಗೆ ಹಿಂತಿರುಗಿ ಕಳುಹಿಸುವಂತೆ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಇಂದು ಬ್ಯಾನರ್ ಮತ್ತು ಧ್ವಜಗಳೊಂದಿಗೆ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.

ಮೆರವಣಿಗೆ ಸಿಎಂ ನಿವಾಸದತ್ತ ತೆರಳಲು ಯತ್ನಿಸಿತು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಹಾಗೂ ರಬ್ಬರ್ ಬುಲೆಟ್ ಪ್ರಯೋಗಿಸಿದರು. ಇಂಫಾಲ್ ಕಣಿವೆಯಲ್ಲಿ ಪ್ರಾಬಲ್ಯ ಹೊಂದಿರುವ ಮೈತೇಯಿ ಮತ್ತು ಗುಡ್ಡಗಾಡು ಪ್ರದೇಶಗಳ ಕುಕಿಗಳ ನಡುವೆ ಮೇ 2023ರಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತು. ಈ ಹಿನ್ನೆಲೆಯಲ್ಲಿ ಮೋರ್‌ನಲ್ಲಿರುವ ತಮ್ಮ ಮನೆಗಳಿಂದ ಓಡಿಹೋದ ನಿರಾಶ್ರಿತರು ಇಂಫಾಲ್‌ನ ಅಕಂಪತ್‌ನಲ್ಲಿ ಸ್ಥಾಪಿಸಲಾದ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ಏತನ್ಮಧ್ಯೆ, ಒಂದು ವರ್ಷದಿಂದ ಪರಿಹಾರ ಶಿಬಿರಗಳಲ್ಲಿ ಕಠಿಣ ಪರಿಸ್ಥಿತಿಯಲ್ಲಿ ವಾಸಿಸುತ್ತಿರುವ ವಲಸಿಗರು ತಮ್ಮ ಮನೆಗಳಿಗೆ ಮರಳುವ ನಿರೀಕ್ಷೆಯಿದೆ. ಇದಕ್ಕಾಗಿ ಗುರುವಾರ ಬೃಹತ್ ರ ್ಯಾಲಿ ನಡೆಸಲಾಯಿತು. ಸರಕಾರ ತಮಗೆ ಭದ್ರತೆ ಒದಗಿಸಿ, ಕಳೆದುಕೊಂಡಿರುವ ಹಣವನ್ನು ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದರು.

ಮತ್ತೊಂದೆಡೆ ನಿವಾಸಿಗಳು ರ್ಯಾಲಿಯಾಗಿ ಸಿಎಂ ಬಂಗಲೆಯತ್ತ ತೆರಳಲು ಯತ್ನಿಸಿದರು. ಈ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಿದ ಪೊಲೀಸರು ಅವರನ್ನು ತಡೆದರು. ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಶೆಲ್ ಮತ್ತು ರಬ್ಬರ್ ಗುಂಡುಗಳನ್ನು ಬಳಸಲಾಯಿತು. ಈ ಘಟನೆಯಲ್ಲಿ ಉಸಿರುಗಟ್ಟುವಿಕೆಯಿಂದಾಗಿ ಸಮೀಪದ ಶಾಲೆಯ ಐವರು ವಿದ್ಯಾರ್ಥಿಗಳು ಸೇರಿ ಹತ್ತು ನಿವಾಸಿಗಳು ಮೂರ್ಛೆ ಹೋದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page