ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಮೊಹಂದಿ, ಅಬುಜ್ಮಾದ್‌ನಲ್ಲಿ ನಕ್ಸಲರು ನೆಲಬಾಂಬ್ ದಾಳಿ ನಡೆಸಿದ್ದಾರೆ. ಸ್ಫೋಟದಲ್ಲಿ ನಾಲ್ವರು ಐಟಿಬಿಪಿ ಯೋಧರು ಗಾಯಗೊಂಡಿದ್ದಾರೆ.
ಇದರಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆಗಾಗಿ ರಾಯ್‌ಪುರಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಟಿಬೆಟಿಯನ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್, ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಮತ್ತು ಡಿಸ್ಟ್ರಿಕ್ಟ್ ರಿಸರ್ವ್ ಪೊಲೀಸ್ ಫೋರ್ಸ್‌ನ ಜಂಟಿ ತಂಡವು ನಾರಾಯಣಪುರ ಜಿಲ್ಲೆಯ ಓರ್ಚಾ, ಮೊಂಡಿ ಮತ್ತು ಎರತ್‌ಬಟ್ಟಿ ಪ್ರದೇಶದಿಂದ ಶೋಧ ಕಾರ್ಯಾಚರಣೆಗಾಗಿ ಧುರ್ಬೇರಾಗೆ ಹೋಗುತ್ತಿದ್ದಾಗ ನಕ್ಸಲರು ಐಇಡಿ ಸ್ಫೋಟಿಸಿದರು. ಕೊಡ್ಲಿಯರ್ ಗ್ರಾಮದ ಬಳಿಯ ಅರಣ್ಯದಲ್ಲಿ ನೆಲಬಾಂಬ್ ಸ್ಫೋಟಗೊಂಡು ನಾಲ್ವರು ಯೋಧರು ಗಾಯಗೊಂಡಿದ್ದಾರೆ.
ಇಬ್ಬರನ್ನು ಉತ್ತಮ ಚಿಕಿತ್ಸೆಗಾಗಿ ರಾಯ್‌ಪುರಕ್ಕೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಮಹಾರಾಷ್ಟ್ರದ ಸತಾರಾ ಮೂಲದ ಅಮರ್ ಪನ್ವಾರ್ (36) ಮತ್ತು ಆಂಧ್ರಪ್ರದೇಶದ ಕಡಪಾ ಮೂಲದ ಕೆ ರಾಜೇಶ್ (36) ಎಂದು ಗುರುತಿಸಲಾಗಿದೆ.