Monday, June 16, 2025

ಸತ್ಯ | ನ್ಯಾಯ |ಧರ್ಮ

ವಿದ್ಯುತ್ ತಂತಿ ತುಳಿದು ಕಾಫಿ ತೋಟದಲ್ಲಿ ತಾಯಿಯೊಂದಿಗೆ ಮರಿಯಾನೆ ಸಾವು

ಹಾಸನ : ಸಕಲೇಶಪುರ ತಾಲೂಕಿನ ಗುಡ್ಡೆಬೆಟ್ಟ ಗ್ರಾಮದ ಬಳಿಯ ಎಬಿಸಿ ಎಸ್ಟೇಟ್‌ನಲ್ಲಿ ತಡ ರಾತ್ರಿ ಎರಡು ಕಾಡಾನೆಗಳು ವಿದ್ಯುತ್ ಶಾಕ್‌ಗೆ ಬಲಿಯಾಗಿರುವ ದಾರುಣ ಘಟನೆ ನಡೆದಿದೆ.

ತಾಯಿ ಆನೆಯೊಂದಿಗೆ ಸಂಚರಿಸುತ್ತಿದ್ದ ಮರಿಯಾನೆ ತಾಯಿಯೊಂದಿಗೆ ತಾನೂ ಪ್ರಾಣ ಕಳೆದುಕೊಂಡು ಬಿದ್ದಿದೆ.

ಗಾಳಿ-ಮಳೆಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಕಾರಣ ಈ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಆಹಾರ ಅರಸಿ ಕಾಫಿ ತೋಟದೊಳಗೆ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page