Home ಬ್ರೇಕಿಂಗ್ ಸುದ್ದಿ ಗಡಿ ದೇಶ ಮಯನ್ಮಾರ್ ನಲ್ಲಿ 7.7 ತೀವ್ರತೆಯ ಭೀಕರ ಭೂಕಂಪ

ಗಡಿ ದೇಶ ಮಯನ್ಮಾರ್ ನಲ್ಲಿ 7.7 ತೀವ್ರತೆಯ ಭೀಕರ ಭೂಕಂಪ

0

ಮಧ್ಯ ಮಯನ್ಮಾರ್ ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಧ್ಯಾಹ್ನ 12:30 ರ ಸುಮಾರಿಗೆ 7.7 ತೀವ್ರತೆಯ ಭೂಕಂಪ ಸಂಭವಿಸುತ್ತಿದ್ದಂತೆ ಅನೇಕ ಕಟ್ಟಡಗಳಲ್ಲಿದ್ದ ಜನರು ಆತಂಕದಿಂದ ಹೊರಗೆ ಓಡಿದ್ದಾರೆ. ಕೇವಲ 15 ನಿಮಿಷಗಳ ಅಂತರದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ.

ಜನರು ಭಯಭೀತರಾಗಿ ಓಡಿ ಬಂದಿರುವ ದೃಶ್ಯ ಸಿಸಿಟವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಾನಿ ಅಥವಾ ಸಾವುನೋವುಗಳ ಬಗ್ಗೆ ಯಾವುದೇ ವರದಿಯಾಗಿಲ್ಲ. ಮಯನ್ಮಾರ್ ಗಡಿ ದೇಶವಾಗಿರುವ ಭಾರತದ ನವದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ರಿಕ್ಷರ್‌ ಮಾಪಕದಲ್ಲಿ ಮೊದಲ ಬಾರಿ ಭೂಕಂಪದ ತೀವ್ರತೆ 7.7, 2ನೇ ಬಾರಿಗೆ 6.4 ತೀವ್ರತೆ ದಾಖಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಹೇಳಿದೆ.

ತಿಂಗಳ ಆರಂಭದಲ್ಲಿಯೂ (ಮಾರ್ಚ್​.03), ಮಯ್ಮಾನಾರ್​ನಲ್ಲಿ ಭೂಕಂಪ ಸಂಭವಿಸಿದ್ದು. ರಿಕ್ಟರ್​ ಮಾಪಕದಲ್ಲಿ 4.3 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತ್ತು. ಈ ಭೂಕಂಪ ಭೂ ಮೇಲ್ಮೈನಿಂದ ಸುಮಾರು 125 ಕಿಮೀ ಆಳದಲ್ಲಿ ಸಂಭವಿದ್ದು ವರದಿಯಾಗಿತ್ತು. ಆದರೆ ಈ ಬಾರಿ ಸಂಭವಿಸಿರುವ ಭೂಕಂಪ ಭೂಮಿಯಿಂದ ಕೇವಲ 10 ಕಿಮೀ ಆಳದಲ್ಲಿ. ಈ ಭೂಕಂಪವನ್ನು ಅತ್ಯಂತ ಅಪಾಯಕಾರಿ ಎಂದು ಹೇಳಲಾಗಿದೆ.

You cannot copy content of this page

Exit mobile version