ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳಿಂದ ಮೆಗಾ ರೇಡ್: ಏಕಕಾಲಕ್ಕೆ ಬೆಂಗಳೂರಿನ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ

ತೆರಿಗೆ ಕಟ್ಟದ ಉದ್ಯಮಿಗಳಿಗೆ ಐಟಿ ಅಧಿಕಾರಿಗಳ ಶಾಕ್

ವಿಜಯನಗರ, ಬಿಟಿಎಂ ಲೇಔಟ್‌, ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್‌, ಪ್ರಶಾಂತ ನಗರ ಸೇರಿದಂತೆ ಹಲವೆಡೆ ದಾಳಿ. ಚೆನ್ನೈ, ದೆಹಲಿಯಿಂದ ರಾತ್ರೋರಾತ್ರಿ ಬೆಂಗಳೂರಿಗೆ ಬಂದ ಐಟಿ ಟೀಂ.

ಬೆಂಗಳೂರಿನ ಡಾ.ಸಂಧ್ಯಾ ಪಾಟೀಲ್‌ ಮನೆ ಮೇಲೆ ಐಟಿ ರೇಡ್.‌ ವಿಜಯನಗರದಲ್ಲಿ ಕ್ಲಿನಿಕ್‌ ಹೊಂದಿರುವ ಸಂಧ್ಯಾ ಪಾಟೀಲ್.‌ ಪ್ರಶಾಂತ ನಗರದಲ್ಲಿರುವ ಸಂಧ್ಯಾ ಪಾಟೀಲ್‌ ಮನೆ ಮೇಲೂ ದಾಳಿ. ದಾಳಿ ಮಾಡಿ ಸಂಧ್ಯಾರನ್ನು ಕರೆದುಕೊಂಡು ಹೋದ ಐಟಿ.

ಶಾಂತಿನಗರದ ಉದ್ಯಮಿ ನವೀನ್‌ ಮನೆ ಮೇಲೂ ಐಟಿ ರೇಡ್.‌ ಎರಡು ಇನ್ನೋವಾದಲ್ಲಿ ಬಂದಿರುವ ಐಟಿ ಅಧಿಕಾರಿಗಳು. 8 ಅಧಿಕಾರಿಗಳಿಂದ ನವೀನ್‌ ನಿವಾಸದಲ್ಲಿ ಪರಿಶೀಲನೆ. ತೆರಿಗೆ ವಂಚನೆ ಆರೋಪ ಹಿನ್ನೆಲೆ ಐಟಿ ಅಧಿಕಾರಿಗಳಿಂದ ದಾಳಿ.

Related Articles

ಇತ್ತೀಚಿನ ಸುದ್ದಿಗಳು