Home ರಾಜ್ಯ ತುಮಕೂರು ಸೂತಕ ಎಂಬ ಮೌಢ್ಯ ಪದ್ಧತಿ ತೊಲಗಿಸಲು ʼಮೌಢ್ಯ ಮುಕ್ತ ಹಟ್ಟಿ ಅಭಿಯಾನʼ

ಸೂತಕ ಎಂಬ ಮೌಢ್ಯ ಪದ್ಧತಿ ತೊಲಗಿಸಲು ʼಮೌಢ್ಯ ಮುಕ್ತ ಹಟ್ಟಿ ಅಭಿಯಾನʼ

0

ತುಮಕೂರು: ಹೆಣ್ಣುಮಕ್ಕಳಿಗೆ ಮುಟ್ಟಾದಾಗ ಅದನ್ನು ಸೂತಕ ಎಂದು ಪರಿಗಣಿಸಿ, ಅವರನ್ನು ಊರಿನ ಆಚೆ ಉಳಿಸುವಂತಹ ಕಟ್ಟುಪಾಡಿನ ವಿರುದ್ಧ ಸಮುದಾಯದ ಹೆಣ್ಣುಮಕ್ಕಳೇ ಪ್ರತಿಭಟಿಸಿ ಮೌಢ್ಯದಿಂದ ಮುಕ್ತಗೊಳ್ಳುವ ಅಭಿಯಾನವೊಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ರಾಮಪ್ಪ ಹಟ್ಟಿಯಲ್ಲಿ ನಡೆದಿದೆ.

ಬುಡಕಟ್ಟು ಸಮುದಾಯವಾದ ಕಾಡುಗೊಲ್ಲ ಸಮುದಾಯದಲ್ಲಿ ಪರಂಪಾರಗತವಾಗಿ ಈ ಅನಿಷ್ಟ ಪದ್ಧತಿ ಮುಂದುವರೆದುಕೊಂಡು ಬಂದಿದೆ. ಇದಕ್ಕೆ ಧರ್ಮ ಸಂಪ್ರದಾಯದ ನೆಪಗಳನ್ನು ನೀಡಿಕೊಂಡು ಬರಲಾಗಿದೆ. ಹೆಣ್ಣುಮಕ್ಕಳು ಮುಟ್ಟಾದ ಸಮಯದಲ್ಲಿ ಮನೆಯಿಂದ, ಧಾರ್ಮಿಕ ಆಚರಣೆಗಳಿಂದ, ಇಷ್ಷೇ ಅಲ್ಲದೆ ಊರಿನಿಂದ ಹೊರಕ್ಕೆ ಒಂಟಿಯಾಗಿ ಉಳಿಸುವ ಪದ್ಧತಿ ಜಾರಿಲ್ಲಿದೆ. ಇದನ್ನು ತಪ್ಪು ಎಂದು ಗುರುತಿಸಿ ಇದರಿಂದ ಸಮುದಾಯವನ್ನು ಮುಕ್ತಗೊಳಿಸುವ ʼಮೌಡ್ಯ ಮುಕ್ತ ಹಟ್ಟಿ ಅಭಿಯಾನʼ ವೊಂದನ್ನು ಹಮ್ಮಿಕೊಳ್ಳಲಾಗಿತ್ತು.

ಮಹಿಳೆಯರು ಮುಟ್ಟಾದಾಗ ಸಮಾಜವು ಅದನ್ನು ಸೂತಕ ಎಂದು ಪರಿಗಣಿಸದೇ ಅದು ಪ್ರಕೃತಿ ಸಹಜವಾದಂತದ್ದು ಎನ್ನುವ ಜಾಗೃತಿಯನ್ನು ಗ್ರಾಮಸ್ಥರಿಗೆ ಮುಟ್ಟಿನ ಕುರಿತು ಅರಿವು ಮೂಡಿಸಿ, ಜನರ ಸಮ್ಮುಖದಲ್ಲಿಯೇ ಮುಟ್ಟಾದ ಮಹಿಳೆಯರಿಗೆ ಹೂಗುಚ್ಚವನ್ನು ನೀಡುವುದರ ಮೂಲಕ ಅರಿವು ಮಾಡಿಸಲಾಯಿತು. ಇಂದಿನಿಂದ ಈ ಸೂತಕದ ಸುಳಿ ಮಹಿಳೆಯರನ್ನು ಬಿಟ್ಟು ತೊಲಗಲಿ ಮತ್ತು ಈ ಕುರಿತು ಎಲ್ಲರೂ ವೈಜ್ಞಾನಿಕವಾಗಿ ಯೋಚನೆಮಾಡಿ ಎಂದು ತಿಳಿಸಿ ಹೇಳಲಾಯ್ತು.

ಸೂತಕದ ಮೌಢ್ಯ ತೊಲಗಲಿ: ಕೆಜೆಹಳ್ಳಿ ಸುರೇಶ್

 ಈ ಕುರಿತು ʼಪೀಪಲ್‌ ಮೀಡಿಯಾʼದೊಂದಿಗೆ ಮಾತನಾಡಿದ ಅಭಿಯಾನದ ರೂವಾರಿ ಕೆ.ಜೆ.ಹಳ್ಳಿ ಸುರೇಶ್‌ರವರು, ʼಮುಟ್ಟಾದಂತಹ ಸಂದರ್ಭದಲ್ಲಿ ಈ ಕಾಡುಗೊಲ್ಲ ಸುಮುದಾಯದಲ್ಲಿನ ಮಹಿಳೆಯರು, ಉಳಿದ ಮಹಿಳೆಯರಿಗಿಂತ ಹೆಚ್ಚಿನ ಸಮಸ್ಯೆಯನ್ನು ಹೆದರಿಸುತ್ತಿದ್ದು, ಈ ವೇಳೆ ಸಮುದಾಯದಲ್ಲಿ ಬಾಲಕೀಯರು, ಗರ್ಭಿಣಿಮಹಿಳೆಯರು ಎನ್ನುವುದನ್ನ ಲೆಕ್ಕಿಸದೆ ಅವರನ್ನು ಊರಿನಿಂದ ಹೊರಕ್ಕೆ ಇರಿಸಿ, ಅವರಿಗೆ ಬಾಳೆ ಎಲೆಗಳಲ್ಲಿ ಒಂದು ಗುಡಿಸಲಿನ ರೀತಿ ಉಳಿದುಕೊಳ್ಳಲು ವ್ಯವಸ್ಥೆ  ಮಾಡಲಾಗಿದ್ದು, ಅಲ್ಲಿ ಅವರಿಗೆ ದೂರದಿಂದ ಊಟ ನೀಡಲಾಗುತ್ತದೆ. ಮತ್ತೆ ಗರ್ಭಿಣಿ ಮಹಿಳೆಯರು ಮತ್ತು ಹೆರಿಗೆಯಾದ ಹೆಣ್ಣುಮಕ್ಕಳು ಎಷ್ಟೇ ತಿಂಗಳ ಮಕ್ಕಳಿದ್ದರು ಅವರು ಮಳೆ ಗಾಳಿ, ಚಳಿ, ಕ್ರಿಮಿಕೀಟಗಳ ಬಗ್ಗೆ ಯೋಚಿಸದೆ ಅಲ್ಲೇ ಉಳಿಯುವ ಪದ್ಧತಿ ಇದೆ. ಇನ್ನೂ ಶಾಲೆಗೆ ಹೋಗುವ ಹೆಣ್ಣು ಮಕ್ಕಳು, ಈ ಸಂದರ್ಭದಲ್ಲಿ ಏನೂ ಮಟ್ಟುವಂತಿಲ್ಲ. ಮುಟ್ಟಿದರೆ ಅದು ಸೂತಕ ಎಂದು ಪರಿಗಣಿಸಿ, ಸ್ನಾನ ಮಾಡಿ ಊರ ಒಳಗೆ ಹೋಗುವ ಪದ್ಥತಿ ಇಲ್ಲಿ ಆಚರಣೆಯಲ್ಲಿದೆ. ಈ ಕಾರಣ ಇಲ್ಲಿನ ಹಟ್ಟಿಯ ಎಷ್ಟೋ ಹೆಣ್ಣುಮಕ್ಕಳು ಮುಟ್ಟಾದ ಸಂದರ್ಭದಲ್ಲಿ ರಾತ್ರಿವೇಳೆ ಹಾವು ಕಚ್ಚಿ ಸತ್ತಿರುವುದು ಉಂಟು. ಆದರೂ ಕೂಡ ಈ ಪದ್ಧತಿ ರೂಢಿಯಲ್ಲಿರುವುದು ಇಲ್ಲಿನ ಜನರು ಅತಿಯಾಗಿ ಮೌಢ್ಯತೆ ಆಚರಣೆ ಮಾಡುತ್ತಿರಯವುದೇ ಕಾರಣ ಎನ್ನಬಹುದಾಗಿದೆʼ ಎಂದು ಬೇಸರ ವ್ಯಕ್ತಪಡಿಸಿದರು.

ಮೌಢ್ಯಾಚರಣೆಯ ಬಗ್ಗೆ ಕೆಜೆಹಳ್ಳಿ ಸುರೇಶ್‌ ಅವರು ಗ್ರಾಮಸ್ಥರಿಗೆ ಅರಿವು ಮೂಡಿಸುತ್ತಿರುವ ದೃಶ್ಯ

ʼಚಿಕ್ಕನಾಯಕನಹಳ್ಳಿ ತಾಲ್ಲೂಕಿನ ರಾಮಪ್ಪ ಹಟ್ಟಿ, ಕಾಡುಗೊಲ್ಲರ ಹಟ್ಟಿಯಾಗಿದ್ದು, ನಮಗೆಲ್ಲಾ ತಿಳಿದಿರುವ ಹಾಗೆ ಕಾಡುಗೊಲ್ಲ ಸಮುದಾಯವು ಅತ್ಯಂತ ಸಾಂಸ್ಕೃತಿಕ ಅನನ್ಯತೆಯನ್ನು ಒಳಗೊಂಡಿರುವ ಮತ್ತು ಬುಡಕಟ್ಟು ತನವನ್ನು ಉಳಿಸಿಕೊಂಡಿರುವಂತಹ ಸಮುದಾಯವಾಗಿದೆ. ಆದರೆ ಈ ಸಮುದಾಯಕ್ಕೆ ಸಾಮಾಜಿಕ ಆನ್ಯಾಯವಾಗಿದ್ದು, ಈ ಸುಮುದಾಯಕ್ಕೆ ಸಿಗಬೇಕಾದ ನ್ಯಾಯ ಸಿಗದಿರುವ ಕಾರಣ, ಅಭಿವೃದ್ದಿಯಿಂದ ಹಿಂದುಳಿದಿದೆ. ಇದರ ಪರಿಣಾಮವಾಗಿ ಶಿಕ್ಷಣ, ಸಾಮಾಜಿಕ ಜ್ಞಾನ, ಬುಡಕಟ್ಟುತನದಿಂದ ಹಿಂದುಳಿದಿದೆʼ ಎಂದರು.

ಮುಂದುವರೆದು ಮಾತನಾಡಿದ ಅವರು, ಮುಟ್ಟು ಎನ್ನುವುದು ಒಂದು ನೈಸರ್ಗಿಕವಾದ ಪಕ್ರಿಯೆ ಅಷ್ಟೇ, ಆದರೆ ಅದನ್ನು ಸೂತಕ ಎಂದು ತಪ್ಪಾಗಿ ಅರ್ಥೈಸಲಾಗಿದೆ, ಅದು ತಪ್ಪು. ಹೀಗಾಗಿ ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಅವರನ್ನು ಊರಿನಿಂದ ದೂರವಿಡುವ ಅವಶ್ಯಕತೆ ಇಲ್ಲಾ. ಅದನ್ನು ಎಲ್ಲರು ವೈಜ್ಞಾನಿಕವಾಗಿ ತಿಳಿಯಬೇಕಾಗಿರುವುದು ತುಂಬಾ ಅವಶ್ಯಕವಾಗಿದೆ. ಇದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಇದರಿಂದ ಮಹಿಳೆಯರನ್ನು ಇಂಥಹ ಪದ್ಧತಿಗಳಿಂದ ಮುಕ್ತಗೊಳಿಸಬಹುದು ಎಂದು ಹೇಳಿದರು.

You cannot copy content of this page

Exit mobile version