ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ನಿಧನ

ಮಾಧ್ಯಮ ಲೋಕದ ದಿಗ್ಗಜ, ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿ ಮಾಲಿಕ ರಾಮೋಜಿ ರಾವ್ ಇಂದು (ಶನಿವಾರ) ಮುಂಜಾನೆ ನಿಧನರಾಗಿದ್ದಾರೆ. ಹಲವು ದಿನಗಳ ವಯೋಸಹಜ ಅನಾರೋಗ್ಯದ ಕಾರಣ ಹೈದರಾಬಾದ್‌ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಾಮೋಜಿ ಫಿಲ್ಮ್ ಸಿಟಿ ಸೇರಿದಂತೆ ರಾಮೋಜಿ ಸಮೂಹ ಸಂಸ್ಥೆಗಳ ಒಡೆತನದಿಂದ ಅವರು ಮನೋರಂಜನಾ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದರು.

ಇತ್ತೀಚಿಗಷ್ಟೇ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿ ಸ್ಟಂಟ್‌ ಅಳವಡಿಕೆ ಮಾಡಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಚಿತ್ರರಂಗದ ಗಣ್ಯರೂ ಸೇರಿದಂತೆ, ರಾಜಕಾರಣಿಗಳು, ಸೆಲೆಬ್ರಿಟಿಗಳು ಇಂದು ರಾಮೋಜಿ ರಾವ್‌ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ. ಈನಾಡು, ಈಟಿವಿ, ಈಟಿವಿ ಭಾರತ್‌, ಮಾರ್ಗದರ್ಶಿ ಚಿಟ್‌ ಫಂಡ್‌ ಮುಂತಾದ ಸಂಸ್ಥೆಗಳು ಅವರ ಒಡೆತನದಲ್ಲಿದೆ.

Related Articles

ಇತ್ತೀಚಿನ ಸುದ್ದಿಗಳು