Monday, July 28, 2025

ಸತ್ಯ | ನ್ಯಾಯ |ಧರ್ಮ

350 ರುಪಾಯಿಗಾಗಿ ಚೂರಿಯಿಂದ ಇರಿದು ಶವದ ಬಳಿ ನೃತ್ಯ ಮಾಡಿದ ಅಪ್ರಾಪ್ತ ಬಾಲಕ

ದೆಹಲಿ: 18 ವರ್ಷದ ದೆಹಲಿಯ ವ್ಯಕ್ತಿಯೊರ್ವರು 21 ನವೆಂಬರ್, ಮಂಗಳವಾರ ಅಪ್ರಾಪ್ತ ವಯಸ್ಕನಿಂದ ಅನೇಕ ಬಾರಿ ಚೂರಿತಕ್ಕೆ ಒಳಗಾಗಿ ಕೊಲೆಯಾಗಿದ್ದಾನೆ. ಕೊಂದ ನಂತರ ಶವರದ ಪಕ್ಕವೇ ನೃತ್ಯ ಮಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜಫ್ರಾಬಾದ್ ಕಾಲೋನಿಯ ನಿವಾಸಿ 17 ವರ್ಷ ಪ್ರಾಯದ ಯೂಸುಫ್ ಎಂಬಾತನನ್ನು ಈಶಾನ್ಯ ದೆಹಲಿಯ ವೆಲ್ಕಮ್ ಕಾಲೋನಿಯಲ್ಲಿ ಬುಧವಾರ ರಾತ್ರಿ 10.20 ರ ಸುಮಾರಿಗೆ 16 ವರ್ಷದ ಬಾಲಕನೋರ್ವ 350 ರೂಪಾಯಿಗಾಗಿ ಕೊಲೆ ಮಾಡಿದ್ದಾನೆ.

ದೆಹಲಿಯ ವೆಲ್‌ಕಮ್‌ ಏರಿಯಾದ ಜಂತಾ ಮಜ್ದೂರ್ ಕಾಲೋನಿಯಲ್ಲಿ ನಡೆದ ಕೊಲೆಯ ಹಿಂದಿನ ಉದ್ದೇಶವು ದರೋಡೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಬಿರಿಯಾನಿ ತಿನ್ನಲು 350 ರೂಪಾಯಿ ನೀಡುವಂತೆ ಆರೋಪಿ ಯೂಸುಫ್‌ನನ್ನು ಕೇಳಿದ್ದಾನೆ. ಹಣ ಕೊಡಲು ನಿರಾಕರಿಸಿದಾಗ ಯೂಸುಫ್ ನನ್ನು ಮೊದಲು ಕತ್ತು ಹಿಸುಕಿ ಕೊಲೆ ಮಾಡಿದ ಆರೋಪಿ, ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಯೂಸುಫ್‌ನನ್ನು 60 ಬಾರಿ ಇರಿದಿದ್ದಾನೆ. ದೇಹದ ಬಳಿ ನೃತ್ಯ ಮಾಡುವ ಮೊದಲು ಯೂಸುಫ್‌ನ ಮುಖ, ಕಿವಿ ಮತ್ತು ಕುತ್ತಿಗೆಯನ್ನು ಅನೇಕ ಬಾರಿ ಇರಿದಿದ್ದಾನೆ.

“ಆರೋಪಿಯು ಮೊದಲು ಯೂಸುಫ್‌ನನ್ನು ಉಸಿರುಗಟ್ಟಿಸಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಾಗ ಅವನ ಬಳಿಯಿದ್ದ ಸುಮಾರು 350 ರೂ ಹಣವನ್ನು ದೋಚಿ, ಹಲವು ಬಾರಿ ಚೂರಿಯಿಂದ ಇರಿದಿದ್ದಾನೆ. ಗಾಯಗೊಂಡ ಯೂಸುಫ್‌ನನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯಲಾಗಿ, ಅಲ್ಲಿಯೇ ಮರಣಹೊಂದಿರುವುದು ದೃಢವಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತನಿಂದ ಕೊಲೆಗೆ ಬಳಸಲಾದ ಮಾರಕಾಸ್ತ್ರವನ್ನೂ ವಶಪಡಿಸಿಕೊಳ್ಳಲಾಗಿದೆ.

ಮಂಗಳವಾರ ರಾತ್ರಿ 11:15 ರ ಸುಮಾರಿಗೆ ವೆಲ್‌ಕಮ್‌ ಏರಿಯಾದ ಜಂತಾ ಮಜ್ದೂರ್ ಕಾಲೋನಿಯಲ್ಲಿ ದರೋಡೆ ಮಾಡಲು ಸುಮಾರು 18 ವರ್ಷ ವಯಸ್ಸಿನ ಯುವಕನನ್ನು ಅಪ್ರಾಪ್ತ ವಯಸ್ಕನೋರ್ವ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂಬ ಪಿಸಿಆರ್ ಕರೆ ಬಂತು ಎಂದು ಉಪ ಪೊಲೀಸ್ ಆಯುಕ್ತ (ಈಶಾನ್ಯ) ಜಾಯ್ ಟಿರ್ಕಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page