ಫೇಸ್ ಬುಕ್ ನಲ್ಲಿ ಅಸಭ್ಯವಾಗಿ ಕಮೆಂಟ್ ಹಾಕಿ ತನ್ನ ತೇಜೋವಧೆ ಮಾಡಿದ್ದಾನೆ ಎಂದು ಚಕ್ರವರ್ತಿ ಸೂಲಿಬೆಲೆ ಎಂಬ ಭಾಷಣಕಾರರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆಪಿಸಿಸಿ ಯ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಉಪಾಧ್ಯಕ್ಷೆ ಆಗಿರುವ ಸೌಗಂಧಿಕ ರಘುನಾಥ್ ಎಂಬುವವರು ಈ ದೂರು ನೀಡಿದ್ದು ಇವರ ಬಗ್ಗೆ ಅವಾಚ್ಯವಾಗಿ ಫೇಸ್ಬುಕ್ ಕಾಮೆಂಟ್ ಮಾಡಿ, ನಂತರ ಡಿಲಿಟ್ ಮಾಡಿ , ಫೇಕ್ ಅಕೌಂಟ್ ಬಳಸಿ ಎಡಿಟ್ ಮಾಡಿಸಿ ಮಾನಹಾನಿಕರ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಚಂದ್ರಯಾನ 3 ಯಶಸ್ಸಿಗೆ ದೇವರಿಗೆ ಕೈ ಮುಗಿದು ಫೋಟೋ ಹಾಕಿ ಎಂದು ಸೂಲಿಬೆಲೆ ಮಾಡಿದ ಪೋಸ್ಟ್ ಮಾಡಿದ್ದು, ಇದಕ್ಕೆ ಸೌಗಂಧಿಕಾ ‘ವಿಜ್ಞಾನಿಗಳ ಶ್ರಮಕ್ಕೆ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಆದರೆ ಅದನ್ನು ತೋರಿಕೆಗಾಗಿ ಆಗಲಿ ಅಥವಾ ಫೋಟೋಗಾಗಿಯಾಗಲಿ ದೇವರ ಮುಂದೆ ನಿಲ್ಲಬೇಡಿ’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಚಕ್ರವರ್ತಿ ಸೂಲಿಬೆಲೆ ಕೀಳು ಮಟ್ಟದ ಕಾಮೆಂಟ್ ಮಾಡಿದ್ದು “ನಿನಗೆ ಎಲ್ಲಿ ಯಾಕೆ ಉರಿ ಬಂತು?” ಎಂದು ಕೇಳಿದ್ದಾರೆ.
ಸೌಗಂಧಿಕಾ ಜೊತೆಗೆ ಜಿಲ್ಲಾ ಕಾಂಗ್ರೆಸ್ಸಿನ ಮಹಿಳಾ ನಾಯಕಿಯರಾದ ಸ್ಟೇಲ್ಲಾ ಮಾರ್ಟೀನ್, ಅರ್ಚನಾ, ಸಂಧ್ಯಾರಾಣಿ, ಶಮೀಮ್ ಭಾನು, ಶೋಭಾ, ನಾಗರತ್ನ, ಗ್ಲಾಡಿ, ರಸಿಯ, ಸಲೀಮ ಅವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಇದಲ್ಲದೇ, ಫೇಕ್ ಫೇಸ್ಬುಕ್ ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವವರ ಮೇಲೆ ಕೂಡ ದೂರು ನೀಡಲಾಗಿದೆ.