Home ಬ್ರೇಕಿಂಗ್ ಸುದ್ದಿ ಮಣಿಪುರದ ಠಾಣೆಗಳಿಗೆ ನುಗ್ಗಿ ಮದ್ದು ಗುಂಡುಗಳ ಹೊತ್ತೊಯ್ದ ದುಷ್ಕರ್ಮಿಗಳು : ಹಿಂಸಾಚಾರ ಬುಗಿಲೆಳುವ ಮುನ್ಸೂಚನೆ

ಮಣಿಪುರದ ಠಾಣೆಗಳಿಗೆ ನುಗ್ಗಿ ಮದ್ದು ಗುಂಡುಗಳ ಹೊತ್ತೊಯ್ದ ದುಷ್ಕರ್ಮಿಗಳು : ಹಿಂಸಾಚಾರ ಬುಗಿಲೆಳುವ ಮುನ್ಸೂಚನೆ

0

ಸತತವಾಗಿ 3 ತಿಂಗಳು ಕಳೆದರೂ ಮಣಿಪುರದಲ್ಲಿ ಹಿಂಸಾಚಾರ ಕೊನೆಗೊಳ್ಳುವ ಅಥವಾ ನಿಯಂತ್ರಣವಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಆಗಸ್ಟ್ 3 ರ ಗುರುವಾರ ದುಷ್ಕರ್ಮಿಗಳ ಗುಂಪುಗಳು ಮಣಿಪುರದ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿದ್ದು ಮದ್ದು ಗುಂಡುಗಳೊಂದಿಗೆ ಪರಾರಿಯಾಗಿರುವುದು, ಮುಂದಿನ ಬಾರೀ ಹಿಂಸಾಚಾರದ ಮುನ್ಸೂಚನೆ ಎನ್ನಲಾಗಿದೆ.

ಮಣಿಪುರ ಪೊಲೀಸರು ಗುರುವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ರಾಜ್ಯದ ಕೌಟ್ರುಕ್, ಹರಾಥೆಲ್ ಮತ್ತು ಸೆಂಜಮ್ ಚಿರಾಂಗ್ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆದಿದೆ. ಭದ್ರತಾ ಪಡೆ ಕೂಡ ದುಷ್ಕರ್ಮಿಗಳ ಮೇಲೆ ಕ್ರಾಸ್ ಫೈರಿಂಗ್ ನಡೆದಿದೆ. ಈ ದಾಳಿಗಳಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿಗೆ ಬುಲೆಟ್ ಗಾಯವಾಗಿದೆ ಎಂದು ವಿವರಿಸಿದ್ದಾರೆ.

ಈ ನಡುವೆ ಹಿಂಸಾಚಾರದಲ್ಲಿ ಮೃತಪಟ್ಟ ಕುಕ್ಕಿ ಮತ್ತು ಜೋಮಿ ಸಮುದಾಯಕ್ಕೆ ಸಂಬಂಧಿಸಿದ ಮೃತದೇಹಗಳನ್ನು ಅವರವರ ಕುಟುಂಬಕ್ಕೆ ಹಸ್ತಾಂತರ ಮಾಡಲು ಆಗಿಲ್ಲ, ಕಾರಣ ಕೆಲವು ಮೃತದೇಹಗಳು ಗುರುತೂ ಸಿಗದಷ್ಟು ಛಿದ್ರವಾಗಿವೆ. ಇನ್ನೂ ಕೆಲವು ಮೃತದೇಹಗಳನ್ನು ಗಲಭೆ ಕಾರಣಕ್ಕೆ ಹಸ್ತಾಂತರ ಮಾಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಸ್ತಾಂತರಿಸಲಾಗದ 30ಕ್ಕೂ ಹೆಚ್ಚು ದೇಹಗಳನ್ನು ಶವಾಗಾರದಲ್ಲಿ ಇಡಲಾಗಿದೆ. ಹೀಗಾಗಿ ರಾಜ್ಯದ ಹೈಕೋರ್ಟ್ ಚುರಾಚಂದ್‌ಪುರ ಜಿಲ್ಲೆಯ ಉದ್ದೇಶಿತ ಸಮಾಧಿ ಸ್ಥಳದಲ್ಲಿ ಅಂತ್ಯಕ್ರಿಯೆಗೆ ಆದೇಶಿಸಿದೆ.

ಗುರುವಾರ ಬೆಳಗ್ಗೆಯಿಂದ ಉದ್ವಿಗ್ನತೆ ಉಂಟಾಗಿದೆ. ವಿಶೇಷವಾಗಿ ಬಿಷ್ಣುಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಚಲನವಲನವನ್ನು ತಡೆಯಲು ಸಾವಿರಾರು ಸ್ಥಳೀಯರು ಬೀದಿಗಿಳಿದಿದ್ದರು. ಕೇವಲ ಫೌಗಕ್ಚಾವೊ ಇಖೈ ಪ್ರದೇಶದಲ್ಲೇ ಸುಮಾರು 600 ಜನರ ಅನಿಯಂತ್ರಿತ ಜನಸಮೂಹವು ಜಮಾಯಿಸಿತು. ಆದರೆ ಗುಂಪನ್ನು ಚದುರಿಸಲು ಅಧಿಕಾರಿಗಳು ಅಶ್ರುವಾಯು ಶೆಲ್‌ಗಳನ್ನು ಹಾರಿಸಬೇಕಾಯಿತು ಎಂದು ಹೇಳಿಕೆ ತಿಳಿಸಿದೆ.

ಗುಂಪುಗಳು ಹಲವಾರು ಪ್ರದೇಶಗಳಲ್ಲಿ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಸಿದುಕೊಂಡಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಘಟನೆಯಲ್ಲಿ 25 ಜನರಿಗೆ ಗಾಯಗಳಾಗಿವೆ.

ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಅವರು ಜಂಟಿ ಭದ್ರತಾ ಪಡೆಗಳ ಕಾರ್ಯಾಚರಣೆಯ ಸಂದರ್ಭದಲ್ಲಿ ಏಳು ಅಕ್ರಮ ಬಂಕರ್‌ಗಳನ್ನು ನಾಶಪಡಿಸಿದ್ದಾರೆ ಎಂದು ಪೋಲಿಸರು ಹೇಳಿದ್ದಾರೆ. ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಒಟ್ಟು 129 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ರಾಜ್ಯದ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಸುಮಾರು 1047 ಜನರನ್ನು ಬಂಧಿಸಿದ್ದಾರೆ.

You cannot copy content of this page

Exit mobile version