ಅಪಾರ್ಥ ಪಡೆದ ಟ್ವಿಟ್ : ಪ್ರಕಾಶ್ ರೈ ವಿರುದ್ಧ ದೂರು ದಾಖಲು

ಕರ್ನಾಟಕ, ಅ.22: ಚಂದ್ರಯಾನ-3 ಮಿಷನ್ ಕುರಿತು ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಅವರ ವಿರುದ್ಧ ಹಿಂದೂ ಸಂಘಟನೆಗಳ ಮುಖಂಡರು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪ್ರಕಾಶ್‌ ರಾಜ್‌ ಅಗಸ್ಟ್‌ 20ರಂದು ಟ್ವೀಟರ್‌ ನಲ್ಲಿ “ಬ್ರೇಕಿಂಗ್‌ ನ್ಯೂಸ್:- ಚಂದ್ರನಿಂದ ಬಂದ ಮೊದಲ ಚಿತ್ರ #VikramLander ವಾವ್ #justasking” ಎಂದು ಚಹಾ ಮಾಡುವ ವ್ಯಕ್ತಿಯೊಬ್ಬನ ಕಾರ್ಟೂನ್‌ ಚಿತ್ರ ಹಂಚಿಕೊಂಡಿದ್ದರು. ಇದು ಕೇರಳದ ಚಾಯ್‌ವಾಲನ ಚಿತ್ರ ಎಂದು ಬರೆದುಕೊಂಡಿದ್ದಾರೆ.

ಜಗತ್ತಿನ ಯಾವುದೇ ಮೂಲೆಗೆ ಹೋದರೂ ಮಲಯಾಳಿಯೊಬ್ಬ ಇರುತ್ತಾನೆ. ಚಂದ್ರನಲ್ಲಿ ಮೊದಲ ಬಾರಿಗೆ ನೀಲ್‌ ಆರ್ಮ್‌ ಸ್ಟ್ರಾಂಗ್‌ ಕಾಲಿಟ್ಟಾಗ ಅಲ್ಲೊಂದು ಮಲಯಾಳಿ ಚಹಾ ಅಂಗಡಿ ಇತ್ತು ಎಂಬ ಹಾಸ್ಯ ಚಟಾಕಿಯೊಂದು ಪ್ರಚಲಿತದಲ್ಲಿದೆ. ಇದು ಕೇರಳಿಗರು ಹರಡಿರುವ ವಿಸ್ತಾರವನ್ನು ತೋರಿಸುತ್ತದೆ ಎಂಬುದು ಟ್ವಿಟ್ ನ ಅರ್ಥವಾಗಿತ್ತು.

ಇದೇ ದನಿಯಲ್ಲಿ ನಟ ಪ್ರಕಾಶ್‌ ರಾಜ್‌ ಮಾಡಿರುವ ಟ್ವೀಟನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲದವರು ಟ್ರೋಲ್‌ ಮಾಡಲು ಆರಂಭ ಮಾಡಿದ್ದು ಪ್ರಕರಣ ಕೂಡ ದಾಖಲಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು