ರಾಜಧಾನಿಯಲ್ಲಿ ಫಾರ್ಮ್-7 ದುರ್ಬಳಕೆ, ಬಿಜೆಪಿಯ ಬೂತ್ ಏಜೆಂಟ್ – ವಿರುದ್ಧ ಎಫ್‌ಐಆರ್

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ(SIR) ಚುನಾವಣಾ ಆಯೋಗದ ಫಾರ್ಮ್-7(Election Commission Form 7) ದುರ್ಬಳಕೆ ಆರೋಪ, ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್ ದೂರಿನನ್ವಯ ಮೇಲೆ ಬೆಂಗಳೂರಿನ ವೈಯಾಲಿಕಾವಲ್ ಠಾಣೆಯಲ್ಲಿ ಎಫ್​​ಐಆರ್ (FIR) ದಾಖಲಾಗಿದೆ. ಮಲ್ಲೇಶ್ವರಂ ಕ್ಷೇತ್ರದ ವಾರ್ಡ್ ನಂ.64ರಲ್ಲಿ ಅಕ್ರಮ ಎಸಗಿರುವ ಆರೋಪ ಹಿನ್ನೆಲೆ ಬೂತ್ ಏಜೆಂಟ್​ ವಸಂತಲಕ್ಷ್ಮೀ ಸೇರಿ ಇಬ್ಬರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಮತದಾರರು ಕ್ಷೇತ್ರದಲ್ಲಿ ಇದ್ದರೂ ಗೈರು ಹಾಜರಿ ಅಥವಾ ಶಾಶ್ವತ ಸ್ಥಳಾಂತರ ಎಂದು ಫಾರ್ಮ್-7 ಸಲ್ಲಿಸಲಾಗಿದೆ. 64ರಲ್ಲಿನ ಮತಗಟ್ಟೆ ನಂಬರ್​​ 157ರಲ್ಲಿ 122 ಅರ್ಜಿಗಳು, 155ರಲ್ಲಿ 233 ಅರ್ಜಿಗಳು, 156ರಲ್ಲಿ 28, 158ರಲ್ಲಿ 5, 154ರಲ್ಲಿ 47, 205ರಲ್ಲಿ 171, 203ರಲ್ಲಿ 88, 153ರಲ್ಲಿ 14 ಅರ್ಜಿಗಳು ಹೀಗೆ ಒಟ್ಟು 778 ಅರ್ಜಿಗಳು ಮತದಾರರು ಮತಕ್ಷೇತ್ರಗಳಲ್ಲಿ ವಾಸವಿದ್ದರೂ ಸಹಿತ ಅವರನ್ನು ಗೈರುಹಾಜರಿದ್ದಾರೆಂದು ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆಂದು ಫಾರ್ಮ್-7ರನ್ನು ಭರ್ತಿ ಮಾಡಿ ಸುಳ್ಳು ದಾಖಲೆಯನ್ನು ಸಲ್ಲಿಸಿರುವುದು ಕಂಡುಬಂದಿದೆ. ಫಾರ್ಮ್​ಗಳಲ್ಲಿ ಇರುವ ಸಹಿ ಪರಸ್ಪರ ಭಿನ್ನವಾಗಿದ್ದು, ಗಮನಾರ್ಹ ವ್ಯತ್ಯಾಸವಿದೆ. ಅವರ ಹೆಸರಿನಲ್ಲಿ ಯಾರೋ ಸಹಿಯನ್ನು ಪೋರ್ಜರಿ ಮಾಡಿ ಸಲ್ಲಿಸಿರುವ ಸಾಧ್ಯತೆಗಳಿವೆ. ಹೀಗಾಗಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಸದ್ಯ ಎಫ್​ಐಆರ್​ ದಾಖಲಿಸಿರುವ ಬೆಂಗಳೂರಿನ ವೈಯಾಲಿಕಾವಲ್ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ಬಿಜೆಪಿ ಹಾಗೂ ಆರ್​ಎಸ್​ಎಸ್​ ಜೊತೆಗೆ ಸಂಬಂಧ ಇರುವ ವ್ಯಕ್ತಿಗಳು, ನಿರ್ದಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಿಕೊಂಡು ಕಾನೂನುಬದ್ಧ ಮತದಾರರನ್ನು ಮತದಾರರ ಪಟ್ಟಿಯಿಂದ ವಂಚಿಸುವ ದುರುದ್ದೇಶದಿಂದ ಒಳಸಂಚು ಮಾಡಿ ಗಣನೀಯ ಸಂಖ್ಯೆಯ ಅರ್ಜಿಗಳನ್ನು ಬಿಜೆಪಿ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಬೂತ್ ಮಟ್ಟದ ಏಜೆಂಟ್ ಎಂದು ಪ್ರತಿನಿಧಿಸುವ ಜಿ.ಎಸ್. ವಸಂತಲಕ್ಷ್ಮೀ ಹೆಸರಿನಲ್ಲಿ ಹೆಸರಲ್ಲಿ ಫಾರ್ಮ್-7 ಸಲ್ಲಿಕೆ ಮಾಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು