ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಇಡಿ ಇಂದು ಬಂಧಿಸಿದೆ. ಮನೆ ಶೋಧದ ನಂತರ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಎಎಪಿ ಶಾಸಕ ಅಮಾನುತುಲ್ಲಾ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದಾರೆ. ದೆಹಲಿ ವಕ್ಫ್ ಬೋರ್ಡ್‌ನಲ್ಲಿ ನಡೆದ ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂದು ಇಡಿ ಆರೋಪಿಸಿದೆ. ಈ ಹಿಂದೆ ಶಾಸಕ ಅಮಾನುತುಲ್ಲಾ ಖಾನ್ ವಕ್ಫ್ ಬೋರ್ಡ್ ಮುಖ್ಯಸ್ಥರಾಗಿದ್ದರು.
ದೆಹಲಿಯ ಓಖ್ಲಾ ಕ್ಷೇತ್ರದ ಶಾಸಕ ಖಾನ್ ಇಂದು ಬೆಳಗ್ಗೆ 6:30ಕ್ಕೆ ಟ್ವೀಟ್ ಮಾಡಿ ತನ್ನನ್ನು ಬಂಧಿಸಲು ಇಡಿ ಮನೆಗೆ ಬಂದಿತ್ತು ಎಂದು ಆರೋಪಿಸಿದ್ದರು.
ಶೋಧ ಕಾರ್ಯದ ಭಾಗವಾಗಿ ಖಾನ್ ಮನೆಗೆ ತೆರಳಿರುವುದಾಗಿ ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಶಾಸಕರನ್ನು ಕರೆಸಿ 13 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು ಎನ್ನಲಾಗಿದೆ.