ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಇಂದು ಶಾಸಕರಾದ ಹೆಚ್.ಕೆ ಸುರೇಶ್ ರವರ ಅಧ್ಯಕ್ಷತೆ ಯಲ್ಲಿ ಹೋಬಳಿ ಮಟ್ಟದ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಗಳಿಗೆ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಹೆಚ್ ಕೆ ಸುರೇಶ್ ಮಾತನಾಡಿ ಪ್ರಸ್ತುತ ಕೃಷಿಕ ವರ್ಗದವರ ಹಾಗು ಸಾರ್ವಜನಿಕರ ಅಕ್ರಮ ಸಕ್ರಮ ಯೋಜನೆಯ 53, 57ರ ಭೂ ಮಂಜೂರಾತಿ, ಹಕ್ಕು ಪತ್ರ,ಪೌತಿ ಖಾತೆ, ಪಿಂಚಣಿ ಸೇರಿದಂತೆ ಇನ್ನಿತರೆ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರತಿ ಹೋಬಳಿ ಮಟ್ಟದಲ್ಲಿಯೇ ಜನಸ್ಪಂದನ ಕಾರ್ಯಕ್ರಮ ಆಯೋಜಿಸುತ್ತಿರುವುದು ಬಹುಶಃ ರಾಜ್ಯದ ಇತರೆ ವಿಧಾನ ಸಭಾ ಕ್ಷೇತ್ರಗಳನ್ನು ಹೋಲಿ ಸಿದರೆ ನಮ್ಮ ಕ್ಷೇತ್ರವು ಮುಂಚೂಣಿಯಲ್ಲಿದೆ ,ನಮ್ಮ ಕ್ಷೇತ್ರದ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯ ಬಹುತೇಕ ಎಲ್ಲ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಪಡುತ್ತಿದ್ದು ಸಾರ್ವಜನಿ ಕರು ಸಂಯಮದಿಂದ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳ ಬೇಕು ಎಂದರು.
ಕಾರ್ಯಕ್ರಮದಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿದ್ದ ಸುಮಾರು ಐವತ್ತು ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಪಿಂಚಣಿ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.ನಂತರ ಹೋಬಳಿ ವ್ಯಾಪ್ತಿಯ ನೂರಾರು ಬಡ ಕೂಲಿ ಕಾರ್ಮಿಕರು,ವಯೋ ವೃದ್ಧರು,ಮಹಿಳೆಯರು ಸೇರಿದಂತೆ ಸಾರ್ವಜನಿ ಕರು ಬಾಗವಹಿಸಿ ಗಂಟೆ ಗಟ್ಟಲೆ ಸರದಿ ಸಾಲಿನಲ್ಲಿ ನಿಂತು ತಮ್ಮ ಮನೆಗೆ ಸಂಬಂದಿಸಿದ ಹಕ್ಕು ಪತ್ರ, ಪೌತಿ ಖಾತೆ ,ಪಿಂಚಣಿ ಸಂಬಂದಿಸಿದ ಹಲವಾರು ಸಮಸ್ಯೆಗಳ ಬಗ್ಗೆ ಅಹವಾಲುಗಳನ್ನು ಶಾಸಕರಲ್ಲಿ ತೋಡಿಕೊಂ ಡರು.ಜನಸ್ಪಂದನ ಕಾರ್ಯಕ್ರಮ ನಡೆಯು ತ್ತಿರುವ ವೇಳೆ ವಿಶೇಷ ಚೇತನ ಗ್ರಾಮೀಣ ಪುನರ್ವಸತಿ ಕಾರ್ಯ ಕರ್ತರೊಬ್ಬರು ತಮಗೆ ಸರಕಾರದಿಂದ ನೀಡುತ್ತಿ ರುವ ಗೌರವಧನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಸಕರು ಸ್ಪಂದಿಸುತ್ತಾರೆ. ಈ ವೇಳೆ ತಹಶೀಲ್ದಾರ್ ಎಂ.ಮಮತಾ, ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ವಸಂತ್ ಕುಮಾರ್,ಅರೇಹಳ್ಳಿ ಪೊಲೀಸ್ ಠಾಣಾಧಿಕಾರಿ ಶೋಭ ಎಂ.ಬಿ, ಉಪ ತಹಶೀಲ್ದಾರ್ ದೊರೆ, ರಾಜಸ್ವ ನಿರೀಕ್ಷಕರಾದ ಚಂದ್ರೇಗೌಡ,ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಂಕಪ್ಪ,ಪಂಚಾಯತಿ ಅಧ್ಯಕ್ಷರು,ಸದ ಸ್ಯರು, ನಾಡ ಕಚೇರಿ ಸಿಬ್ಬಂದಿಗಳು ಹಾಗು ಇನ್ನಿ ತರರು ಭಾಗವಹಿಸಿದ್ದರು.