Home ಬ್ರೇಕಿಂಗ್ ಸುದ್ದಿ “ಬೆಂಗಳೂರು ನಡಿಗೆ” ಕಾರ್ಯಕ್ರಮದಲ್ಲಿ ಹೈಡ್ರಾಮ; ತನ್ನದೇ ಕ್ಷೇತ್ರದಲ್ಲಿ ಶಾಸಕ ಮುನಿರತ್ನಗೆ ಸಾರ್ವಜನಿಕರಿಂದ ಬಿತ್ತು ಗೂಸಾ!

“ಬೆಂಗಳೂರು ನಡಿಗೆ” ಕಾರ್ಯಕ್ರಮದಲ್ಲಿ ಹೈಡ್ರಾಮ; ತನ್ನದೇ ಕ್ಷೇತ್ರದಲ್ಲಿ ಶಾಸಕ ಮುನಿರತ್ನಗೆ ಸಾರ್ವಜನಿಕರಿಂದ ಬಿತ್ತು ಗೂಸಾ!

0

ಬೆಂಗಳೂರಿನ RR ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಪಿ ಪಾರ್ಕ್ ಭಾಗದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಸಿದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನಗೆ ಸಾರ್ವಜನಿಕರು ಥಳಿಸಲು ಮುಂದಾಗಿದ್ದಾರೆ. ತಮಗೆ ಆಹ್ವಾನ ನೀಡದೆ, ಪಕ್ಷದ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಶಾಸಕ ಮುನಿರತ್ನ ಆರ್​ಎಸ್ಎಸ್ ಗಣವೇಷಧಾರಿಯಾಗಿಯೇ ವೇದಿಕೆಗೆ ಬಂದು ಗೊಂದಲ ಮೂಡಿಸಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.

ಭಾನುವಾರ) ಬೆಳಗ್ಗೆ ಆರ್.ಆರ್.ನಗರ ಕ್ಷೇತ್ರ ವ್ಯಾಪ್ತಿಯ ಜೆ.ಪಿ. ಪಾರ್ಕ್ ಉದ್ಯಾನದಲ್ಲಿ ಜನಸಾಮಾನ್ಯರ ಜೊತೆ ಹೆಜ್ಜೆ ಹಾಕಿ, ಸಾರ್ವಜನಿಕರಿಂದ ಅಹವಾಲು ಆಲಿಸಿದರು. ಸಲಹೆಗಳನ್ನು ಪಡೆದ ಅವರು, ಬಳಿಕ ಸಂವಾದ ನಡೆಸಿದರು. ಡಿ.ಕೆ. ಶಿವಕುಮಾರ್ ಪಾರ್ಕ್ ವೀಕ್ಷಣೆ ವೇಳೆ ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ಆರ್‌ಎಸ್​​ಎಸ್ ವೇಷದಲ್ಲಿ ಬಂದು ನನಗೆ ಆಹ್ವಾನಿಸದೇ ಕಾರ್ಯಕ್ರಮ ಮಾಡಿದ್ದಾರೆ ಎಂದು ಆರೋಪಿಸಿದರು.

ಅದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಓಡಾಡಿಕೊಂಡಿದ್ದ ಕಾರಣ ”ಏಯ್ ಕರಿ ಟೋಪಿ ಎಮ್‌ಎಲ್‌ಎ ಬಾರಯ್ಯ ಇಲ್ಲಿ ಈ ಕಡೆ” ಎಂದು ವೇದಿಕೆಯಿಂದಲೇ ಮುನಿರತ್ನರನ್ನು ಕರೆಯುತ್ತಾರೆ. ಈ ವೇಳೆ ವೇದಿಕೆಗೆ ಆಗಮಿಸಿದ ಮುನಿರತ್ನ ಡಿಸಿಎಂ ಡಿಕೆಶಿ ಹಾಗೂ ಕಾರ್ಯಕ್ರಮದ ವಿರುದ್ಧ ತೀವ್ರ ಆಕ್ಷೇಪಿಸಿದರು. ವೇದಿಕೆ ಮೇಲೆ ಬಂದ ಮುನಿರತ್ನ ಮೈಕ್ ಕೊಡಿ ಒಂದು ನಿಮಿಷ ಎಂದು ಮೈಕ್ ಪಡೆದು ಈ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಬಂದಿದ್ದೇನೆ ಎಂದರು.‌ ಆಗ ಸಂತೋಷ ಕುಳಿತುಕೊಳ್ಳಿ ಎಂದು ಡಿಕೆಶಿ ಪ್ರತಿಕ್ರಿಯಿಸಿದರು.

ಪೋಸ್ಟರ್​​ನಲ್ಲಿ ಸಂಸದ, ಶಾಸಕರ ಫೋಟೋ ಇಲ್ಲ. ಇದು ಸಾರ್ವಜನಿಕರ ಕುಂದುಕೊರತೆ ನೀಗಿಸುವ ಕಾರ್ಯಕ್ರಮವೇ?. ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಎಂದು ಆಕ್ರೋಶಭರಿತವಾಗಿ ಮಾತನಾಡಿದರು. ಈ ವೇಳೆ ಬೆಂಬಲಿಗರು, ಕಾರ್ಯಕರ್ತರು ಹಾಗೂ ಸಾರ್ವಜನಿಕರ ಕೈಗೆ ಗಲಾಟೆ ಉಂಟಾಯಿತು. ಆಗ ಡಿ.ಕೆ. ಶಿವಕುಮಾರ್ ಅವರಿಂದ ಮೈಕ್ ಕಿತ್ತುಕೊಳ್ಳಿ ಎಂದರು.‌

ಈ ವೇಳೆ ಸಾರ್ವಜನಿಕ ಕುಂದುಕೊರತೆಗಳ ಆಲಿಸುವ ಕಾರ್ಯಕ್ರಮಕ್ಕೆ ಈ ರೀತಿಯಾಗಿ ಆರ್‌ಎಸ್‌ಎಸ್ ಸಮವಸ್ತ್ರ ಧರಿಸಿ ಉದ್ದೇಶಪೂರ್ವಕವಾಗಿ ಗೊಂದಲ ಏರ್ಪಡಿಸಿದ ಕಾರಣಕ್ಕೆ ವೇದಿಕೆಯಿಂದ ಮುನಿರತ್ನರನ್ನು ಪೊಲೀಸರು ಕರೆದುಕೊಂಡು ಹೋದರು.‌ ಬಳಿಕ ಪಾರ್ಕ್​ನ ಹೊರಗಡೆ ಮುನಿರತ್ನ ಧರಣಿಗೆ ಕುಳಿತುಕೊಂಡು ಆಕ್ರೋಶ ಹೊರಹಾಕಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಮುನಿರತ್ನ ತನಗೆ ಗೂಸಾ ಬಿದ್ದ ಬಗ್ಗೆ ಹೇಳಿಕೊಂಡರು.

ನನ್ನ ಕ್ಷೇತ್ರದಲ್ಲಿ ನನಗೆ ಆಹ್ವಾನ ಕೊಡದೇ ಕಾರ್ಯಕ್ರಮ ಮಾಡುತ್ತಿದ್ದಾರೆ. ನನ್ನ ರಾಜೀನಾಮೆ ಕೊಡಿಸಬೇಕು ಅನ್ನೋದು ಅವರ ಟಾರ್ಗೆಟ್. ಅವರ ಜೊತೆ ಬೆಳಗ್ಗೆಯಿಂದ ಯಾರಿದ್ದರೋ ಅವರನ್ನು ಈ ಕ್ಷೇತ್ರಕ್ಕೆ ತರುವ ಪ್ಲಾನ್ ಇದೆ ಎಂದು ಪರೋಕ್ಷವಾಗಿ ಕುಸುಮಾಗೆ ಸಪೋರ್ಟ್ ಕೊಡಲಾಗುತ್ತಿದೆ ಅಂತಾ ಕಿಡಿಕಾರಿದರು.

ನಾನು ಆರ್​​ಎಸ್​​ಎಸ್ ಕರ್ತವ್ಯದಲ್ಲಿದ್ದೇನೆ. ಇದು ಆರ್​​ಎಸ್​​ಎಸ್​ಗೆ ಮಾಡಿದ ಅವಮಾನ. ಆರ್​​ಎಸ್​​ಎಸ್ ಕ್ಯಾಪ್ ಕಿತ್ತುಕೊಂಡಿದ್ದಾರೆ. ಇಲ್ಲಿ ಕಾರ್ಯಕ್ರಮದಲ್ಲಿ ಯಾರೂ ಪಬ್ಲಿಕ್ ಇಲ್ಲ. ಎಲ್ಲ ಅವರು ಕರೆದುಕೊಂಡು ಬಂದಿರುವ ಏಜೆಂಟ್​ಗಳು ಎಂದು ಮುನಿರತ್ನ ಆರೋಪಿಸಿದರು.‌

You cannot copy content of this page

Exit mobile version