Tuesday, June 18, 2024

ಸತ್ಯ | ನ್ಯಾಯ |ಧರ್ಮ

ಇಸ್ರೇಲ್‌ನಿಂದ ಬಾಂಬ್‌ ದಾಳಿ: ಗಾಝಾದಲ್ಲಿ ಫೋನ್‌, ಇಂಟರ್ನೆಟ್‌..ಏನೂ ಇಲ್ಲ!

ಬೆಂಗಳೂರು,ಅಕ್ಟೋಬರ್.‌28: ಇಸ್ರೇಲ್ ಗಾಝಾದ ಮೇಲಿನ ಬಾಂಬ್‌ ದಾಳಿಯನ್ನು ತೀವ್ರಗೊಳಿಸುವುದರ ಜೊತೆ ಜೊತೆಗೆ ಮೊಬೈಲ್‌ ಮತ್ತು ಇಂಟರ್‌ನೆಟ್‌ ಸೇವೆಗಳೆರಡನ್ನೂ ಕಡಿತಗೊಂಡು ಇಡೀ ಗಾಝಾದಲ್ಲಿ ಸಂವಹನದ ಎಲ್ಲಾ ಮಾರ್ಗಗಳನ್ನೂ ಸಂಪೂರ್ಣ ಬಂದ್‌ ಆಗದೆ. ಜವ್ವಾಲ್ ಮತ್ತು ಪಾಲ್ಟೆಲ್ ಎಂಬ ಎರಡು ಪ್ರಮುಖ ಪ್ಯಾಲೇಸ್ಟಿನಿಯನ್ ಮೊಬೈಲ್ ನೆಟ್‌ವರ್ಕ್‌ಗಳು ತಮ್ಮ ಫೋನ್ ಲೈನ್‌ಗಳು ಮತ್ತು ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿದೆ ಎಂದು ತಿಳಿಸಿವೆ.

“ಕಳೆದ ಗಂಟೆಯಲ್ಲಿ ನಡೆದ ಭಾರೀ ಬಾಂಬ್ ಸ್ಫೋಟವು ಗಾಜಾವನ್ನು ಹೊರಗಿನ ಪ್ರಪಂಚಕ್ಕೆ ಸಂಪರ್ಕಿಸುವ ಉಳಿದ ಎಲ್ಲಾ ಅಂತರರಾಷ್ಟ್ರೀಯ ಮಾರ್ಗಗಳನ್ನು ನಾಶಪಡಿಸಿದೆ” ಎಂದು ಜವ್ವಾಲ್ ತನ್ನ ಫೇಸ್‌ಬುಕ್ ನಲ್ಲಿ ಬರೆದುಕೊಂಡಿದೆ.

ಅಲ್ ಜಜೀರಾ ವರದಿ ಮಾಡಿರುವಂತೆ, ಗಾಝಾ ಪಟ್ಟಿಯಾದ್ಯಂತ ಇಂಟರ್ನೆಟ್ ಮತ್ತು ಮೊಬೈಲ್ ಫೋನ್ ನೆಟ್‌ವರ್ಕ್‌ಗಳ ಹಠಾತ್ ಕಡಿತ ಉಂಟಾಗಿದ್ದು, ಗಾಝಾದಲ್ಲಿ ಜನರು ಇದ್ದಕ್ಕಿದ್ದಂತೆ ಎಲ್ಲಾ ಸಂಪರ್ಕಗಳನ್ನು ಕಳೆದುಕೊಂಡಿದ್ದಾರೆ. ಜನರಿಗೆ ಎಚ್ಚರಿಕೆಯ ಸಂದೇಶಗಳನ್ನು ನೀಡುತ್ತಾರೆ ಎಂಬ ಕಾರಣಕ್ಕೆ ಸ್ಥಳೀಯ ರೇಡಿಯೊ ಕೇಂದ್ರಗಳನ್ನು ಸಹ ಇಸ್ರೇಲಿ ಸೇನೆಯ ವಕ್ತಾರರು ತಡೆಹಿಡಿಯುತ್ತಾರೆ.

ಪ್ಯಾಲೆಸ್ಟೈನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ಯಾಲೆಸ್ಟೈನ್ ರೆಡ್ ಕ್ರೆಸೆಂಟ್ ಸೊಸೈಟಿ, ಗಾಝಾ ಪಟ್ಟಿಯಲ್ಲಿರುವ ತನ್ನ ಎಲ್ಲಾ ಸಿಬ್ಬಂದಿಗಳೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ಹೇಳಿದೆ. “ನಮ್ಮ ತಂಡಗಳು ತಮ್ಮ ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುವ ಸಾಮರ್ಥ್ಯದ ಬಗ್ಗೆ ನಾವು ಆಳವಾಗಿ ಕಾಳಜಿ ವಹಿಸುತ್ತೇವೆ. ಈ ಅಡಚಣೆಯು  ತುರ್ತು ಸಂಪರ್ಕ ಸಂಖ್ಯೆ “101” ಮೇಲೆ ಪರಿಣಾಮ ಬೀರಿ, ಗಾಯಾಳುಗಳಿಗೆ ಬೇಕಾದ ಆಂಬ್ಯುಲೆನ್ಸ್ ವಾಹನಗಳ ಸೇವೆಗೆ ಅಡ್ಡಿಯಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದೆ.

ಇಂಟರ್ನೆಟ್ ಸೆನ್ಸಾರ್‌ಶಿಪ್ ಅನ್ನು ಮೇಲ್ವಿಚಾರಣೆ ಮಾಡುವ ಲಾಭರಹಿತ ಸಂಸ್ಥೆಯಾದ ನೆಟ್‌ಬ್ಲಾಕ್ಸ್ ಗಾಝಾದಲ್ಲಿ  ಸಂಭವಿಸಿರುವ ಈ ಸಂಪರ್ಕ ಕಡಿತದ ಬಗ್ಗೆ ತನ್ನ X ನಲ್ಲಿ ದೃಢೀಕರಿಸಿದೆ.

ಈ ಎಲ್ಲದರ ಮಧ್ಯೆ, ಇಸ್ರೇಲಿ ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ಎನ್‌ಕ್ಲೇವ್‌ನ ಬಾಂಬ್ ದಾಳಿ ತೀವ್ರಗೊಳ್ಳುತ್ತಿದ್ದಂತೆ ಗಾಝಾದಲ್ಲಿ ಇಸ್ರೇಲಿ ನೆಲದ ಕಾರ್ಯಾಚರಣೆಗಳು ವಿಸ್ತರಿಸುತ್ತಿವೆ ಎಂದು ಹೇಳಿದ್ದಾರೆ.

ಅಕ್ಟೋಬರ್ 7 ರಿಂದ ಇಲ್ಲಿಯವರೆಗೆ, ಇಸ್ರೇಲ್ ದಾಳಿಯಲ್ಲಿ 7,326 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ. ಇಸ್ರೇಲ್ ಪ್ಯಾಲೆಸ್ತೈನ್ ಮೇಲಿನ ತನ್ನ ದಾಳಿ ಮಾಡುವುದನ್ನು ಮುಂದುವರೆಸಿದೆ. ಇಸ್ರೇಲ್ ಮೇಲೆ ನಡೆದ ಹಮಾಸ್ ದಾಳಿಯಲ್ಲಿ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

Related Articles

ಇತ್ತೀಚಿನ ಸುದ್ದಿಗಳು