Home ರಾಜಕೀಯ ಮೋದಿಯಿಂದ ತಮ್ಮ ಸ್ನೇಹಿತ ಅದಾನಿಗೆ ಇನ್ನೊಂದು‌ ಗಿಫ್ಟ್!:‌ ಧಾರಾವಿ ಯೋಜನೆ ಬಗ್ಗೆ ಕಾಂಗ್ರೇಸ್

ಮೋದಿಯಿಂದ ತಮ್ಮ ಸ್ನೇಹಿತ ಅದಾನಿಗೆ ಇನ್ನೊಂದು‌ ಗಿಫ್ಟ್!:‌ ಧಾರಾವಿ ಯೋಜನೆ ಬಗ್ಗೆ ಕಾಂಗ್ರೇಸ್

0

ಬೆಂಗಳೂರು: “ಮೋದಿ ಮೇಡ್ ಮೊನೋಪೊಲಿಯಿಂದ (Modi Made  Monoploy – 3M) ಅದಾನಿ ಲಾಭ ಪಡೆದಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಿಯಮಗಳನ್ನು ಗಾಳಿಗೆ ತೂರಿ, ಮೂಲ ಬಿಡ್ಡರ್ ಅನ್ನು ಬದಲಾಯಿಸುವ ಮೂಲಕ ಧಾರಾವಿ ಮರುಅಭಿವೃದ್ಧಿ ಯೋಜನೆಯನ್ನು ಪ್ರಧಾನಿಯವರು ತಮ್ಮ ಆಪ್ತ ಸ್ನೇಹಿತನಿಗೆ ಹಸ್ತಾಂತರಿಸಿದ್ದಾರೆ. ಫಲಾನುಭವಿಗಳಿಗೆ ಇದರಿಂದ ಪ್ರಯೋಜನವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸುವಂತೆ ಮಹಾರಾಷ್ಟ್ರ ನಗರಾಭಿವೃದ್ಧಿ ಇಲಾಖೆಯನ್ನು ಒತ್ತಾಯಿಸಲಾಗಿದೆ,” ಎಂದು ಏಐಸಿಸಿ ಮುಖ್ಯ ಕಾರ್ಯದರ್ಶಿ, ಸಂಸದ ಜೈರಾಮ್‌ ರಮೇಶ್‌ ಆರೋಪಿಸಿದ್ದಾರೆ.

ತಮ್ಮ x ನಲ್ಲಿ ಈ ಬಗ್ಗೆ ಬರೆದಿದ್ದು, ಇದನ್ನು ಮೋದಿಯವರು ತಮ್ಮ ನೆಚ್ಚಿನ ವ್ಯಾಪಾರಿ ಸಂಸ್ಥೆಗೆ ನೀಡಿದ ಮತ್ತೊಂದು ‘ರೆವಿಡಿ – ಗಿಫ್ಟ್’ ಎಂದು ಕರೆದಿದ್ದಾರೆ.

“ಹಮ್ ಅದಾನಿ ಕೆ ಹೈ ಕೌನ್ (Hum Adani Ke Hain Kaun – HAHK) ಹೆಸರಿನಲ್ಲಿ 27 ಫೆಬ್ರವರಿ 2023 ಮತ್ತು 23 ಏಪ್ರಿಲ್ 2023 ರಂದು ಕೇಳಿದ ಸರಣಿ ಪ್ರಶ್ನಾವಳಿಯಲ್ಲಿ ಅದಾನಿ ಗ್ರೂಪ್‌ಗೆ 2022 ರಲ್ಲಿ ಕೇವಲ 5,069 ಕೋಟಿ ರುಪಾಯಿ ಬಿಡ್‌ಗೆ ಧಾರಾವಿ ಮರುಅಭಿವೃದ್ಧಿ ಯೋಜನೆಯನ್ನು ತೆಗೆದುಕೊಳ್ಳಲು ಹೇಗೆ ಅನುಮತಿ ನೀಡಿದಿರಿ ಎಂದು ಕೇಳಿದ್ದೆವು. ಇದು 2018 ರಲ್ಲಿ ಇದ್ದ ಗೆದ್ದಿರುವ ಮೂಲ ಬಿಡ್‌ಗಿಂತ 2,131 ಕೋಟಿ ರುಪಾಯಿ ಕಡಿಮೆ ಇದೆ. ಬಿಡ್‌ ಗೆದ್ದಿರುವವರನ್ನು ಹೊರಗಿಟ್ಟು ಇದ್ದನ್ನು ಮಾಡಲಾಗಿದೆ,” ಎಂದು ಜೈರಾಮ್‌ ರಮೇಶ್‌ ಆರೋಪಿಸಿದ್ದಾರೆ.

Maharashtra Urban Development Departmentಗೆ  Dharavi’s real estate Transferable Development Rights (TDR)  ಸೂಚ್ಯಂಕವನ್ನು ತೆಗೆದುಹಾಕುವ ಅಧಿಸೂಚನೆಯನ್ನು ಹೊರಡಿಸಲು ಒತ್ತಾಯಿಸಲಾಗಿದೆ. ಮುಂಬೈನ ಎಲ್ಲಾ ಬಿಲ್ಡರ್‌ಗಳು ತಮ್ಮ ಮೊದಲ 40% TDRಗಳನ್ನು ಅದಾನಿಯಿಂದ ಖರೀದಿಸುವಂತೆ ಹೇಳಲಾಗಿದೆ. ಈ ಮೂಲಕ ಧಾರಾವಿ ಯೋಜನೆಯಿಂದ ಅದಾನಿಗೆ, ಕೇವಲ ಅದಾನಿಗೆ ಮಾತ್ರ TDRಗಳ  ಮೌಲ್ಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜೈರಾಮ್‌ ತಿಳಿಸಿದ್ದಾರೆ.

ಟಿಡಿಆರ್‌ ಎಂದರೇನು?

TDR ಎನ್ನುವುದು ಇನ್ನೊಬ್ಬರಿಗೆ ಬೇಕಾದಾಗ ಕೊಡಬಹುದಾದ ಕ್ರೆಡಿಟ್. ಪ್ರಾಕೃತಿಕ, ಐತಿಹಾಸಿಕ ಮೊದಲಾದ ವಿಶೇಷತೆಗಳನ್ನು ಹೊಂದಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟಡ ನಿರ್ಮಿಸಲು ಇರುವ ತಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ಅನುಮತಿ ನೀಡುತ್ತದೆ. ಅಲ್ಲದೇ, ಹೀಗೆ ಬಿಟ್ಟುಕೊಟ್ಟರೆ ಅವರಿಗೆ ಬೇರೆ ಅನುಮೋದಿತ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯಗಳನ್ನು ಮಾಡುವ ಅವಕಾಶವನ್ನು ನೀಡಲಾಗುತ್ತದೆ.  

ಈ ಸೂಚ್ಯಂಕವನ್ನು ತೆಗೆದುಹಾಕುವುದರಿಂದ ಧಾರಾವಿಯಂತಹ ಕಡಿಮೆ-ವೆಚ್ಚದ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ TDRS ಅನ್ನು ಬಾಂದ್ರಾ, ದಕ್ಷಿಣ ಮುಂಬೈ ಮತ್ತು ಜುಹು ಮುಂತಾದ ಪ್ರಮುಖ ಸ್ಥಳಗಳಲ್ಲಿ ದುಬಾರಿ ರಿಯಲ್ ಎಸ್ಟೇಟ್ ಅನ್ನು ಅಭಿವೃದ್ಧಿಪಡಿಸಲು ಬಳಸಬಹುದು. ಇದರಿಂದ ಈಗಾಗಲೇ ದುಬಾರಿಯಾಗಿರುವ ಮುಂಬೈನ ಹೌಸಿಂಗ್‌ ಮಾರ್ಕೆಟ್‌ನ ಬೆಲೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಈ ನೀತಿಯ ಬದಲಾವಣೆಯಿಂದ ಲಾಭವಾಗುವುದು ಅದಾನಿಗೆ ಮಾತ್ರ, ಇದು ಪ್ರಧಾನ ಮಂತ್ರಿಯವರು ತಮ್ಮ ಪ್ರೀತಿಯ ಬಿಸಿನೆಸ್‌ ಗ್ರೂಪಿಗೆ ನೀಡಿದ ಉಡುಗೊರೆ ಎಂದು ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ. “ಬಿಜೆಪಿ ಮತ್ತು ಅದಾನಿ ನಡುವಿನ ಈ ಬಲವಾದ ಚುನಾವಣಾ ಬಾಂಧವ್ಯದ ಸ್ವರೂಪವೇನು? ಜಂಟಿ ಸಂಸದೀಯ ಸಮಿತಿ ಮಾತ್ರ ಇದರ ಹಿಂದಿನ ಸಂಪೂರ್ಣ ಸತ್ಯವನ್ನು ಬಿಚ್ಚಿಡಬಲ್ಲದು,” ಎಂದು ಹೇಳಿದ್ದಾರೆ.

You cannot copy content of this page

Exit mobile version