Tuesday, July 9, 2024

ಸತ್ಯ | ನ್ಯಾಯ |ಧರ್ಮ

ರಷ್ಯಾ ಅಧ್ಯಕ್ಷನನ್ನು ಅಪ್ಪಿಕೊಂಡು ಶಾಂತಿ ಮಾತುಕತೆಗೆ ದೊಡ್ಡ ಹೊಡೆತ ನೀಡಿದ ಮೋದಿ: ಉಕ್ರೇನ್‌ ಅಧ್ಯಕ್ಷ

ಕೀವ್: ರಷ್ಯಾದ ರಕ್ತ ಸಿಕ್ತ ಅಧ್ಯಕ್ಷನನ್ನು ಆಲಂಗಿಸಿಕೊಳ್ಳುವ ಮೂಲಕ ಜಾಗತಿಕವಾಗಿ ನಡೆಯುತ್ತಿರುವ ಶಾಂತಿ ಮಾತುಕತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಹೊಡೆತ ನೀಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಆರೋಪಿಸಿದ್ದಾರೆ.

ʼವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಯಕ, ವಿಶ್ವದ ಅತ್ಯಂತ ರಕ್ತಸಿಕ್ತ ಕ್ರಿಮಿನಲ್‌ನನ್ನು ಆಲಂಗಿಸಿರುವುದು ವಿಪರ್ಯಾಸʼ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್‌ ಭೇಟಿ ಕುರಿತು ಝಲೆನೆಸ್ಕಿ ತಮ್ಮ ಅಬಿಪ್ರಾಯವನ್ನು ಎಕ್ಸ್‌ ಖಾತೆಯ ಪೋಸ್ಟ್‌ ಮೂಲಕ ಹಂಚಿಕೊಂಡಿದ್ದಾರೆ. ಉಕ್ರೇನ್ ಅತಿದೊಡ್ಡ ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾ ನಡೆಸಿರುವ ಕ್ಷಿಪಣಿ ದಾಳಿಯ ಬೆನ್ನಲ್ಲೇ ಝಲೆನ್‌ಸ್ಕಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

‘ರಷ್ಯಾದ ಕ್ರೂರ ಕ್ಷಿಪಣಿ ದಾಳಿಯ ಪರಿಣಾಮ ಉಕ್ರೇನ್‌ನಲ್ಲಿ 37 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಮಕ್ಕಳು ಸೇರಿದ್ದಾರೆ. 13 ಮಕ್ಕಳು ಸೇರಿ 170 ಮಂದಿ ಗಾಯಗೊಂಡಿದ್ದಾರೆ. ಯುವ ಕ್ಯಾನ್ಸ್‌ರ್ ರೋಗಿಗಳನ್ನು ಗುರಿಯಾಗಿಸಿಕೊಂಡು ಮಕ್ಕಳ ಆಸ್ಪತ್ರೆ ಮೇಲೂ ರಷ್ಯಾ ದಾಳಿ ನಡೆಸಿದೆ. ಎಷ್ಟೋ ಮಕ್ಕಳು ಅವಶೇಷಗಳಡಿ ಹೂತು ಹೋಗಿದ್ದಾರೆ’ ಎಂದು ಹೇಳಿದ್ದಾರೆ.

‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕರೊಬ್ಬರು ವಿಶ್ವದ ಅತ್ಯಂತ ರಕ್ತಸಿಕ್ತ ಕ್ರಿಮಿನಲ್‌ನನ್ನು ಆಲಂಗಿಸಿಕೊಳ್ಳುತ್ತಿರುವುದನ್ನು ನೋಡುವುದು ಶಾಂತಿಯ ಪ್ರಯತ್ನಗಳಿಗೆ ದೊಡ್ಡ ಹೊಡೆತವಾಗಿದೆ. ಇದನ್ನು ಜಗತ್ತು ಗಮನಿಸುತ್ತಿದೆʼ ಎಂದು ಅವರು ಹೇಳಿದ್ದಾರೆ. ಅವರ ಟ್ವೀಟ್‌ ಲಿಂಕ್‌ ಇಲ್ಲಿದೆ.

Related Articles

ಇತ್ತೀಚಿನ ಸುದ್ದಿಗಳು