Home ರಾಜಕೀಯ ದೇವರು ಅದಾನಿ ಮತ್ತು ಅಂಬಾನಿಗೆ ಲಾಭ ಮಾಡಿಕೊಡಲು ಮೋದಿಯನ್ನು ಕಳುಹಿಸಿದ್ದಾನೆ: ರಾಹುಲ್ ಗಾಂಧಿ

ದೇವರು ಅದಾನಿ ಮತ್ತು ಅಂಬಾನಿಗೆ ಲಾಭ ಮಾಡಿಕೊಡಲು ಮೋದಿಯನ್ನು ಕಳುಹಿಸಿದ್ದಾನೆ: ರಾಹುಲ್ ಗಾಂಧಿ

0

ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಿದ್ದಕ್ಕಾಗಿ ವಯನಾಡು ಜನತೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಬುಧವಾರ ವಯನಾಡಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವಯನಾಡ್ ಉಳಿಸಿಕೊ‍ಳ್ಳಬೇಕೋ ಅಥವಾ ರಾಯ್ ಬರೇಲಿ ಉಳಿಸಿಕೊಳ್ಳಬೇಕೋ ಎನ್ನುವ ಸಂದಿಗ್ಧ ಸ್ಥಿತಿಯಲ್ಲಿ ತಾನಿರುವುದಾಗಿ ಅವರು ಹೇಳಿದರು. ಎರಡೂ ಕ್ಷೇತ್ರಗಳ ಜನತೆಗೆ ನೆಮ್ಮದಿ ತರುವ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ದುರದೃಷ್ಟವಶಾತ್ ನಾನು ಪ್ರಧಾನಿ ಮೋದಿಯವರಂತೆ ದೇವರಿಂದ ಕಳುಹಿಸಲ್ಪಟ್ಟಿಲ್ಲ ನಾನು ಸಾಮಾನ್ಯ ಮನುಷ್ಯ ಎಂದು ಅವರು ಹೇಳಿಕೊಂಡರು. ತನ್ನನ್ನು ದೇವರು ಈ ಜಗತ್ತಿಗೆ ಕಳುಹಿಸಿದ್ದಾನೆ ಎಂದು ಪ್ರಧಾನಿ ಮೋದಿ ಹೇಳಿರುವುದನ್ನು ರಾಹುಲ್ ಜನರಿಗೆ ನೆನಪಿಸಿದರು.

ಆದರೆ ಈ ದೇವರು ಕಳುಹಿಸಿದ ಪ್ರಧಾನಿ ಕೇವಲ ಅದಾನಿ ಮತ್ತು ಅಂಬಾನಿ ಪರವಾಗಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ರಾಹುಲ್‌ ಕುಟುಕಿದರು. ಮುಂಬೈ ವಿಮಾನ ನಿಲ್ದಾಣ, ಲಖನೌ ವಿಮಾನ ನಿಲ್ದಾಣ ಮತ್ತು ವಿದ್ಯುತ್ ಸ್ಥಾವರಗಳನ್ನು ಅದಾನಿಗೆ ಹಸ್ತಾಂತರಿಸುವಂತೆ ಬಹುಶಃ ದೇವರೇ ಮೋದಿಯವರಿಗೆ ಹೇಳಿರಬೇಕು ಎಂದು ಅವರು ಹೇಳಿದರು. ದೇಶದ ಎಲ್ಲಾ ಬಡವರು ಮತ್ತು ವಯನಾಡಿನ ಜನರೇ ನನಗೆ ದೇವರುಗಳು ಎಂದು ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಹೇಳಿದರು.

You cannot copy content of this page

Exit mobile version