Friday, April 26, 2024

ಸತ್ಯ | ನ್ಯಾಯ |ಧರ್ಮ

ಮೊಹಮ್ಮದ್ ಶಮಿ ಅವರಿಗೆ ರಾಷ್ಟ್ರಪತಿಯವರಿಂದ ಅರ್ಜುನ ಪ್ರಶಸ್ತಿ ಪ್ರಧಾನ

ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರಿಗೆ ಜನವರಿ 9 ಮಂಗಳವಾರದಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಕಳೆದ ವರ್ಷ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅವರ ರೋಮಾಂಚಕಾರಿ ಪ್ರದರ್ಶನದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶಮಿ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡಿತ್ತು.

“ಈ ಪ್ರಶಸ್ತಿ ಒಂದು ಕನಸು, ಬದುಕಿಡೀ ದುಡಿದೂ ಕೆಲವರಿಗೆ ಈ ಪ್ರಶಸ್ತಿ ಲಭಿಸಿಲ್ಲ. ಈ ಪ್ರಶಸ್ತಿಗೆ ನಾನು ನಾಮನಿರ್ದೇಶನಗೊಂಡಿರುವುದು ನನಗೆ ಖುಷಿ ತಂದಿದೆ” ಎಂದು ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಶಮಿ ಹೇಳಿದ್ದರು. ಶಮಿ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಕೇವಲ ಏಳು ಪಂದ್ಯಗಳಿಂದ 24 ವಿಕೆಟ್‌ಗಳನ್ನು ಪಡೆದಿದ್ದರು ಮತ್ತು ಈ ಹೈ-ವೋಲ್ಟೇಜ್ ಪಂದ್ಯಾವಳಿಯನ್ನು ವಿಶ್ವಕಪ್ 2023ರ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮುವ ಮೂಲಕ ಮುಗಿಸಿದರು.

2023ರಲ್ಲಿ ಒಟ್ಟು 26 ಕ್ರೀಡಾಪಟುಗಳು ತಮ್ಮ ಉತ್ತಮ ಪ್ರದರ್ಶನಕ್ಕಾಗಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಪಡೆದರು. ಈ ಪಟ್ಟಿಯಲ್ಲಿ ಏಷ್ಯನ್ ಗೇಮ್ಸ್ 2023ರ ಅಥ್ಲೀಟ್‌ಗಳು ಪ್ರಾಬಲ್ಯ ಸಾಧಿಸಿದ್ದಾರೆ. ಚೀನಾದಲ್ಲಿ ನಡೆದ ಏಷ್ಯನ್‌ ಗೇಮ್ ಸ್ಪರ್ಧೆಯಲ್ಲಿ ಭಾರತವು‌ ದಾಖಲೆಯ 107 ಪದಕಗಳ ಗೆದ್ದುಕೊಂಡಿತು.

arjuna award, mohammed shami, mohammed shami arjuna award, mohammed shami arjuna awards, arjuna award 2019, ravindra jadeja honored by great award, arjuna awards 2019 in telugu,#pak media & public reaction on mohamad shami arjuna award, poonam yadav arjun award video, arjuna award nominations, poonam yadav awarded arjuna award, rajiv gandhi khel ratna award, president sports awards, arjuna award nomination 2018, poonam yadav arjuna award, arjuna award poonam yadav

Related Articles

ಇತ್ತೀಚಿನ ಸುದ್ದಿಗಳು