Home ದೇಶ ’75 ವರ್ಷಕ್ಕೆ ರಾಜಕೀಯ ನಿವೃತ್ತಿ’ : ವಿರೋಧ ಪಕ್ಷಗಳಿಗೆ ತುತ್ತಾದ ಮೋಹನ್ ಭಾಗವತ್ ಹೇಳಿಕೆ, ಮೋದಿ...

’75 ವರ್ಷಕ್ಕೆ ರಾಜಕೀಯ ನಿವೃತ್ತಿ’ : ವಿರೋಧ ಪಕ್ಷಗಳಿಗೆ ತುತ್ತಾದ ಮೋಹನ್ ಭಾಗವತ್ ಹೇಳಿಕೆ, ಮೋದಿ ನಡೆ ಏನು?

0

ರಾಜಕೀಯ ನಾಯಕರು 75 ವರ್ಷಕ್ಕೆ ನಿವೃತ್ತಿ ಘೋಷಿಸಬೇಕು ಎಂಬ ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಹೇಳಿಕೆಯು ರಾಜಕೀಯ ವಿವಾದವನ್ನು ಸೃಷ್ಟಿಸಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ ಈ ಹೇಳಿಕೆ ನೇರವಾಗಿ ನರೇಂದ್ರ ಮೋದಿಯನ್ನು ಗುರುತಾಗಿಸಿಯೇ ಹೇಳಿದ್ದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಾಗ್ಪುರದಲ್ಲಿ ನಡೆದ ಹಿರಿಯ ಆರ್‌ಎಸ್‌ಎಸ್ ನಾಯಕ ಮೊರೋಪಂತ್ ಪಿಂಗಳೆ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮೋಹನ್ ಭಾಗವತ್ ಈ ಹೇಳಿಕೆ ನೀಡಿದ್ದರು. ಕಾರ್ಯಕ್ರಮದ ಶ್ರೀ ಪಿಂಗಳೆ ಅವರನ್ನು ಉಲ್ಲೇಖಿಸಿ, ಭಾಗವತ್ ಅವರು ವೇದಿಕೆಯಲ್ಲಿ ಮಾತನಾಡಲು ಕೇಳಿದಾಗ, ಜನರು ಎದ್ದು ನಿಂತಿದ್ದರು. ಆದರೆ ನಾನು ನಿಂತಾಗ ಜನರು ನನ್ನನ್ನು ನೋಡಿ ನಗಲು ಪ್ರಾರಂಭಿಸುತ್ತಾರೆ. ಏಕೆಂದರೆ ಜನರು ನನ್ನನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ನನಗೆ ಅನಿಸುತ್ತದೆ. ನೀವು 75 ನೇ ವಯಸ್ಸಿನಲ್ಲಿ ಈ ಶಾಲನ್ನು ನನಗೆ ಕೊಟ್ಟಿದ್ದೀರಿ, ಆದರೆ ಅದರ ಅರ್ಥ ನನಗೆ ತಿಳಿದಿದೆ. 75 ನೇ ವಯಸ್ಸಿನಲ್ಲಿ ಶಾಲು ಹೊದಿಸಿದಾಗ, ಈಗ ನೀವು ವಯಸ್ಸಾಗಿದ್ದೀರಿ ಎಂದರ್ಥ ಎಂದು ಪಿಂಗಳೆಯವರು ಹೇಳಿಕೆ ನೀಡಿದ್ದರು.

ಮೋಹನ್ ಭಾಗವತ್ ಅವರ ಮಾತಿನ ಸರದಿ ಬಂದಾಗಲೂ ಸಹ 75 ವರ್ಷ ವಯಸ್ಸಿನ ಅಂಶವನ್ನೇ ಒತ್ತಿ ಹೇಳಿದ್ದಾರೆ. ಯಾರಾದರೂ ನಿಮಗೆ 75 ವರ್ಷ ತುಂಬಿದಾಗ ಶುಭಾಶಯ ಕೋರಿದರೆ ನೀವು ಸಕ್ರಿಯವಾಗಿರುವುದನ್ನು ನಿಲ್ಲಿಸಿ ಇತರರಿಗೆ ದಾರಿ ಮಾಡಿಕೊಡಬೇಕು ಎಂದು ಅವರು ಹೇಳಿದರು. 75 ವರ್ಷಗಳ ಶಾಲು ನಿಮ್ಮ ಮೇಲೆ ಹೊದಿಸಿದರೆ, ನೀವು ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ್ದೀರಿ ಮತ್ತು ಪಕ್ಷದಿಂದ ಕೆಳಗಿಳಿದು ಇತರರಿಗೆ ಕೆಲಸ ಮಾಡಲು ಬಿಡಬೇಕು ಎಂಬ ಪಿಂಗ್ಲೆ ಅವರ ಹೇಳಿಕೆಯನ್ನು ಭಾಗವತ್‌ ನಿರ್ದಿಷ್ಟವಾಗಿ ಉಲ್ಲೇಖಿಸಿದರು.

ಮೋದಿ 75 ವರ್ಷ ತುಂಬಿದ ಮೇಲೆ ಅಧಿಕಾರ ತ್ಯಜಿಸುತ್ತಾರೆ ಎಂಬ ಮಾತು “ತುಂಬಾ ಅಕಾಲಿಕ” ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಈ ಹೇಳಿಕೆ ವಿರೋಧ ಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ. ಶಿವಸೇನೆ (ಯುಬಿಟಿ) ರಾಜ್ಯಸಭಾ ಸದಸ್ಯ ಸಂಜಯ್ ರಾವತ್, ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಜಸ್ವಂತ್ ಸಿಂಗ್ ಅವರಂತಹ ನಾಯಕರು 75 ವರ್ಷ ತುಂಬಿದ ನಂತರ ನಿವೃತ್ತಿ ಹೊಂದುವಂತೆ ನರೇಂದ್ರ ಮೋದಿಯೇ ಬಲವಂತವಾಗಿ ಹೇಳಿದ್ದರು. ಈಗ ನರೇಂದ್ರ ಮೋದಿ ನಿವೃತ್ತಿಯ ಹೊಸ್ತಿಲಲ್ಲಿ ಇದ್ದಾರೆ ಎಂದು ಅಣಕಿಸಿ ಹೇಳಿದ್ದಾರೆ.

You cannot copy content of this page

Exit mobile version