Friday, August 23, 2024

ಸತ್ಯ | ನ್ಯಾಯ |ಧರ್ಮ

ಮೂಡ್‌ ಆಫ್‌ ದಿ ನೇಷನ್:‌ ಮೋದಿಯ ನಂತರ ಯಾರು? ಜನರು ಏನಂತಾರೆ?

ಹೊಸದೆಹಲಿ: ಬಿಜೆಪಿಯಲ್ಲಿ 75 ವರ್ಷ ತುಂಬಿದ ನಂತರ ರಾಜಕೀಯ ನಿವೃತ್ತಿ ಪಡೆಯುವ ಅನಧಿಕೃತ ನಿಯಮ ಮುಂದುವರಿದಿದೆ.

ಇನ್ನು ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ನಿಬಂಧನೆ ಅನುಸರಿಸಿ ಮೋದಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರೆ ಆ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ.

ಈ ಹಿನ್ನಲೆಯಲ್ಲಿ ‘ಇಂಡಿಯಾ ಟುಡೇ’ ಮೂಡ್ ಆಫ್ ದಿ ನೇಷನ್ ಎಂಬ ಸಮೀಕ್ಷೆ ನಡೆಸಿದೆ. ಯಾವುದೇ ಬಿಜೆಪಿ ನಾಯಕರಿಗೆ ಗಮನಾರ್ಹ ಜನಬೆಂಬಲವಿಲ್ಲ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಅಮಿತ್ ಶಾಗೆ ಶೇ.25 ಹಾಗೂ ಸಿಎಂ ಯೋಗಿಗೆ ಶೇ.19 ಬೆಂಬಲ ಸಿಕ್ಕಿದೆ. ಈ ಸಮೀಕ್ಷೆಯ ಪ್ರಕಾರ ನಿತಿನ್ ಗಡ್ಕರಿ ಪ್ರಧಾನಿಯಾಗಬೇಕು ಎಂದು ಶೇಕಡಾ 13 ರಷ್ಟು ಜನರು, ರಾಜನಾಥ್ ಸಿಂಗ್‌ಗೆ ಶೇಕಡಾ 5 ರಷ್ಟು ಜನರು ಮತ್ತು ಶಿವರಾಜ್ ಸಿಂಗ್ ಚೌಹಾಣ್ ಆಗಬೇಕೆಂದು ಶೇಕಡಾ 5 ರಷ್ಟು ಜನರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page