Home ರಾಜ್ಯ ಆರು ತಿಂಗಳಲ್ಲಿ 2.3 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣ, 19 ರೇಬಿಸ್ ಸಾವು ಪ್ರಕರಣ...

ಆರು ತಿಂಗಳಲ್ಲಿ 2.3 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣ, 19 ರೇಬಿಸ್ ಸಾವು ಪ್ರಕರಣ ದಾಖಲು

0

ಕರ್ನಾಟಕದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 2.3 ಲಕ್ಷಕ್ಕೂ ಹೆಚ್ಚು ಬೀದಿ ನಾಯಿ ಕಡಿತ ಪ್ರಕರಣಗಳು ಮತ್ತು 19 ರೇಬೀಸ್ ಸೋಂಕಿನಿಂದಾದ ಸಾವುಗಳು ದಾಖಲಾಗಿವೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೀವ್ರ ಹೆಚ್ಚಳವನ್ನು ಸೂಚಿಸುತ್ತದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.

2024 ರಲ್ಲಿ, ರಾಜ್ಯದಲ್ಲಿ 3.6 ಲಕ್ಷ ನಾಯಿ ಕಡಿತ ಪ್ರಕರಣಗಳು ಮತ್ತು 42 ರೇಬೀಸ್ ಸಾವುಗಳು ವರದಿಯಾಗಿತ್ತು.

ರಾಜ್ಯ ಆರೋಗ್ಯ ಇಲಾಖೆಯ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (IDSP) ಪಿಟಿಐ ಜೊತೆ ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ವರ್ಷ ಜನವರಿ 1 ರಿಂದ ಜೂನ್ 30 ರವರೆಗೆ ಕರ್ನಾಟಕದಲ್ಲಿ 2,31,091 ನಾಯಿ ಕಡಿತ ಪ್ರಕರಣಗಳು ಮತ್ತು 19 ರೇಬೀಸ್ ಸಾವುಗಳು ದಾಖಲಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿನ ನಾಯಿ ಕಡಿತ ಪ್ರಕರಣಗಳಿಗೆ ಹೋಲಿಸಿದರೆ, 1,69,672 ನಾಯಿ ಕಡಿತ ಪ್ರಕರಣಗಳು ಮತ್ತು 18 ರೇಬೀಸ್ ಸಾವುಗಳು ಸಂಭವಿಸಿತ್ತು.

2024 ರ ಇದೇ ಅವಧಿಗೆ ಹೋಲಿಸಿದರೆ ನಾಯಿ ಕಡಿತದ ಪ್ರಕರಣಗಳು ಸರಿಸುಮಾರು ಶೇಕಡಾ 36.20 ರಷ್ಟು ಹೆಚ್ಚಾಗಿದೆ ಎಂದು ತೋರಿಸುತ್ತದೆ. ಈ ವಾರ ಹುಬ್ಬಳ್ಳಿಯ ಬೀದಿಗಳಲ್ಲಿ ಎರಡು ಬೀದಿ ನಾಯಿಗಳು ಮೂರು ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿ ಎಳೆದೊಯ್ಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದಿಂದ ಇತ್ತೀಚಿನ ಕಳವಳ ಹೆಚ್ಚಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಮಾತನಾಡಿ, ಪರಿಸ್ಥಿತಿ ನಿಯಂತ್ರಣ ತಪ್ಪಿಲ್ಲ ಎಂದು ಹೇಳಿದ್ದಾರೆ.

“ಪ್ರಕರಣಗಳನ್ನು ಹೆಚ್ಚು ನಿಖರವಾಗಿ ವರದಿ ಮಾಡಲಾಗುತ್ತಿರುವುದರಿಂದ ಈಗ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿರಬಹುದು. ಇದಕ್ಕೂ ಮೊದಲು ಇದೇ ರೀತಿಯ ಘಟನೆಗಳು ಸಂಭವಿಸುತ್ತಿದ್ದವು, ಆದರೆ ಈಗ ಅಂಕಿ ಅಂಶಗಳು ನಿಖರವಾಗಿ ದಾಖಲಾಗುತ್ತಿವೆ” ಎಂದು ಹರ್ಷಾ ಗುಪ್ತಾ ಅವರು ಹೇಳಿದರು.

“ನಾವು ಜಾಗೃತಿ ಮೂಡಿಸುವುದು, ನಾಯಿ ಕಡಿತದ ಬಲಿಪಶುಗಳಿಗೆ ಹೇಗೆ ಚಿಕಿತ್ಸೆ ನೀಡಬೇಕೆಂದು ವೈದ್ಯರಿಗೆ ತರಬೇತಿ ನೀಡುವುದು, ಸಾಕಷ್ಟು ಪ್ರಮಾಣದಲ್ಲಿ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಬೀದಿ ನಾಯಿಗಳ ಸಂಖ್ಯೆಯನ್ನು ನಿರ್ವಹಿಸಲು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಆಡಳಿತಗಳಿಗೆ ಸೂಚನೆ ನೀಡುವುದರ ಮೇಲೆ ಕೇಂದ್ರೀಕರಿಸಿದ್ದೇವೆ” ಎಂದು ಹೇಳಿದ್ದಾರೆ.

ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳು ಎಲ್ಲಾ ಶಂಕಿತ, ಸಂಭವನೀಯ ಮತ್ತು ದೃಢಪಡಿಸಿದ ಮಾನವ ರೇಬೀಸ್ ಪ್ರಕರಣಗಳನ್ನು ರಾಜ್ಯ ಆರೋಗ್ಯ ಇಲಾಖೆಗೆ ವರದಿ ಮಾಡುವುದು ಕಡ್ಡಾಯವಾಗಿದೆ. ಅಂಕಿಅಂಶಗಳ ಪ್ರಕಾರ, ವಿಜಯಪುರದಲ್ಲಿ ಅತಿ ಹೆಚ್ಚು ನಾಯಿ ಕಡಿತದ ಪ್ರಕರಣಗಳು (15,527) ವರದಿಯಾಗಿವೆ, ನಂತರ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವ್ಯಾಪ್ತಿಯಲ್ಲಿ 13,831 ಪ್ರಕರಣಗಳು, ಹಾಸನ (13,388), ದಕ್ಷಿಣ ಕನ್ನಡ (12,524), ಮತ್ತು ಬಾಗಲಕೋಟೆ (12,392) ವರದಿಯಾಗಿವೆ.

ಈ ವರ್ಷದ ಜನವರಿ ಮತ್ತು ಜೂನ್ ನಡುವೆ ವರದಿಯಾದ 19 ರೇಬೀಸ್ ಸಾವುಗಳಲ್ಲಿ, ಬೆಂಗಳೂರು ನಗರವು ಅತಿ ಹೆಚ್ಚು ಒಂಬತ್ತು ಪ್ರಕರಣಗಳೊಂದಿಗೆ ವರದಿಯಾಗಿದೆ. ನಂತರದ ಸ್ಥಾನ ಬೆಳಗಾವಿ ಐದು ಪ್ರಕರಣ ಕಂಡುಬಂದಿದೆ. ಬಾಗಲಕೋಟೆ, ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗದಲ್ಲಿ ತಲಾ ಒಂದು ಸಾವು ವರದಿಯಾಗಿದೆ. ಕಡಿಮೆ ನಾಯಿ ಕಡಿತದ ಪ್ರಕರಣಗಳು ಯಾದಗಿರಿ (1,132), ನಂತರ ಚಾಮರಾಜನಗರ (1,810) ಮತ್ತು ಕೊಡಗು (2,523) ವರದಿಯಾಗಿವೆ.

You cannot copy content of this page

Exit mobile version