ಇಡೀ ಮಹಾರಾಷ್ಟ್ರದಾದ್ಯಂತ ಗಣೇಶ ವಿಸರ್ಜನೆ ಸಮಯದಲ್ಲಿ ಈವರೆಗೆ 9 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈವರೆಗೆ ಹಲವು ಮಂದಿ ನಾಪತ್ತೆಯಾಗಿದ್ದರು. ಪುಣೆ, ನಾಂದೇಡ್ ಹಾಗೂ ಮುಂಬೈನಲ್ಲಿ ಗಣಪತಿ ವಿಸರ್ಜನೆ ಮಾಡಲು ಹೋದ ಅನೇಕ ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ.. ಕೆಲವರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪುಣೆ ಜಿಲ್ಲೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ನಾಂದೇಡ್‌ನಲ್ಲಿ ಗಣಪತಿ ವಿಸರ್ಜನೆ ಮಾಡಲು ಹೋದ ಮೂವರಲ್ಲಿ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ .ಮತ್ತೊಂದೆಡೆ, ಮುಂಬೈನ ಸಕಿನಾಕಾ ಪ್ರದೇಶದಲ್ಲಿ ಮೆರವಣಿಗೆಯ ಸಮಯದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ ಸಾವನ್ನಪ್ಪಿದ್ದಾರೆ. ಐದು ಜನರು ಗಾಯಗೊಂಡಿದ್ದಾರೆ. ಈ ಘಟನೆಗಳು ಗಣೇಶೋತ್ಸವದ ಉತ್ಸಾಹದಲ್ಲಿದ್ದ ಜನರು ಶೋಕಸಾಗರದಲ್ಲಿ ಮುಳುಗುವಂತಾಯಿತು.
ವಾಕಿ ಖುರ್ದ್‌ನ ಭಾಮಾ ನದಿಯಲ್ಲಿ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ್ದಾರೆ . ಕೊಯಾಲಿಯ 20 ವರ್ಷದ ವಿದ್ಯಾರ್ಥಿ ಮತ್ತು ಉತ್ತರ ಪ್ರದೇಶದ 19 ವರ್ಷದ ಯುವಕಎಂದುಗುರುತಿಸಲಾಗಿದೆ . ಈ ಯುವಕರಲ್ಲಿ ಒಬ್ಬರಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ. ಇದಲ್ಲದೆ, ಬಿರ್ದವಾಡಿಯ ಬಾವಿಯಲ್ಲಿ ಮತ್ತು ಶೆಲ್ಪಿಂಪಾಲ್ಗಾಂವ್‌ನ ಭೀಮಾ ನದಿಯಲ್ಲಿ ತಲಾ ಒಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ . ಭೀಮಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಗೆ 45 ವರ್ಷ ವಯಸ್ಸಾಗಿತ್ತು. ಈ ಹೃದಯವಿದ್ರಾವಕ ಘಟನೆಗಳು ಗಣೇಶೋತ್ಸವದ ಉತ್ಸಾಹವನ್ನು ಕುಗ್ಗಿಸಿವೆ.